ನಿಮ್ಮ ಬಳಿ ಇರುವ ಮೊಬೈಲ್ ಫೋನ್ ಮಾರಾಟ ಮಾಡಿ ಮತ್ತೆ ಈಗಷ್ಟೇ ಮಾರುಕಟ್ಟೆಗೆ ಬಂದಿರುವ ಹೊಸ ಮೊಬೈಲ್ ಅನ್ನು ಕೊಂಡುಕೊಳ್ಳಬೇಕೆಂದಿದ್ದರೆ ಈ ಲೇಖನ ನಿಮಗೆ ದಾರಿ ದೀಪವಾಗುತ್ತದೆ. ಹೌದು ನಿಮ್ಮ ಬಳಿ ಇರುವ ಮೊಬೈಲ್ ಫೋನ್ ಒಳ್ಳೆಯ ಬೆಲೆಗೆ ಮಾರಾಟವಾದರೇ ನಿಮ್ಮ ನೆಚ್ಚಿನ ಮತ್ತೊಂದು ಮೊಬೈಲ್ ಕೊಳ್ಳಲು ಸಾಧ್ಯ ಇಲ್ಲವಾದರೆ ನಮ್ಮ ಭಾರತೀಯರು ಅದಕ್ಕೆ ಫುಲ್ಸ್ಟಾಪ್ ಹಾಕಿ ಮತತೆ ಅದರ ಬಗ್ಗೆ ಯೋಚನೆ ಕೂಡ ಮಾಡುವುದಿಲ್ಲ. ಹಾಗಾಗೀ ನಿಮ್ಮ ಮೊಬೈಲ್ ಅನ್ನು ಕಡಿಮೆ ಬೆಲೆಗೆ ಕೇಳಿದವರಿಗೆ ಕೊಡಲು ಹೋಗಬೇಡಿ ಇಲ್ಲಿ ನಾವು ಹೇಳೊ ವೆಬ್ಸೈಟ್ಗಳಲ್ಲಿ ನಿಮ್ಮ ಮೊಬೈಲ್ ಅನ್ನು ಸೂಕ್ತ ಬೆಲೆಗೆ ತೆಗೆದುಕೊಳ್ಳುತ್ತಾರೆ. ಹಾಗಾಗೀ ನಿಮ್ಮ ಹಳೆಯ ಮೊಬೈಲ್ ಅನ್ನು ಮೂಲೆಗೆ ಹಾಕಿ ಆಕರ್ಷಕ ಫೀಚರ್ಗಳುಳ್ಳ ಹೊಸ ಮೊಬೈಲ್ ಖರೀದಿ ಮಾಡುತ್ತಿದ್ದರೆ ಅಥವ ಈ ಸಂದರ್ಭ ತಮ್ಮ ಹಳೆಯ ಫೋನುಗಳನ್ನು ಎಷ್ಟು ಸಿಗುತ್ತೊ ಅಷ್ಟು ಕಡಿಮೆ ಬೆಲೆಗೆ ಮಾರಾಟ ಮಾಡಿಬಿಡುವವರಿದ್ದರೆ ಇಲ್ಲಿ ನಾವು ಹೇಳಿದಂತೆ ಮಾಡಿದರೆ ನಿಮ್ಮ ಹಳೆಯ ಮೊಬೈಲ್ಗೆ ಒಳ್ಳೆಯ ಬೆಲೆ ಸಿಗುತ್ತದೆ.
ನಾವು ಹೇಳುವ ಕೆಲವು ವೆಬ್ಸೈಟ್ಗಳಲ್ಲಿ ನಿಮ್ಮ ಹಳೆಯ ಮೊಬೈಲ್ ಫೋನ್ಗಳನ್ನು ಮಾರಾಟ ಮಾಡಿ ಒಳ್ಳೆಯ ಬೆಲೆಯನ್ನು ತೆಗೆದುಕೊಂಡು ನಿಮ್ಮ ಹೊಸ ಮೊಬೈಲ್ ಮೇಲಿನ ಸ್ವಲ್ಪ ಹೊರೆಯನ್ನು ಇಳಿಸಿ.
- ಯಂತ್ರ ಎಂಬ ವೆಬ್ಸೈಟ್ನಲ್ಲಿ ನಿಮಗೆ ಒಳ್ಳೆಯ ಬೆಲೆ ಸಿಗುವುದರ ಜೊತೆಗೆ ಇದು ಗ್ಯಾರಂಟಿ ವೆಬ್ಸೈಟ್ ಆಗಿದ್ದು ಯಾವುದೇ ರೀತಿಯ ಮೋಸ ಇಲ್ಲಿ ನಡೆಯುವುದಿಲ್ಲ ನಿಮ್ಮ ಬಳಿ ಇರುವ ಹಳೆಯ ಸ್ಮಾಟ್ರ್ಫೊನ್ ಮಾರಾಟ ಮಾಡಲು ಇದೊಂದು ಉತ್ತಮ ವೇದಿಕೆಯಾಗಿದೆ. http://www.yaantra.com/ ಮೂಲಕ ಎಲೆಕ್ಟ್ರಾನಿಕ್ ಗ್ಯಾಜೆಟ್ ಮಾರಾಟ ಮಾಡಬಹುದಾಗಿದೆ. ಅಂತೆಯೆ ಹಳೆಯ ಗ್ಯಾಜೆಟ್ಗಳನ್ನು ನಿರ್ದಿಷ್ಟ ಮೊತ್ತಕ್ಕೆ ಮಾರಾಟ ಮಾಡಲು ಕ್ಯಾಶಿಫೈ ವೇದಿಕೆ ಸೃಷ್ಟಿಸಿದೆ.
- https://www.cashify.in/ ಮೂಲಕ ಮಾರಾಟ ಮಾಡಬಹುದಾಗಿದೆ. ಇದರಲ್ಲಿ ನೀವು ನಿಮ್ಮಬಳಿ ಇರುವ ಸ್ಮಾರ್ಟ್ ಫೋನ್ ಮಾತ್ರ ಅಲ್ಲದೆ ಮನೆಯಲ್ಲಿನ ಯಂತ್ರ ರೂಪದ ಯಾವುದೇ ವಸ್ತುವನ್ನು ಇವರು ತೆಗೆದುಕೊಳ್ಳುತ್ತಾರೆ. ಮತ್ತು ಅದಕ್ಕೆ ಸರಿಯಾದ ಬೆಲೆಯನ್ನು ಕೊಡುತ್ತಾರೆ. ಉದಾಹರಣೆಗೆ ಟಿವಿ, ಲ್ಯಾಪ್ಟಾಪ್, ವಾಷಿಂಗ್ ಮಿಷಿನ್, ಗ್ಯಾಜೆಟ್ಸ್ ಮುಂತಾದವುಗಳನ್ನ ಇಲ್ಲಿ ಸೇಲ್ ಮಾಡಬಹುದು.
- ಇನ್ಸ್ಟಾಕ್ಯಾಶ್ ಮೂಲಕ ಹಳೆಯ ಸ್ಮಾಟ್ರ್ಫೋನನ್ನು ಮಾರಾಟ ಮಾಡಬಹುದು. ಆದರೆ ಅದಕ್ಕೂ ಮೊದಲಿಗೆ https://getinstacash.in/ ಲಾಗ್ ಇನ್ ಆಗುವ ಮೂಲಕ ವಿವರವನ್ನು ನಮೂದಿಸಬೇಕು. ನಂತರ ಕಂಪನಿ ನೌಕಕರು ಮನೆಗೆ ಬಂದು ಗ್ಯಾಜೆಟ್ ಸಂಗ್ರಹಿಸುತ್ತಾರೆ. ನಂತರ ಅದರಲ್ಲಿ ನಿಮ್ಮ ಹೆಸರನ್ನು ನಮೂದಿಸಿದಾಗ ತಕ್ಷಣವೇ ಇನ್ಸ್ಟಾಕ್ಯಾಶ್ ಹಣವನ್ನು ನೀಡುತ್ತದೆ.
- http://www.karmarecycling.in/contact-us.php ಉತ್ತಮ ಆಯ್ಕೆಯಾಗಿದೆ. ಇದರ ಮೂಲಕ ಹಳೆಯ ಗ್ಯಾಜೆಟ್ ವಸ್ತುಗಳನ್ನು ಸೇಲ್ ಮಾಡಬಹುದಾಗಿದೆ. ಈಗಾಗಲೇ ಬಹುತೇಕರು ಈ ವೆಬ್ಸೈಟ್ ಬಳಸುವ ಮೂಲಕ ತಮ್ಮ ಗ್ಯಾಜೆಟ್ಗಳನ್ನು ಉತ್ತಮ ಬೆಲೆಗೆ ಮಾರಾಟ ಮಾಡುತ್ತಾರೆ.