Home » ಬಿಟ್‌ ಕಾಯಿನ್ ಎಂದರೇನು? ಅನುಕೂಲ, ಅನಾನುಕೂಲ, ಇತರೆ ಮಾಹಿತಿ ಇಲ್ಲಿದೆ..

ಬಿಟ್‌ ಕಾಯಿನ್ ಎಂದರೇನು? ಅನುಕೂಲ, ಅನಾನುಕೂಲ, ಇತರೆ ಮಾಹಿತಿ ಇಲ್ಲಿದೆ..

by manager manager

ಫಿಯೆಟ್ ಕರೆನ್ಸಿಯ ಯಾವುದೇ ಗುಣಲಕ್ಷಣಗಳನ್ನು ಹೊಂದಿರದ, ಸಂಪೂರ್ಣವಾಗಿ ಪೀರ್-ಟು ಪೀರ್ ವರ್ಗವಾಗುವ ( ಮಧ್ಯವರ್ತಿಯ ಹಾವಳಿ ಇಲ್ಲದೆ ಜನರಿಂದ ಜನರಿಗೆ) ಎಲೆಕ್ಟ್ರಾನಿಕ್ ನಗದು ಈ ಬಿಟ್ಕಾಯಿನ್. ಯಾವುದೇ ಹಣಕಾಸು ಸಂಸ್ಥೆಯ ಅಗತ್ಯವಿಲ್ಲದೆ ವ್ಯಕ್ತಿಯಿಂದ ವ್ಯಕ್ತಿಗೆ ನೇರವಾಗಿ ಬಿಟ್‌ಕಾಯಿನ್‌ಗಳನ್ನು ಕಳುಹಿಸಬಹುದು. ಮೈನರ್ಸ್ ಎಂದು ಕರೆಯಲ್ಪಡುವ ಜನರ ಗುಂಪಿನಿಂದ ಬಿಟ್‌ಕಾಯಿನ್‌ನ ಸಂಪೂರ್ಣ ವ್ಯವಸ್ಥೆಯು ಕಾರ್ಯನಿರ್ವಹಿಸಲ್ಪಡುತ್ತದೆ.


ಬಿಟ್ಕಾಯಿನ್ ನ ವಿಶೇಷತೆಗಳು
• ಬದಲಾಯಿಸಲಾಗದು: ಬಿಟ್‌ಕಾಯಿನ್ ಅನ್ನು ಪೀರ್-ಟು-ಪೀರ್ ಬ್ಲಾಕ್‌ಚೈನ್ ನೆಟ್‌ವರ್ಕ್‌ನಲ್ಲಿ ವರ್ಗಾಯಿಸಲಾಗಿರುವುದರಿಂದ, ವಹಿವಾಟು ನಡೆದ ನಂತರ ಅದನ್ನು ರದ್ದುಗೊಳಿಸಲು ಯಾವುದೇ ಮಾರ್ಗವಿಲ್ಲ.
• ನಿಗೂಢನಾಮ: ಬಿಟ್ಕಾಯಿನ್ ವ್ಯಾಲೆಟ್ ಅಥವಾ ಖಾತೆದಾರರ ಯಾವುದೇ ವಿಳಾಸ ಹೆಸರು ಅಥವಾ ಇನ್ಯಾವುದೋ ಗುರುತು ಲಭ್ಯವಿರುವುದಿಲ್ಲ. 30 ಅಂಕಿ ಅಥವಾ ಅಕ್ಷರದ ಸರಣಿಯಿಂದಲೆ ಖಾತೆಯ ಗುರುತು ನಮಗೆ ಸಿಗುವುದು.
• ವೇಗವಾದ ಮತ್ತು ಜಾಗತಿಕ ವಹಿವಾಟುಗಳು: ಬಿಟ್ಕಾಯಿನ್ ವಹಿವಾಟು ಕಂಪ್ಯೂಟರ್‌ಗಳ ಜಾಗತಿಕ ನೆಟ್‌ವರ್ಕ್‌ನಲ್ಲಿ ನಡೆಯುವುದರಿಂದ . ಪ್ರಪಂಚದ ಯಾವುದೇ ಭಾಗದಿಂದ ಬಿಟ್‌ಕಾಯಿನ್ ಕಳುಹಿಸಬಹುದು ಮತ್ತು ಸ್ವೀಕರಿಸಬಹುದು.
• ಸುರಕ್ಷಿತ: ಬಿಟ್‌ಕಾಯಿನ್ ನಿಧಿಗಳನ್ನು ಸಾರ್ವಜನಿಕ ಕೀ ಕ್ರಿಪ್ಟೋಗ್ರಫಿ ವ್ಯವಸ್ಥೆಯಲ್ಲಿ ಲಾಕ್ ಮಾಡಲಾಗಿದೆ. ಖಾಸಗಿ ಕೀಲಿಯ ಮಾಲೀಕರು ಮಾತ್ರ ಅದನ್ನು ಯಾರಿಗಾದರೂ ಕಳುಹಿಸಬಹುದು. ಕ್ರಿಪ್ಟೋಗ್ರಾಫಿಕ್ ತಂತ್ರಜ್ಞಾನವು ಖಾಸಗಿ ಕೀಗೆ ಪ್ರವೇಶವನ್ನು ಹೊಂದಿರದ ಹೊರತು ಯಾರೊಬ್ಬರ ವ್ಯಾಲೆಟ್ ಅನ್ನು ಬಳಸಲು ಮತ್ತು ಕ್ರಿಪ್ಟೋಕರೆನ್ಸಿಗಳನ್ನು ಕದಿಯಲು ಅಸಾಧ್ಯವಾಗಿದೆ.
• ಅನುಮತಿ ಬೇಕಿಲ್ಲ: ಬಿಟ್‌ಕಾಯಿನ್ ವಿಕೇಂದ್ರಿಕೃತ ಡಿಜಿಟಲ್ ರೂಪದ ನಗದು ರೂಪವಾಗಿದ್ದು, ಅದನ್ನು ಬಳಸಲು ಯಾವುದೇ ಅಧಿಕಾರದ ಅಗತ್ಯವಿಲ್ಲ.


ಬಿಟ್ಕಾಯಿನ್ ಎಲ್ಲಿ ಸಿಗುತ್ತೆ?
ಭಾರತದಲ್ಲಿ ಬಿಟ್ಕಾಯಿನ್ ಬಳಕೆಗೆಂದು ಕೆಲ ಆ್ಯಪ್ ಗಳಿವೆ. ಅವುಗಳನ್ನು ಇನ್ಸ್ಟಾಲ್ ಮಾಡಿಕೊಂಡು ಬಿಟ್ಕಾಯಿನ್ ವ್ಯಾಲೆಟ್ ಗಳನ್ನು ತೆರೆಯಬೇಕು. ಪ್ರತಿ ವ್ಯಾಲೆಟ್ಗಳಿಗೂ ಅದರದ್ದೆಯಾದ ವಿಳಾಸವಿರುತ್ತದೆ. ಇಲ್ಲಿ ವಿಶೇಷವೆನೆಂದರೆ ನಿಮ್ಮ ಬ್ಯಾಂಕ್ ಖಾತೆಯಂತೆ ನಿಮ್ಮ ವ್ಯಾಲೆಟ್ ಖಾತೆಗೆ ಒಂದೊಂದು ಕೋಡ್ ನೀಡಲಾಗುತ್ತದೆ ಮತ್ತು ಖಾತೆದಾರರ ವೈಯಕ್ತಿಕ ವಿವರ, ಹೆಸರು ಮತ್ತು ಸ್ಥಳ ಅದೃಶ್ಯವಾಗಿರುತ್ತದೆ. ಸದ್ಯ ಮಾರುಕಟ್ಟೆಯಲ್ಲಿ 6000ದಷ್ಟು ಕ್ರಿಪ್ಟೋಕರೆನ್ಸಿಗಳು ಲಭ್ಯವಿವೆ. ಅವುಗಳಲ್ಲಿ ಬಹು ಬೇಡಿಕೆಯ ಡಿಜಿಟಲ್ ಕರೆನ್ಸಿಗಳೆಂದರೆ ಬಿಟ್‌ಕಾಯಿನ್ (ಬಿಟಿಸಿ) ಎಥೆರಿಯಮ್ (ETH) ಸೋಲಾನಾ (SOL) ಬೈನಾನ್ಸ್ ಕಾಯಿನ್ (BNB) ಪಾಲಿಗೊನ್ (MATIC) ಅವಲಾಂಚ್ ಟೋಕನ್ (AVAX) ಕಿಟ್ಟಿ ಇನು (KITTY).


ಎಲ್ಲಿ ಬಳಸಬಹುದು ಈ ಬಿಟ್‌ಕಾಯಿನ್ ಗಳನ್ನು
ವಿವಿಧ ಕಂಪನಿಗಳು ಬಿಟ್‌ಕಾಯಿನ್/ ಇತರ ಕ್ರಿಪ್ಟೋಕರೆನ್ಸಿಗಳ ಮೂಲಕ ಪಾವತಿಗಳನ್ನು ಸ್ವೀಕರಿಸಲು ಪ್ರಾರಂಭಿಸಿವೆ. ಹಾಗೆ ಅಮೇರಿಕಾದ ಕೆಲವು ರಾಜ್ಯಗಳು ಕ್ರಿಪ್ಟೋಕರೆನ್ಸಿಗಳ ಮೂಲಕ ತೆರಿಗೆ ಪಾವತಿಸಲು ಸಹ ಅನುವುಮಾಡಿವೆ.

ಬಿಟ್‌ಕಾಯಿನ್ ಹೇಗೆ ಕೆಲಸ ಮಾಡುತ್ತದೆ?
ಸಾಂಪ್ರದಾಯಿಕ ಬ್ಯಾಂಕಿಂಗ್ ಮತ್ತು ಪಾವತಿ ವ್ಯವಸ್ಥೆಗಳಿಗಿಂತ ಭಿನ್ನವಾಗಿ ಕಾರ್ಯನಿರ್ವಹಿಸುತ್ತವೆ ಈ ಬಿಟ್‌ಕಾಯಿನ್ಗಳು. ಬಿಟ್‌ಕಾಯಿನ್ಗಳ ಪ್ರತಿ ವ್ಯವಹಾರವನ್ನು ಸಾರ್ವಜನಿಕ ಲೆಡ್ಜೆರ್ ಗಳಲ್ಲಿ ದಾಖಲಿಸಲಾಗುತ್ತದೆ. ಬಿಟ್‌ಕಾಯಿನ್ ಉತ್ಪತ್ತಿಯಿಂದ ಹಿಡಿದು ಯಾರಿಗೆ ಎಷ್ಟು ಬಾರಿ ಮಾರಾಟವಾಗಿದೆ ಎಂಬ ವಿವರವು ಈ ಸಾರ್ವಜನಿಕ ಲೆಡ್ಜೆರ್ ಗಳಲ್ಲಿ ದಾಖಲಾಗುತ್ತದೆ. ಬಿಟ್‌ಕಾಯಿನ್ನ ಸಂಪೂರ್ಣ ದಾಖಲಿತ ಮಾಹಿತಿ ಬ್ಲಾಕ್ ಚೈನ್ ತಂತ್ರದಲ್ಲಿ ಶೇಕರಿಸಿಡಲಾಗುತ್ತದೆ. ಹಾಗಾಗಿ ಬಿಟ್‌ಕಾಯಿನ್ ವ್ಯಾಲೆಟ್ ಹೊಂದಿದ ಯಾರಾದರೂ ತಮ್ಮ ಖಾತೆಯಿಂದ ಮತ್ತೊಬ್ಬರಿಗೆ ಹಣ / ಬಿಟ್‌ಕಾಯಿನ್ ಗಳನ್ನು ವರ್ಗಾಹಿಸುವಾಗ ಪಾರದರ್ಶಕತೆಯನ್ನು ಸಾಧಿಸುವಲ್ಲಿ ಈ ಕ್ರಿಪ್ಟೋಗ್ರಾಫಿಕ್ ಮತ್ತು ಬ್ಲಾಕ್ ಚೈನ್ ತಂತ್ರಜ್ಞಾನ ಸಹಾಯ ಮಾಡುತ್ತದೆ.


ಬಿಟ್‌ಕಾಯಿನ್ ನಲ್ಲಿ ಬ್ಲಾಕ್ ಚೈನ್ ತಂತ್ರಜ್ಞಾನ.
ಬ್ಲಾಕ್ ಚೈನ್ ತಂತ್ರಜ್ಞಾನ ಎಂದರೆ ಒಂದು ಬ್ಲಾಕ್ನ ಸ್ಟೋರೇಜ್ ಮುಗಿದಮೇಲೆ ನಿನ್ನೊಂದು ಬ್ಲಾಕ್ಗೆ ಲಿಂಕ್ ನೀಡುವ ಕ್ರಿಯೆ. ಅಂದರೆ ಒಂದು ಬ್ಲಾಕ್ ಸ್ಟೋರೇಜ್ ಮುಗಿದ ಮೇಲೆ ಅದರ ಕೊನೆಯ ವಹಿವಾಟಿನ ವಿವರ ಹೊಸ ಬ್ಲಾಕ್ ನಲ್ಲಿ ಲಭ್ಯವಿರುತ್ತದೆ. ಇದು ನಿರಂತರವಾಗಿ ಮುಂದುವರೆಯುತ್ತಲೇ ಇರುತ್ತದೆ. ಈ ಲಿಂಕಿಂಗ್ ಪ್ರಕ್ರಿಯೆಯನ್ನೇ ಬ್ಲಾಕ್ ಚೈನ್ ಟೆಕ್ನಾಲಜಿ ಎಂದು ಕರೆಯುತ್ತಾರೆ. ಈ ಮಾದರಿಯ ಟೆಕ್ನಾಲಜಿಯಲ್ಲಿ ಹ್ಯಾಕಿಂಗ್ಗೆ ಆಸ್ಪದವಿಲ್ಲ. ಏಕೆಂದರೆ ಬಿಟ್‌ಕಾಯಿನ್ ವ್ಯವಹಾರ ವಹಿವಾಟಿನಲ್ಲಿ ಸ್ವಲ್ಪ ಏರುಪೇರು ಸಂಭವಿಸಿದರೂ ಕ್ರಿಪ್ಟೋಗ್ರಾಫಿಕ್ ಮತ್ತು ಬ್ಲಾಕ್ ಚೈನ್ ತಂತ್ರಜ್ಞಾನದ ಅಳವಡಿಕೆಯಿಂದಾಗಿ ಎಲ್ಲಾ ನೊಡ್ಗಳಲ್ಲು ಗೋಚರಿಸುತ್ತದೆ.


ಬಿಟ್‌ಕಾಯಿನ್ ಮೈನಿಂಗ್

ಬಿಟ್‌ಕಾಯಿನ್ನ ಎಲ್ಲಾ ವಹಿವಾಟು ಬ್ಲಾಕ್ನಲ್ಲಿ ಸಂಗ್ರಹವಾಗುತ್ತದೆ. ಈ ಬ್ಲಾಕ್ಗಳನ್ನು ಮೈನರ್ಸ್ ಗಳು ನಿರ್ವಹಿಸುತ್ತಾರೆ. ಕಂಪ್ಯೂಟರ್ ನ ಸಹಾಯದಿಂದ ನಿಮ್ಮ ಎಲ್ಲಾ ಬಿಟ್‌ಕಾಯಿನ್ ವಹಿವಾಟುಗಳನ್ನು ಬ್ಲಾಕ್ ನಲ್ಲಿ ಸಂಗ್ರಹಿಸಿಡುತ್ತಾರೆ. ಈ ಸಂಗ್ರಹಿಸುವ ಕಾರ್ಯಕ್ಕೆ ಪ್ರತಿಯಾಗಿ ಅವರಿಗೆ ಬಿಟ್‌ಕಾಯಿನ್ಗಳು ಸಿಗುತ್ತವೆ. ಸದ್ಯ ಒಂದು ಬ್ಲಾಕ್ ನ ಸಂಗ್ರಹಣಾ ಸಾಮರ್ಥ್ಯ 1 MB ಮಾತ್ರ. ಹಾಗಾಗಿ ಒಂದು ಬ್ಲಾಕ್ನಲ್ಲಿ ವಹಿವಾಟು ಡೇಟಾ ತುಂಬಿದ ಮೇಲೆ ಅದನ್ನು ಸೀಲ್ ಮಾಡಬೇಕು. ಈ ಬ್ಲಾಕ್ ಸೀಲಿಂಗ್ ಪ್ರಕ್ರಿಯನ್ನು ಮೈನರ್ಸ್ ಗಳು ನಿರ್ವಹಿಸುತ್ತಾರೆ. ಈ ಬ್ಲಾಕ್ ಸೀಲಿಂಗ್ ಮಾಡಲು ಮೈನರ್ಸ್ ಗಳಿಗೆ ಒಂದು ಫಜ್ಹಲ್ ನೀಡಲಾಗುತ್ತದೆ. ಆ ಫಜ್ಹಲ್ ಬಿಡಿಸಿದರೆ ಮಾತ್ರ ಮುಂದಿನ ಬ್ಲಾಕ್ ತೆರೆಯಲು ಸಾಧ್ಯ ಪ್ರತಿ ಬ್ಲಾಕ್ ಸೀಲಿಂಗ್ ಮಾಡಿದ ಮೈನರ್ಸ್ ಗೆ ಹನ್ನೆರೆಡುವರೆ ಬಿಟ್‌ಕಾಯಿನ್ಗಳು ಸಿಗುತ್ತವೆ. ಪ್ರತಿ ನಾಲ್ಕು ವರ್ಷಕ್ಕೆ ಒಮ್ಮೆ ಮೈನರ್ಸ್ ಗೆ ಸಿಗುವ ಬಿಟ್‌ಕಾಯಿನ್ಗಳ ಅರ್ಧದಷ್ಟು ಕಡಿಮೆಯಾಗುತ್ತಾ ಬರುತ್ತವೆ. ಪ್ರಾರಂಭದ ಅಂತದಲ್ಲಿ ಪ್ರತಿ ಬ್ಲಾಕ್ ಸೀಲಿಂಗ್ ಗೆ 50 ಬಿಟ್‌ಕಾಯಿನ್ಗಳು ಉತ್ಪತ್ತಿಯಾಗುತ್ತಿತ್ತು ಸದ್ಯ ಇವುಗಳ ಉತ್ಪತ್ತಿಯ ಸಂಖ್ಯೆ ಹನ್ನೆರೆಡುವರೆಗೆ ತಲುಪಿದೆ. 2040 ವೇಳೆಗೆ ಒಟ್ಟಾರೆ ಎರಡು ಕೋಟಿ ಹತ್ತು ಲಕ್ಷ ಬಿಟ್‌ಕಾಯಿನ್ಗಳು ಉತ್ಪತ್ತಿಯಾದ ನಂತರ ಇವುಗಳ ಉತ್ಪತ್ತಿ ಸಂಪೂರ್ಣವಾಗಿ ನಿಂತು ಹೋಗುವ ರೀತಿಯಲ್ಲಿ ಈ ಬಿಟ್‌ಕಾಯಿನ್ ಉತ್ಪತ್ತಿ ವ್ಯವಸ್ಥೆಯನ್ನು ರೂಪಿಸಲಾಗಿದೆ.


ಬಿಟ್‌ಕಾಯಿನ್ನಿಂದಾಗುವ ಅನುಕೂಲಗಳು
• ವಿಕೇಂದ್ರಿತ ಹಣ ವಹಿವಾಟಿಗೆ ಉತ್ತೇಜನ
• ಹಣದುಬ್ಬರ ಸಮಸ್ಯೆಗೆ ಮುಕ್ತಿ
• ಪ್ರಪಂಚದಲ್ಲೇ ಏಕ ರೀತಿಯ ನಗದು ಬಳಕೆಗೆ ಉತ್ತೇಜನ ನೀಡುತ್ತಿದೆ.

ಅನಾನುಕೂಲಗಳು
2020ರಲ್ಲಿ ಭಾರತದ ಸರ್ವೋಚ್ಚ ನ್ಯಾಯಾಲಯ ಡಿಜಿಟಲ್ ಕರೆನ್ಸಿ ವಹಿವಾಟಿಗೆ ಅಧಿಕೃತವಾಗಿ ಹಸಿರು ನಿಶಾನೆ ತೋರಿಸಿದರು, ಭಾರತ ಸರ್ಕಾರ ಕ್ರಿಪ್ಟೋಕರೆನ್ಸಿಗೆ ಅಷ್ಟು ಉತ್ತೇಜನ ನೀಡಿಲ್ಲ ಏಕೆಂದರೆ
• ಮಧ್ಯವರ್ತಿಗಳ ಅನುಪಸ್ಥಿತಿಯಲ್ಲಿ ಈ ಬಿಟ್‌ಕಾಯಿನ್ಗಳ ವ್ಯವಹಾರ ನಡೆಯುವುದರಿಂದ, ನೀವು ವರ್ಗಾಹಿಸುವ ಬಿಟ್‌ಕಾಯಿನ್ ತಪ್ಪಾಗಿ ಬೇರೊಬ್ಬರ ಖಾತೆಗೆ ಜಮಾವಾದರೆ ಮರಳಿ ಪಡೆಯಲು ಸಾಧ್ಯವಿಲ್ಲ. ಇಲ್ಲಿ ನಡೆಯುವ ಎಲ್ಲಾ ವ್ಯವಹಾರ ಕೋಡ್ಗಳಲ್ಲಿ ದಾಖಲಾಗುತ್ತದೆ.
• ಈ ಮಾದರಿಯ ವಹಿವಾಟು ತೆರಿಗೆ ವಂಚನೆ ಮತ್ತು ಕಾಳಧನಕ್ಕೆ ಪುಷ್ಟಿ ನೀಡುತ್ತದೆ.
• ಭಯೋತ್ಪಾದನೆ, ಡಾರ್ಕ್ ವೆಬ್ ಸೈಟ್ ನಲ್ಲಿ ನಡೆಯುವ ಮಾಧಕ ವಸ್ತು ವಹಿವಾಟು ಮತ್ತು ಅಪಾಯಕಾರಿ ಆಯುಧಗಳ ಉತ್ಪಾದನೆಗೆ ಅಕ್ರಮವಾಗಿ ಹಣ ಸಂದಾಯವಾಗುವ ಅಪಾಯವಿದೆ.

ಆರ್ಟಿಕಲ್ 370 ಬಗ್ಗೆ ನಿಮಗೆ ತಿಳಿದಿದೆಯೇ ?

You may also like