ಜವಾಹರ್ ನವೋದಯ ವಿದ್ಯಾಲಯ ಸಮಿತಿ ನಡೆಸುವ 2022-23ನೇ ಸಾಲಿನ ಪ್ರವೇಶ ಪರೀಕ್ಷೆಗೆ ಸಂಬಂಧಿಸಿದೆ, ಇದೀಗ 6ನೇ ತರಗತಿ ಪ್ರವೇಶ ಪರೀಕ್ಷೆಯ ರಿಸಲ್ಟ್ ಪ್ರಕಟಿಸಿದೆ. ಚೆಕ್ ಮಾಡುವ ವಿಧಾನ ಇಲ್ಲಿದೆ.
ಜವಾಹರ್ ನವೋದಯ ವಿದ್ಯಾಲಯ ವೆಬ್ಸೈಟ್ : www.navodaya.gov.in
ಫಲಿತಾಂಶ ಚೆಕ್ ಹೇಗೆ?
- ನವೋದಯ ವಿದ್ಯಾಲಯ ವೆಬ್ಸೈಟ್ https://navodaya.gov.in/nvs/en/Home1 ಗೆ ಭೇಟಿ ನೀಡಿ.
- 6ನೇ ತರಗತಿ ಪ್ರವೇಶ ಪರೀಕ್ಷೆ ರಿಸಲ್ಟ್ಗೆ ಸಂಬಂಧಿಸಿದ ಲಿಂಕ್ ಕ್ಲಿಕ್ ಮಾಡಿ.
- ಓಪನ್ ಆದ ಪೇಜ್ನಲ್ಲಿ ರಿಜಿಸ್ಟ್ರೇಷನ್ ನಂಬರ್, ಜನ್ಮ ದಿನಾಂಕ ಮಾಹಿತಿ ನೀಡಿ ಸಬ್ಮಿಟ್ ಮಾಡಿ.
- ಫಲಿತಾಂಶ ಪ್ರದರ್ಶನವಾಗುತ್ತದೆ. ಡೌನ್ಲೋಡ್ ಮಾಡಿ ಪ್ರಿಂಟ್ ತೆಗೆದುಕೊಳ್ಳಿ.
ಎನ್ವಿಎಸ್ನಲ್ಲಿ ಪ್ರವೇಶ ಪಡೆಯಲು ಪ್ರತಿ ವರ್ಷ ಈ ಕೆಳಗಿನ ವಿಧಾನದಲ್ಲಿ ಪ್ರವೇಶ ಪರೀಕ್ಷೆಗೆ ಅರ್ಜಿ ಹಾಕಿರಿ.
- ನವೋದಯ ವಿದ್ಯಾಲಯ ಸಮಿತಿ ಅಧಿಕೃತ ವೆಬ್ಸೈಟ್ navodaya.gov.in ಗೆ ಭೇಟಿ ನೀಡಿ.
- ಓಪನ್ ಆದ ಪೇಜ್ನಲ್ಲಿ ‘CLICK HERE TO SUBMIT ONLINE APPLICATION FORM FOR CLASS VI JAWAHAR NAVODAYA VIDYALAYA SELECTION TEST 2022. THE LAST DATE TO APPLY IS 15.12.2021″ ಎಂದಿರುವ ಲಿಂಕ್ ಕ್ಲಿಕ್ ಮಾಡಿ.
- ನಂತರ ಎನ್ವಿಎಸ್ನ ಮತ್ತೊಂದು ಪೇಜ್ ಓಪನ್ ಆಗುತ್ತದೆ. ಈ ಪೇಜ್ನಲ್ಲಿ ‘ Click here to Class VI Registration’ ಎಂದಿರುವಲ್ಲಿ ಕ್ಲಿಕ್ ಮಾಡಿ.
- ಅಪ್ಲಿಕೇಶನ್ ಸಲ್ಲಿಸುವ ಪುಟ ಓಪನ್ ಆಗುತ್ತದೆ. ಅಗತ್ಯ ಮಾಹಿತಿಗಳನ್ನು ನೀಡಿ, ರಿಜಿಸ್ಟ್ರೇಷನ್ ಮಾಡಿ.
- ಮುಂದಿನ ರೆಫರೆನ್ಸ್ಗಾಗಿ ಅರ್ಜಿಯನ್ನು ಪ್ರಿಂಟ್ ತೆಗೆದುಕೊಳ್ಳಿ.
ಜವಾಹರ್ ನವೋದಯ ವಿದ್ಯಾಲಯ ಪ್ರವೇಶ ಪರೀಕ್ಷೆ ವಿಧಾನ ಈ ಕೆಳಗಿನಂತಿರುತ್ತದೆ.
ಎನ್ವಿಎಸ್ 6ನೇ ತರಗತಿ ಪ್ರವೇಶ ಅರ್ಹತಾ ಪರೀಕ್ಷೆಯು 100 ಅಂಕಗಳಿಗೆ ಪ್ರಶ್ನೆಗಳನ್ನು ಹೊಂದಿರುತ್ತದೆ. 80 ಪ್ರಶ್ನೆಗಳನ್ನು ಕೇಳಲಾಗಿರುತ್ತದೆ. ಗಣಿತ, ಭಾಷೆ, ಮೆಂಟಲ್ ಎಬಿಲಿಟಿ ಕುರಿತ ಪ್ರಶ್ನೆಗಳು ಇರುತ್ತವೆ. ವಿದ್ಯಾರ್ಥಿಗಳು ಒಎಂಆರ್ ಶೀಟ್ನಲ್ಲಿ ಉತ್ತರ ಬರೆಯಬೇಕಿರುತ್ತದೆ. ವಿದ್ಯಾರ್ಥಿಗಳು ಪರೀಕ್ಷೆಗೆ ಬ್ಲಾಕ್ ಮತ್ತು ಬ್ಲೂ ಪೆನ್ ಮಾತ್ರ ಬಳಸಬೇಕು. ಪರೀಕ್ಷೆಗೆ ಒಂದು ವಾರ ಮುಂಚೆ ಪ್ರವೇಶ ಪತ್ರ ಬಿಡುಗಡೆ ಮಾಡಲಿದ್ದು, ಅಭ್ಯರ್ಥಿಗಳು ಡೌನ್ಲೋಡ್ ಮಾಡಿ ಪ್ರಿಂಟ್ ತೆಗೆದುಕೊಳ್ಳಬೇಕು. ಪರೀಕ್ಷೆಗೆ ಹಾಜರಾಗುವ ವೇಳೆ ಕಡ್ಡಾಯವಾಗಿ ತೆಗೆದುಕೊಂಡು ಹೋಗಬೇಕು.