Home » ಭಾರತೀಯ ಅಂಚೆ ಇಲಾಖೆಯಲ್ಲಿ 40,889 ಪೋಸ್ಟ್‌ಮ್ಯಾನ್‌ಗಳ ನೇಮಕ: ಅರ್ಜಿ ಹಾಕಿ

ಭಾರತೀಯ ಅಂಚೆ ಇಲಾಖೆಯಲ್ಲಿ 40,889 ಪೋಸ್ಟ್‌ಮ್ಯಾನ್‌ಗಳ ನೇಮಕ: ಅರ್ಜಿ ಹಾಕಿ

by manager manager

ಭಾರತೀಯ ಅಂಚೆ ಇಲಾಖೆಯು 40,889 ಗ್ರಾಮೀಣ ಡಾಕ್‌ ಸೇವಕ್‌, ಬ್ರ್ಯಾಂಚ್‌ ಪೋಸ್ಟ್‌ ಮಾಸ್ಟರ್‌, ಅಸಿಸ್ಟಂಟ್ ಬ್ರ್ಯಾಂಚ್ ಪೋಸ್ಟ್‌ ಮಾಸ್ಟರ್‌ ಹುದ್ದೆಗಳಿಗೆ ಅಧಿಸೂಚನೆ ಬಿಡುಗಡೆ ಮಾಡಿದೆ. ಕರ್ನಾಟಕ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಒಟ್ಟು 3036 ಪೋಸ್ಟ್‌ಮಾಸ್ಟರ್‌ಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆಗಳ ವಿವರ ಕೆಳಗಿನಂತೆ ತಿಳಿದು ಅರ್ಜಿ ಸಲ್ಲಿಸಿ.

ಉದ್ಯೋಗ ಇಲಾಖೆ : ಭಾರತೀಯ ಅಂಚೆ ಇಲಾಖೆ
ಹುದ್ದೆಗಳ ಹೆಸರು: ಗ್ರಾಮೀಣ ಡಾಕ್ ಸೇವಕ್, ಬ್ರ್ಯಾಂಚ್‌ ಪೋಸ್ಟ್‌ ಮಾಸ್ಟರ್‌, ಅಸಿಸ್ಟಂಟ್ ಬ್ರ್ಯಾಂಚ್ ಪೋಸ್ಟ್‌ ಮಾಸ್ಟರ್‌.
ಭಾರತದಾದ್ಯಂತ ಹುದ್ದೆಗಳ ಸಂಖ್ಯೆ : 40,889
ಕರ್ನಾಟಕದಲ್ಲಿ ಹುದ್ದೆಗಳ ಸಂಖ್ಯೆ : 3036
ಬ್ರ್ಯಾಂಚ್‌ ಪೋಸ್ಟ್‌ಮಾಸ್ಟರ್‌ ಮಾಸಿಕ ವೇತನ : Rs.12,000-29,380 ವರೆಗೆ.
ಅಸಿಸ್ಟಂಟ್ ಬ್ರ್ಯಾಂಚ್‌ ಪೋಸ್ಟ್‌ ಮಾಸ್ಟರ್ ಮಾಸಿಕ ವೇತನ: Rs.10,000-24,470.
ಡಾಕ್ ಸೇವಕ್‌ ಮಾಸಿಕ ವೇತನ : Rs.10,000-24,470.

ವಿದ್ಯಾರ್ಹತೆ : ಎಸ್‌ಎಸ್‌ಎಲ್‌ಸಿ ಪಾಸ್ ಮಾಡಿರಬೇಕು.
ಅರ್ಜಿ ಸಲ್ಲಿಸಲು ಆರಂಭ ದಿನಾಂಕ : 27-01-2023
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 16-02-2023
ಅಪ್ಲಿಕೇಶನ್‌ ತಿದ್ದುಪಡಿಗೆ ಅವಕಾಶ : ಫೆಬ್ರುವರಿ 17-19, 2023 ವರೆಗೆ.
ಅಪ್ಲಿಕೇಶನ್ ಶುಲ್ಕ ರೂ.100.
ವಯಸ್ಸಿನ ಅರ್ಹತೆ : ಕನಿಷ್ಠ 18 ವರ್ಷ ಆಗಿರಬೇಕು. ಗರಿಷ್ಠ 40 ವರ್ಷ ಮೀರಿರಬಾರದು. ಎಸ್‌ಸಿ/ ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ ನಿಯಮಗಳು ಅನ್ವಯವಾಗಲಿವೆ.
ಆಯ್ಕೆವಿಧಾನ: ಮೆರಿಟ್ ಆಧಾರಮೇಲೆ, ಮೂಲ ದಾಖಲೆಗಳನ್ನು ಹಾಜರುಪಡಿಸಬೇಕು.
ಅರ್ಜಿ ಸಲ್ಲಿಸಲು ಲಿಂಕ್: https://indiapostgdsonline.gov.in/Reg_validation.aspx


Notification