ಕೇಂದ್ರ ಲೋಕಸೇವಾ ಆಯೋಗವು ಕೇಂದ್ರ ಉದ್ಯೋಗ ಮತ್ತು ಕಾರ್ಮಿಕ ಸಚಿವಾಲಯದಡಿಯ ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆಯಡಿಯಲ್ಲಿ ಅಗತ್ಯ ಇರುವ ಇಒ, ಎಒ ಮತ್ತು ಎಪಿಎಫ್ಸಿ ಸೇರಿದಂತೆ ಒಟ್ಟು 577 ಪೋಸ್ಟ್ಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಮಾರ್ಚ್ 17, 2023 ರವರೆಗೆ ಅವಕಾಶ ನೀಡಲಾಗಿದೆ.
ಹುದ್ದೆಗಳ ವಿವರ
ಎನ್ಫೋರ್ಸ್ಮೆಂಟ್ ಆಫೀಸರ್ / ಅಕೌಂಟ್ಸ್ ಆಫೀಸರ್ : 418
ಅಸಿಸ್ಟಂಟ್ ಪ್ರಾವಿಡೆಂಟ್ ಫಂಡ್ ಕಮೀಷನರ್ (ಎಪಿಎಫ್ಸಿ) : 159
ಶೈಕ್ಷಣಿಕ ಅರ್ಹತೆ : ಪದವಿ / ಸ್ನಾತಕೋತ್ತರ ಪದವಿ.
ಎನ್ಫೋರ್ಸ್ಮೆಂಟ್ ಆಫೀಸರ್ / ಅಕೌಂಟ್ಸ್ ಆಫೀಸರ್ ಹುದ್ದೆಗೆ ಅರ್ಜಿ ಸಲ್ಲಿಸಲು ಗರಿಷ್ಠ 30 ವರ್ಷ ವಯಸ್ಸು ಮೀರಿರಬಾರದು. ಅಸಿಸ್ಟಂಟ್ ಪ್ರಾವಿಡೆಂಟ್ ಫಂಡ್ ಕಮೀಷನರ್ (ಎಪಿಎಫ್ಸಿ) ಹುದ್ದೆಗೆ ಅರ್ಜಿ ಸಲ್ಲಿಸಲು ಗರಿಷ್ಠ 35 ವರ್ಷ ವಯಸ್ಸು ಮೀರಿರಬಾರದು.
ಅಪ್ಲಿಕೇಶನ್ ಸಲ್ಲಿಸಲು ಆರಂಭಿಕ ದಿನಾಂಕ : 25-02-2023
ಅಪ್ಲಿಕೇಶನ್ ಸಲ್ಲಿಸಲು ಕೊನೆ ದಿನಾಂಕ : 17-03-2023 ರ ಸಂಜೆ 06 ಗಂಟೆವರೆಗೆ.
ಕೇಂದ್ರ ಲೋಕಸೇವಾ ಆಯೋಗದ ಅಧಿಕೃತ ವೆಬ್ಸೈಟ್ ವಿಳಾಸ : https://www.upsc.gov.in