ಮನೆಯಲ್ಲಿ ಇದ್ದರೆ ಚಿನ್ನ ಚಿಂತೆಯು ಏತಕೆ ಇನ್ನ, ಈ ಜಾಹೀರಾತು ಎಲ್ಲರೂ ಕೇಳೆ ಇರುತ್ತೀರಿ. ಇದು ಎಲ್ಲರ ಅನುಭವಕ್ಕೂ ಬಂದೆ ಇರುತ್ತದೆ. ಮನೆಯೆಂದ ಮೇಲೆ ಹಣಕಾಸು ಒತ್ತಡಗಳು ಆಗಿಂದಾಗೆ ಕಾಡುತ್ತಲೇ ಇರುತ್ತವೆ. ಅಂತಹ ಸಂದರ್ಭದಲ್ಲಿ ಮನೆಯಲ್ಲಿ ಚಿನ್ನ ಇದ್ದರೆ ಅದು ನಿಜಕ್ಕೂ ಒಳ್ಳೆಯದು. ಮನೆಯೊಂದೆಯಲ್ಲ, ಸಣ್ಣ ಪುಟ್ಟ ಹೂಡಿಕೆಯ ಅವಶ್ಯಕತೆಗೆ ಅಥವಾ ಭವಿಷ್ಯದ ಆರೋಗ್ಯ ಸೇವೆಗೆ ಈ ಚಿನ್ನ ನಮಗೆ ಆಧಾರವಾಗುತ್ತದೆ. ನಮ್ಮನ್ನು ಹಣಕಾಸಿನ ತುರ್ತಿನಲ್ಲಿ ಜೋಪಾನ ಮಾಡುವ ಚಿನ್ನ ನಮ್ಮ ಸಮಸ್ಯೆಗಳು ಮುಗಿದ ಮೇಲೆ ಪುನಃ ನಮ್ಮನ್ನೇ ಸೇರಬೇಕಾದರೆ ಅವುಗಳನ್ನು ಗಿರವಿ ಇಡುವ ಮೊದಲು, ಅವುಗಳ ಸುರಕ್ಷತೆ ಬಗ್ಗೆ ಚಿಂತಿಸಬೇಕು. ಚಿನ್ನವನ್ನು ಸಣ್ಣ ಪುಟ್ಟ ಗಿರವಿ ಅಂಗಡಿಗಳಲ್ಲಿ ಅಡವಿಟ್ಟು ಬಡ್ಡಿ ಬಾಧೆ ತಡೆಯಲಾಗದೆ ಅವುಗಳನ್ನು ಮಾರುವ ಸ್ಥಿತಿಗೆ ತಲುಪುವ ಬದಲು ಕಡಿಮೆ ಬಡ್ಡಿಗೆ ಬ್ಯಾಂಕ್ ನಲ್ಲಿ ಸುರಕ್ಷಿತವಾಗಿರಿಸಿ, ಭವಿಷ್ಯದ ದಿನಗಳಲ್ಲಿ ಹಣ ಉಳಿಸಿ, ಬಿಡಿಸಿ ಮತ್ತೆ ನಮ್ಮ ಬಳಿಯೇ ಇರಿಕೊಳ್ಳುವುದು ಒಳಿತು ಅಲ್ವಾ. ಹಾಗಾಗೀ ನಿಮ್ಮ ಚಿನ್ನದ ಮೇಲೆ ಕಡಿಮೆ ಬಡ್ಡಿಗೆ ಸಾಲ ನೀಡೋ ಬ್ಯಾಂಕ್ ಗಳ ವಿವರ ಇಲ್ಲಿದೆ ನೋಡಿ.
ಚಿನ್ನ. ಇತರೆ ಎಲ್ಲಾ ಸಾಲಗಳಿಗು ಹೋಲಿಸಿದರೆ ಬ್ಯಾಂಕ್ಗಳಲ್ಲಿ ಅತೀ ಬೇಗ ಸಾಲ ಪಡೆಯಬಹುದಾದ ಮೌಲ್ಯಯುತ ವಸ್ತು. ಚಿನ್ನವನ್ನು ಹೊರತು ಪಡಿಸಿ ಅವಶ್ಯವಿದ್ದಾಗ ಸರಿಯಾದ ಸಮಯಕ್ಕೆ ಇನ್ಯಾವ ಆಸ್ತಿಯ ಮೇಲೂ ಒಂದೇ ದಿನದಲ್ಲಿ ಸಾಲ ಸಿಗದು. ನಮಗೆ ಚಿನ್ನದ ಮೇಲಿನ ಸಾಲವನ್ನು 90 ನಿಮಿಷದಿಂದ 120 ನಿಮಿಷದ ಒಳಗೆ ಖಾತೆಗೆ ಜಮಾ ಮಾಡಲಾಗುವುದು.
ಬ್ಯಾಂಕ್ ನಲ್ಲಿ 18 ರಿಂದ 24 ಕ್ಯಾರೆಟ್ ಚಿನ್ನವನ್ನು ಅಡವಿಡಬಹುದು. ಹಾಗೆ 50ಗ್ರಾಂ ಮೌಲ್ಯದ ಗೋಲ್ಡ್ ಕಾಯಿನ್ ಮೇಲು ಸಹ ಸಾಲ ದೊರೆಯುತ್ತದೆ. ಚಿನ್ನದ ಆಭರಣ, ವಿಗ್ರಹಗಳು, ಇತರೆ ಚಿನ್ನದ ವಸ್ತುಗಳು ಮತ್ತು ಬೆಳ್ಳಿ ವಜ್ರಗಳನ್ನು ಸಹ ಒತ್ತೆ ಇರಿಸಿಕೊಳ್ಳುತ್ತದೆ. ಈ ಮೌಲ್ಯಯುತ ವಸ್ತುಗಳಿಗೆ ಮಾರುಕಟ್ಟೆ ಮೌಲ್ಯಕ್ಕೆ ಅನುಗುಣವಾಗಿ 65% ನಿಂದ 75%( ಈ ಮೌಲ್ಯ ಒಂದು ಬ್ಯಾಂಕ್ ನಿಂದ ಇನ್ನೊಂದು ಬ್ಯಾಂಕ್ಗೆ ವಿಭಿನ್ನವಾಗಿ ಇರುತ್ತದೆ) ವರೆಗೆ ಸಾಲವಾಗಿ ನೀಡುತ್ತಾರೆ. ಅಂದರೆ ಒಂದು ಗ್ರಾಂ ಚಿನ್ನದ ಬೆಲೆ 5000 ಇದ್ದರೆ ಆ ಮೊತ್ತದ 65%-75% ಭಾಗವನ್ನು ಮಾತ್ರ ನೀಡಲಾಗುತ್ತದೆ. ನಾವು ಈ ವಸ್ತುಗಳ ಮೇಲೆ 20.000 ದಿಂದ 1,50,00,000 ವರೆಗೆ ಸಾಲವನ್ನು ಪಡೆಯುವ ಅವಕಾಶವಿದೆ.
ಇನ್ನು ನಾವು ಒತ್ತೆ ಇಟ್ಟ ಸ್ವತ್ತನ್ನು, ಒಪ್ಪಿದ ಅವಧಿಗೂ ಮುನ್ನ ಸ್ವಾಧೀನ ಪಡಿಸಿಕೊಳ್ಳಬೇಕಾದರೆ ಗಿರವಿ ಇಟ್ಟ 45 ದಿನದಿಂದ 6 ತಿಂಗಳ ತನಕ ಕಾಯಬೇಕಾಗುತ್ತದೆ. ಕೆಲವೊಂದು ಬ್ಯಾಂಕ್ಗಳು ದಂಡದೊಂದಿಗೆ ಯಾವಾಗ ಬೇಕಾದರೂ ಸ್ವಾಧೀನ ಪಡಿಸಿಕೊಳ್ಳಲು ಅನುವು ಮಾಡಿಕೊಟ್ಟರೇ, ಇನ್ನು ಕೆಲವು ಬ್ಯಾಂಕ್ಗಳು ಗ್ರಾಹಕರಿಗೆ ಅವರಿಚ್ಚೆಯಂತೆ ಅವಧಿಗೂ ಮುನ್ನ ಯಾವಾಗ ಬೇಕಾದರೂ ಸ್ವಾಧೀನ ಪಡಿಸಿಕೊಳ್ಳುವ ಸ್ವಾತಂತ್ರ್ಯವನ್ನು ನೀಡಿದೆ. ಸ್ವತ್ತು ಸ್ವಾಧೀನ ಶುಲ್ಕ ಕೆಲವು ಬ್ಯಾಂಕ್ಗಳಲ್ಲಿ 1%ಇದ್ದರೆ ಕೆಲವು ಬ್ಯಾಂಕ್ಗಳಲ್ಲಿ NIL. ಉದಾಹರಣೆಗೆ ಬ್ಯಾಂಕ್ ಆಫ್ ಬರೋಡ ದಲ್ಲಿ 3 ಲಕ್ಷದವರೆಗೆ ಯಾವುದೇ ಸ್ವತ್ತು ಸ್ವಾಧೀನ ಶುಲ್ಕ ಇರುವುದಿಲ್ಲ.
ಚಿನ್ನದ ಮೇಲೆ ಸಾಲ ನೀಡುವ ಟಾಪ್ ಲಿಸ್ಟೆಡ್ ಬ್ಯಾಂಕ್ಗಳ ಪಟ್ಟಿ ಮತ್ತು ಅವುಗಳು ಬಡ್ಡಿ ದರದ ವಿವರ ಇಲ್ಲಿದೆ
- ಎಕ್ಸಿಸ್ ಬ್ಯಾಂಕ್ – 13.50% p.a.to 16.95% p.a.( Rs.25,001 to Rs.25 lakh)
- ಹೆಚ್ಡಿಎಫ್ಸಿ – 11% p.a. to 16% p.a. (Rs.10,000 onwards)
- ಕೆನಾರಾ ಬ್ಯಾಂಕ್ – 7.35% p.a. (Rs.5,000 to Rs.35 lakh)
- ಮುತ್ತೂಟ್ ಫೈನಾನ್ಸ್ – 12% p.a. to 26% p.a. (Rs.1,500 onwards)
- ಭಾರತೀಯ ಸ್ಟೇಟ್ ಬ್ಯಾಂಕ್ – 7.00% p.a. ( Rs.20,000 to Rs.50 lakh)
- ಕೋಟಕ್ ಮಹಿಂದ್ರಾ – 10.00% p.a. – 17.00% p.a. +Rs.20,000 to Rs.1.5 crore)
- ಮಣಪುರಂ – 9.90% p.a. to 24.00% p.a. (ಸ್ವತ್ತಿನ ಆಧಾರದ ಮೇಲೆ)
- ಬ್ಯಾಂಕ್ ಆಫ್ ಬರೋಡಾ – 8.85% p.a. (Up to Rs.50 lakh)
- ಯೂನಿಯನ್ ಬ್ಯಾಂಕ್ -8.40%-9.65%
- ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ -8.45%-8.55%