ನಾವು ನಮ್ಮ ಆದಾಯ ಖರ್ಚು ವೆಚ್ಚ ಉಳಿತಾಯ ಎಲ್ಲವನ್ನು ಮನದಟ್ಟು ಮಾಡಿಕೊಂಡು, ನಿಯಮಿತವಾಗಿ ಇಂತಿಷ್ಟು ಎಂಬಂತೆ ಮ್ಯುಚುವಲ್ ಫಂಡ್ ನಲ್ಲಿ ನಿರಂತರವಾಗಿ ಹೂಡಿಕೆ ಮಾಡುವ ಪದ್ಧತಿಯನ್ನೇ ವ್ಯವಸ್ಥಿತ ಹೂಡಿಕೆ ಯೋಜನೆ ಎನ್ನುವುದು. ಸಿಂಪಲ್ ಆಗಿ ಹೇಳುವುದಾದರೆ ಹೂಡಿಕೆ ಮಾಡಲು ಬಳಸುವ ಟೆಕ್ನಿಕ್ ಅಥವಾ ವಿಧಾನ. ನಾವು ಪೋಸ್ಟ್ ಆಫೀಸ್ ಅಥವಾ ಬ್ಯಾಂಕ್ ಖಾತೆ ತೆರೆಯುವ ಆರ್ಡಿ ಯಂತೆ ಈ SIP ಕೆಲಸ ಮಾಡುತ್ತೆ. ಆದರೆ ಆಲ್ಲಿ ಸಿಗುವ ಬಡ್ಡಿ ದರ ಒಂದೇ ತರನಾಗಿರುತ್ತದೆ. ಆದರೆ ಇಲ್ಲಿ ಅದು ಭಿನ್ನವಾಗಿ ಇರುತ್ತದೆ
ಹಾಗಾದರೆ ಈ ಯೋಜನೆ ಹೇಗೆ ಕಾರ್ಯ ನಿರ್ವಹಿಸುತ್ತದೆ?
ಏಕ ಅಥವಾ ಬಹು ವ್ಯವಸ್ಥಿತ ಹೂಡಿಕೆ ಯೋಜನೆಗಳಿಗೆ ಅರ್ಜಿ ಸಲ್ಲಿಸಿದ ನಂತರ, ಹೂಡಿಕೆಯ ಸಮಾನ ಮೊತ್ತವನ್ನು ಸ್ವಯಂಚಾಲಿತವಾಗಿ ಹೂಡಿಕೆದಾರರ ಬ್ಯಾಂಕ್ ಖಾತೆಯಿಂದ ವರ್ಗಾಯಿಸಲಾಗುತ್ತದೆ ಮತ್ತು ಹೂಡಿಕೆದಾರರು ನಿಗದಿತ ಸಮಯದ ಅವಧಿಯಲ್ಲಿ ಖರೀದಿಸಿದ ಮ್ಯುಚುವಲ್ ಫಂಡ್ಗಳಲ್ಲಿ ಹೂಡಿಕೆ ಮಾಡುತ್ತಾರೆ. ದಿನದ ಅಂತ್ಯದ ವೇಳೆಗೆ, ಹೂಡಿಕೆದಾರರು ಮ್ಯುಚುವಲ್ ಫಂಡ್ಗಳ ನಿವ್ವಳ ಆಸ್ತಿ ಮೌಲ್ಯವನ್ನು ಅವಲಂಬಿಸಿ ನಿಯೋಜಿಸಲಾದ ಮ್ಯುಚುವಲ್ ಫಂಡ್ಗಳ ಯುನಿಟ್ ಗಳನ್ನು ಪಡೆಯುತ್ತಾರೆ .
ಉದಾಹರಣೆಗೆ ಮ್ಯುಚುವಲ್ ಫಂಡ್ನ ಒಂದು ಯುನಿಟ್ ಬೆಲೆ 500 ರೂಪಾಯಿ ಎಂದು ಭಾವಿಸೋಣ. ಈ ಹಣವನ್ನು ಹೂಡಿಕೆದಾರ ತಮ್ಮ ಬ್ಯಾಂಕ್ ಖಾತೆಯಿಂದ ನೇರವಾಗಿ AMC ( Asset management company) ಗಳಲ್ಲಿ ಏಕೆಂದರೆ ಈ AMC ಕಂಪನಿಗಳು SEBI ಪರವಾನಿಗೆ ಪಡೆದಿರುತ್ತವೆ. ಮತ್ತು ಸುರಕ್ಷಿತ ಮತ್ತು ಸುವ್ಯವಸ್ಥಿತ ಕಂಪನಿಗಳಾಗಿರುತ್ತವೆ. ಉದಾಹರಣೆ : HDFC AMC, ICICI AMC, AXIS AMC, MIRAE ASSET, SBI AMC, MOTILAL OSWAL AMC. ಇಲ್ಲಿ SIPಯ ನಿಯಮದಂತೆ ಇಷ್ಟು ದಿನಕ್ಕೆ ಎಂಬಂತೆ ಹೂಡಿಕೆ ಮಾಡಲಾಗುತ್ತದೆ. ಹೂಡಿಕೆಯಿಂದ ಬಂದ ಲಾಭ ನಷ್ಟ ಎರಡರ ಫಲವು ಹೂಡಿಕೆದರಾರ ಖಾತೆಗೆ ನೇರವಾಗಿ ಜಮವಾಗುತ್ತದೆ. ಇಲ್ಲಿ ಹೂಡಿಕೆದಾರ ತಾನು ಹೂಡಿದ್ದ ಹಣವನ್ನು ಯಾವಾಗ ಬೇಕಾದರೂ ಹಿಂಪಡೆಯಲು ಅವಕಾಶವಿದೆ. ಮತ್ತು ಈ ವಿಧದಲ್ಲಿ ಹಲವು ಲಾಭಗಳಿವೆ. ಅವು ಹೂಡಿಕೆಯು ಸುಲಭ, ರೂಪಾಯಿ ವೆಚ್ಚದ ಸರಾಸರಿ, ಪವರ್ ಆಫ್ ಕಾಂಪೌಂಡಿಂಗ್, ಲಾಭದಾಯಕ ಪರ್ಯಾಯ, ಬಂಡವಾಳ ರಕ್ಷಣೆ, ಹಣಕಾಸು ಶಿಸ್ತು ಮತ್ತು ಆರ್ಥಿಕ ಗುರಿಗಳಂತಹ ಬಹು ಪ್ರಯೋಜನಗಳನ್ನು SIP ಹೊಂದಿದೆ.
ಉದಾಹರಣೆಗೆ 1 unit MF=100 ಎಂದರೆ ನೀವು ತಿಂಗಳಿಗೆ 10 ಯುನಿಟ್ ಅನ್ನು ಖರೀದಿಸುತ್ತಿದ್ದೀರಿ. ಅದನ್ನು ಮುಂದಿನ ಎರಡು ವರ್ಷಗಳವರೆಗೂ ಹೂಡಿಕೆ ಮಾಡುತ್ತಲೇ ಬಂದರೆ ಅದರ ಒಟ್ಟಾರೆ ಮೊತ್ತ ಎರಡು ವರುಷಕ್ಕೆ 24000 ಕ್ಕೂ ಹೆಚ್ಚಿರುತ್ತದೆ. ಈ ವ್ಯವಸ್ಥಿತ ಹಣಕಾಸಿನ ಶಿಸ್ತನ್ನೇ SIP ಎನ್ನುವುದು. ಮತ್ತು ಈ ಯುನಿಟ್ ಗಳ ಬೆಲೆ ಮುಂದಿನ ದಿನಗಳಲ್ಲಿ ಹೆಚ್ಚಾಗಬಹುದು. ಅಂತಹ ಸಂದರ್ಭದಲ್ಲಿ ನಾವು ಖರೀದಿಸಿದ ಮೌಲ್ಯ ಎರಡರಷ್ಟು ಆಗುವ ಸಾಧ್ಯತೆ ಇದೆ. ಈ ಎಲ್ಲ ಏರಿಳಿತ, ಹೂಡಿಕೆ, ಕಂಪನಿ ಆಯ್ಕೆ ಎಲ್ಲವನ್ನೂ ಫಂಡ್ ಮ್ಯಾನೇಜರ್ ಗಳು ನಿರ್ವಹಿಸುತ್ತಾರೆ.