Home » Today’s Gold Rates in Karnataka

Today’s Gold Rates in Karnataka

by manager manager

Today Gold Rate: ಬೆಳ್ಳಿ, ಬಂಗಾರದ ಬೆಲೆ ಮತ್ತೆ ಏರಿಕೆ


Today Gold Rate: ನಿಮ್ಮ ನೆಚ್ಚಿನವರಿಗೆ, ಪ್ರೀತಿ ಪಾತ್ರರಿಗೆ ಚಿನ್ನಾಭರಣ ಖರೀದಿ ಮಾಡುವ ಮುನ್ನ ಯೋಚಿಸಿ. ಭಾರತದಲ್ಲಿ ಮತ್ತೆ ಚಿನ್ನ ಮತ್ತು ಬೆಳ್ಳಿದರದಲ್ಲಿ ಏರಿಕೆ ಆಗಿದೆ. ಇತ್ತೀಚೆಗೆ ಚಿನ್ನ ಬೆಳ್ಳಿ ದರದಲ್ಲಿ ಇಳಿಕೆಯಾಗಿತ್ತು. ಆದರೀಗ ಕೆಲವು ಬೆರಳೆಣಿಕೆ ದಿನಗಳಿಂದ ಮತ್ತೆ ಚಿನ್ನದ ದರದಲ್ಲಿ ಏರಿಕೆ ಆಗುತ್ತಿದೆ.  


ಇಂದು ಏಪ್ರಿಲ್ 12 ರಂದು ಮಂಗಳವಾರ ಬೆಳಗಿನ ವೇಳೆಗೆ ದೇಶದಲ್ಲಿ 24 ಕ್ಯಾರಟ್’ನ 1 ಗ್ರಾಂ ಬಂಗಾರದ ಬೆಲೆ ರೂ.5,302 ರೂ ದಾಖಲಾಗಿದೆ. ಬೆಂಗಳೂರಿನಲ್ಲಿ 24 ಕ್ಯಾರಟ್’ನ 1 ಗ್ರಾಂ ಬಂಗಾರದ ಬೆಲೆ ರೂ.5,302 ನಿಗದಿಯಾಗಿದೆ.  
ಎಂದಿನಂತೆ ಬೆಲೆ ಪ್ರಕ್ರಿಯೆಯಲ್ಲಿ ಇಂದು ಬೆಳಗಿನ ವೇಳೆಗೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 22 ಕ್ಯಾರಟ್’ನ 10 ಗ್ರಾಂ ಬಂಗಾರದ ಬೆಲೆ ರೂ.48,600 ನಿಗದಿಯಾಗಿದೆ. ಬೆಂಗಳೂರಿನಲ್ಲಿ 10 ಗ್ರಾಂ ಅಪರಂಜಿ ಚಿನ್ನ- 24 ಕ್ಯಾರಟ್’ನ 10 ಗ್ರಾಂ ಬಂಗಾರದ ಬೆಲೆ ರೂ.53,020 ದಾಖಲಾಗಿದೆ. ಈ ಮೂಲಕ ಬೆಂಗಳೂರಿನಲ್ಲಿ ಚಿನ್ನದ ಬೆಲೆ ಸೋಮವಾರ ಇದ್ದ ಬೆಲೆಯೇ ನಿಗದಿಯಾಗಿದೆ.  


Today Silver Rate: ಬೆಳ್ಳಿದರ ಭಾರತದಲ್ಲಿ ಬೆಳ್ಳಿ ದರ ಸೋಮವಾರ ಒಂದೇ ದಿನ ಕೆಜಿಗೆ ರೂ.4,400 ರೂಪಾಯಿ ಏರಿಕೆಯಾಗಿ, ಒಟ್ಟು ರೂ.71,500 ಒಂದು ಕೆಜಿಗೆ ಬೆಲೆ ನಿಗದಿಯಾಗಿದೆ. ಇಂದು ಅದೇ ದರ ಮುಂದುವರೆದಿದೆ. ಬೆಂಗಳೂರಿನಲ್ಲಿ ಒಂದು ಕೆಜಿ ಬೆಳ್ಳಿ ಬೆಲೆ ರೂ.71,500 ಇದೆ. 


ದೇಶದಾದ್ಯಂತ ಕೆಲವು ನಗರಗಳನ್ನು ಹೊರತುಪಡಿಸಿ ಅನೇಕ ಕಡೆ ಬೆಳ್ಳಿ ಬೆಲೆಯಲ್ಲಿ ಏಕರೂಪವಿದೆ. ಚೆನ್ನೈ, ವಿಜಯವಾಡ, ಹೈದೆರಾಬಾದ್, ವಿಶಾಖಪಟ್ಟಣಂದಲ್ಲಿಯೂ ರೂ.71,500 ರೂ ನಿಗದಿಯಾಗಿದೆ.  

ಪ್ರಮುಖ ನಗರಗಳಲ್ಲಿ ಮಂಗಳವಾರ 24 ಕ್ಯಾರಟ್’ನ 10 ಗ್ರಾಂ ಬಂಗಾರದ ಬೆಲೆ ರೂ.ಗಳಲ್ಲಿ ಈ ಕೆಳಗಿನಂತಿದೆ.  

Today Bengaluru Gold Rate : ಬೆಂಗಳೂರು: 22 ಕ್ಯಾರಟ್’ನ ಚಿನ್ನಕ್ಕೆ ರೂ.44,600, 24 ಕ್ಯಾರಟ್’ನ ಚಿನ್ನಕ್ಕೆ ರೂ.53,020. 

Today Mysuru Gold Rate : ಮೈಸೂರು : 22 ಕ್ಯಾರಟ್’ನ ಚಿನ್ನಕ್ಕೆ ರೂ.48,600, 24 ಕ್ಯಾರಟ್’ನ ಚಿನ್ನಕ್ಕೆ ರೂ.53,020.  

Today Mangaluru Gold Rate : ಮಂಗಳೂರು: 22 ಕ್ಯಾರಟ್’ನ ಚಿನ್ನಕ್ಕೆ ರೂ.48,600, 24 ಕ್ಯಾರಟ್’ನ ಚಿನ್ನಕ್ಕೆ ರೂ.53,020. 

Today Delhi Gold Rate : ದೆಹಲಿ : 22 ಕ್ಯಾರಟ್’ನ ಚಿನ್ನಕ್ಕೆ ರೂ.48,600, 24 ಕ್ಯಾರಟ್’ನ ಚಿನ್ನಕ್ಕೆ ರೂ.53,020.

 Today Chennai Gold Rate : ಚೆನ್ನೈ : 22 ಕ್ಯಾರಟ್’ನ ಚಿನ್ನಕ್ಕೆ ರೂ.49,190, 24 ಕ್ಯಾರಟ್’ನ ಚಿನ್ನಕ್ಕೆ ರೂ.53,600. 

Today Hyderabad Gold Rate : ಹೈದೆರಾಬಾದ್ : 22 ಕ್ಯಾರಟ್’ನ ಚಿನ್ನಕ್ಕೆ ರೂ.48,600, 24 ಕ್ಯಾರಟ್’ನ ಚಿನ್ನಕ್ಕೆ ರೂ.53,020. 

Today Kolkatta Gold Rate : ಕೋಲ್ಕತ್ತ: 22 ಕ್ಯಾರಟ್’ನ ಚಿನ್ನಕ್ಕೆ ರೂ.48,600, 24 ಕ್ಯಾರಟ್’ನ ಚಿನ್ನಕ್ಕೆ ರೂ.53,020. 

Today Mumbai Gold Rate : ಮುಂಬಯಿ: 22 ಕ್ಯಾರಟ್’ನ ಚಿನ್ನಕ್ಕೆ ರೂ.48,600, 24 ಕ್ಯಾರಟ್’ನ ಚಿನ್ನಕ್ಕೆ ರೂ.53,020


ಪ್ರತಿದಿನ ಚಿನ್ನದ ದರವಾಗಲಿ ಅಥವಾ ಬೆಳ್ಳಿಯ ದರವಾಗಲಿ ಅಂತರರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯವನ್ನು ಆಧರಿಸಿ ಆಯಾ ದಿನದ ಚಿನ್ನ ಬೆಳ್ಳಿ ದರ ನಿರ್ಧಾರ ಆಗುತ್ತದೆ. 

ಚಿನ್ನ ಖರೀದಿಸುವ ಮುನ್ನ ತಿಳಿಯಬೇಕಾದ ಮಾಹಿತಿಗಳು  ಚಿನ್ನ / ಬಂಗಾರ / ಬೆಳ್ಳಿ ಖರೀದಿಸಲು ಹಲವು ಮಾರ್ಗಗಳಿವೆ. ಆದ್ದರಿಂದ ನೀವು ಈ ಆಟಕ್ಕೆ ಹೊಸಬರಾಗಿದ್ದರೆ, ಚಿನ್ನ ಹೇಗೆ ಖರೀದಿಸಬೇಕು ಎಂದು ಸವಿವರ ಮಾಹಿತಿಗಳನ್ನು ಇಲ್ಲಿ ನೀಡುತ್ತವೆ.  


ಚಿನ್ನವು ಇತಿಹಾಸದುದ್ದಕ್ಕೂ ಜನರು ಮೆಚ್ಚಿದ ಮತ್ತು ಸಂಗ್ರಹಿಸಿಡಲು ಬಯಸುವ ಒಂದು ಪ್ರಮುಖ ಆಸ್ತಿಯಾಗಿದೆ. ವಿಶ್ವ ಚಿನ್ನದ ಮಂಡಳಿ ಪ್ರಕಾರ ಹೂಡಕೆದಾರರು ಖರೀದಿಸಿದ ಚಿನ್ನದ ಪ್ರಮಾಣವು ಕಳೆದ 3 ದಶಕಗಳಲ್ಲಿ ಕನಿಷ್ಠ 235 ಶೇಕಡ ಹೆಚ್ಚಾಗಿದೆ ಮತ್ತು ಕೇವಲ ಹೂಡಿಕೆಯ ಬೇಡಿಕೆಗಳಿಗಾಗಿ ಎಂಬುದನ್ನು ನಾವು ಇಲ್ಲಿ ತಿಳಿಯಲೇಬೇಕು. 


ಚಿನ್ನದಲ್ಲಿ ಹೂಡಿಕೆ ಮಾಡಲು ಯೋಚಿಸುತ್ತಿದ್ದರೆ, ಅದು ಹೇಗೆ ಕೆಲಸ ಮಾಡುತ್ತದೆ ಮತ್ತು ಅದರಲ್ಲಿ ಹೂಡಿಕೆ ಮಾಡಲು ಉತ್ತಮ ಮಾರ್ಗದ ಬಗ್ಗೆ ನೀವು ಇನ್ನಷ್ಟು ತಿಳಿದುಕೊಳ್ಳುವುದು ಮುಖ್ಯವಾಗಿದೆ.  


ಚಿನ್ನ ಖರೀದಿಸುವ ಮುನ್ನ ಯಾವೆಲ್ಲ ಅಂಶಗಳನ್ನು ಗಮನಿಸಬೇಕು ಎಂದು ಈ ಕೆಳಗಿನಂತೆ ತಿಳಿಸಲಾಗಿದೆ.ಚಿನ್ನ ಅಥವಾ ಬಂಗಾರ ಖರೀದಿಸುವ ಮುನ್ನ ಮೊದಲು ಅದನ್ನು ಅನನ್ಯಗೊಳಿಸುವ ಕೆಲವು ಅಂಶಗಳನ್ನು ನೀವು ಇಲ್ಲಿ ಕಲಿಯುವುದು ಅತ್ಯಗತ್ಯ. ಅದು ಹೇಗೆ ಎಂದರೆ.. – ಹೊಸದಾಗಿ ಮುದ್ರಿಸಿದ ಚಿನ್ನದ ನಾಣ್ಯಗಳು ಸಾಮಾನ್ಯವಾಗಿ ಶೇಕಡ 90-999 ಚಿನ್ನ.  – ಆಭರಣಗಳು 14 ಕ್ಯಾರಟ್ (ಶೇಕಡ.58) ಮತ್ತು 18 – ಕ್ಯಾರಟ್‌ (ಶೇಕಡ.75) ಚಿನ್ನವಾಗಿರುತ್ತದೆ.  – ಶುದ್ಧ ಚಿನ್ನ ಎಂದರೆ 24-ಕ್ಯಾರಟ್‌ ನದ್ದು. (ಶೇಕಡ.100) – ಚಿನ್ನದ ದಾಸ್ತಾನು ಇರುವುದು ನಿಮಗೆ ಲೋಹದ ಸ್ವಾಧೀನಕ್ಕೆ ಅರ್ಹವಲ್ಲ.  – ಭೌತಿಕ ಚಿನ್ನವನ್ನು ಸಂಗ್ರಹಿಸಲು ಹಣ ವೆಚ್ಚಾಗುತ್ತದೆ.  – ಬೆಲೆ ಏರಿದಾಗ ಗೋಲ್ಡ್‌ ಗಣಿಗಾರಿಕೆ ಆರ್ಥಿಕವಾಗಿರುತ್ತದೆ.  – ಚಿನ್ನದ ಹಿಡುವಳಿಗಳು ಸೀಮಿತ ಸಂಖ್ಯೆಯ ಸರ್ಕಾರಗಳು ಮತ್ತು ಕೇಂದ್ರೀಯ ಬ್ಯಾಂಕ್‌ಗಳ ನಡುವೆ ಹೆಚ್ಚು ಕೇಂದ್ರೀಕೃತವಾಗಿವೆ. – ಈ ಸಂಸ್ಥೆಗಳು ಖರೀದಿ ಮತ್ತು ಮಾರಾಟ ಮಾಡುವಾಗ ತೀವ್ರ ಬೆಲೆಯ ಏರಿಳಿತಗಳಿಗೆ ಚಿನ್ನವನ್ನು ಒಡ್ಡುತ್ತವೆ.