ಮೊಬೈಲ್ ಕೇವಲ ನಮಗೆ ಸಂವಹನಕ್ಕೆ ಮಾತ್ರ ಮಾಧ್ಯಮವಾಗಿ ಉಳಿದಿಲ್ಲ, ಮನರಂಜನೆ ಮತ್ತು ಮಾರುಕಟ್ಟೆಗೆ ವೇದಿಕೆ . ಪ್ರಚಾರ ಮತ್ತು ಸಂಚಾರಕ್ಕೆ ಒಳ್ಳೆ ಪ್ರಸರಕ ಮಾಹಿತಿ ಮತ್ತು ಕಲಿಕೆಗೆ ಉತ್ತಮ ಸಾಧನ. ಇದ್ದನ್ನು ಹೊರತು ಪಡಿಸಿ ಮೊಬೈಲ್’ನ ಉಪಯುಕ್ತತೆಯ ವ್ಯಾಪ್ತಿ ತೆರಿಗೆ ಇಲಾಖೆ ಸೇವೆ, ಸೌಲಭ್ಯಗಳ ವರೆಗೆ ಸಾಗಿದೆ.
ಆದಾಯ ತೆರಿಗೆ ಇಲಾಖೆ, ತೆರಿಗೆದಾರರು ತಾವು ಪೂರೈಸುವ ತೆರಿಗೆ ವಿವರವನ್ನು ಈಗ ಮೊಬೈಲ್ ನಲ್ಲೇ ನೋಡಬಹುದು. ಆದಾಯ ತೆರಿಗೆ ಇಲಾಖೆಯು ತೆರಿಗೆದಾರರಿಗೆ ವಾರ್ಷಿಕ ಮಾಹಿತಿ ಹೇಳಿಕೆಗಳನ್ನು (AIS) ವೀಕ್ಷಿಸಲು ಮೊಬೈಲ್ ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಿದೆ. ಅದುವೇ AIS ಅಪ್ಲಿಕೇಶನ್. ಭಾರತ ಸರ್ಕಾರದ ಆದಾಯ ತೆರಿಗೆ ಇಲಾಖೆಯಿಂದ ಒದಗಿಸಲಾದ ಉಚಿತ ಮೊಬೈಲ್ ಅಪ್ಲಿಕೇಶನ್ ಇದು. ತೆರಿಗೆದಾರರಿಗೆ ಸಂಬಂಧಿಸಿದ ವಿವಿಧ ಮಾಹಿತಿಯ ಸಂಗ್ರಹ ಮತ್ತು ವಾರ್ಷಿಕ ಮಾಹಿತಿ ಹೇಳಿಕೆಯ (AIS) ಸಮಗ್ರ ನೋಟವನ್ನು ಒದಗಿಸಲು ಅಪ್ಲಿಕೇಶನ್ ಉದ್ದೇಶಿಸಲಾಗಿದೆ.
AIS ಅಪ್ಲಿಕೇಶನ್ ಡೌನ್ ಲೋಡ್ ಮಾಡೋದು ಹೇಗೆ?
ಈ ಅಪ್ಲಿಕೇಶನ್ ಪ್ಲೇ ಸ್ಟೋರ್ ನಲ್ಲಿ ಲಭ್ಯವಿದ್ದು, ಆಲ್ಲಿ ಡೌನ್ ಲೋಡ್ ಮಾಡಬಹುದು. ಇದನ್ನು IOS ಸ್ಮಾರ್ಟ್ ಫೋನ್ ಮತ್ತು ಆಂಡ್ರಾಯ್ಡ್ ವರ್ಷನ್ ಎರಡೂ ಬಗೆಯ ಮೊಬೈಲ್ಗಳಲ್ಲಿಯೂ ಇನ್ಸ್ಟಾಲ್ ಮಾಡಿ ಉಪಯೋಗಿಸಬಹುದಾದ ಪರಿಕಲ್ಪನೆಯಲ್ಲಿ ರೂಪಿಸಲಾಗಿದೆ.
AIS ಟ್ಯಾಕ್ಸ್ ಪೇಯರ್ ಅಪ್ಲಿಕೇಶನ್ ನಲ್ಲಿ ನೋಂದಣಿ ಮಾಡೋದು ಹೇಗೆ?
AIS ಅಪ್ಲಿಕೇಶನ್ ಓಪನ್ ಮಾಡಿ, ಆರಂಭಿಕ ಸ್ಲೈಡ್ಗಳ ಮೇಲೆ ಕ್ಲಿಕ್ ಮಾಡಿ. ನಂತರ ನಿಮ್ಮ PAN ನಂಬರ್ ಮತ್ತು ನಿಮ್ಮ ಜನ್ಮ ದಿನಾಂಕವನ್ನು ನಮೂದಿಸಿ.
ನಂತರ ನಿಮ್ಮ ಮೊಬೈಲ್ ಮತ್ತು ಇಮೇಲ್ ಐಡಿ ಅಪ್ಲೋಡ್ ಮಾಡಿ ‘continue’ ಮೇಲೆ ಕ್ಲಿಕ್ ಮಾಡಿ. ನೀವು ಅಪ್ಲೋಡ್ ಮಾಡಿದ ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿ ಗೆ ಬಂದ OTP ಎಂಟರ್ ಮಾಡಿ ಪರಿಶೀಲಿಸಿ, 4 ಅಂಕಿಯ MPIN ಕ್ರಿಯೇಟ್ ಮಾಡಿ.
ಓಮ್ಮೆ ನೀವು ಅಪ್ಲಿಕೇಶನ್ ನಲ್ಲಿ ನೋಂದಾಯಿಸಿ, MPIN ಕ್ರಿಯೇಟ್ಮಾಡಿದ ನಂತರ ನೀವು ಅಪ್ಲಿಕೇಶನ್ ಗೆ ಯಾವಾಗ ಬೇಕಾದರೂ ಲಾಗಿನ್ ಆಗಬಹುದು. ನೀವು MPIN ಮೂಲಕ ಲಾಗಿನ್ ಆಗಿ, ‘Anual information statement’ ಮೇಲೆ ಕ್ಲಿಕ್ ಮಾಡಿ ನಿಮಗೆ ಬೇಕಾದ ಮಾಹಿತಿಯನ್ನು ಪಡೆಯಬಹುದು.
‘AIS for Taxpayer’ ಮೊಬೈಲ್ ಅಪ್ಲಿಕೇಶನ್ನಲ್ಲಿ ಏನನ್ನು ವೀಕ್ಷಿಸಬಹುದು?
TDS/TCS, ಬಡ್ಡಿ, ಲಾಭಾಂಶಗಳು, ಷೇರು ವಹಿವಾಟುಗಳು, ತೆರಿಗೆ ಪಾವತಿಗಳು, ಆದಾಯ ತೆರಿಗೆ ಮರುಪಾವತಿಗಳು ಮತ್ತು ಇತರ ಮಾಹಿತಿಗಳಾದ (GST ಡೇಟಾ, ವಿದೇಶಿ ರವಾನೆಗಳು, ಇತ್ಯಾದಿ) ಲಭ್ಯವಿರುವ AIS/TIS ನಿಂದ ಮಾಹಿತಿಯನ್ನು ಪರಿಶೀಲಿಸಲು ಮೊಬೈಲ್ ಅಪ್ಲಿಕೇಶನ್ ತೆರಿಗೆದಾರರಿಗೆ ಅನುಮತಿಸುತ್ತದೆ. ಅಲ್ಲದೆ ತೆರಿಗೆದಾರರು ಅಪ್ಲಿಕೇಶನ್ ನೀಡುವ ಡೇಟಾದ ಕುರಿತು ಪ್ರತಿಕ್ರಿಯೆಯನ್ನು ನೀಡುವ ಆಯ್ಕೆಯನ್ನು ಹೊಂದಿರುತ್ತಾರೆ.