ಬಾಬಾ ಪರಮಾಣು ಸಂಶೋಧನಾ ಸಂಸ್ಥೆ 4374 ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಹಾಗೂ ಟ್ರೈನಿ ಸ್ಕೀಮ್ ಮೂಲಕ ಭರ್ತಿ ಮಾಡಲು ಅಧಿಸೂಚನೆ ಬಿಡುಗಡೆ ಮಾಡಿದೆ. ಹುದ್ದೆಗಳ ಹೆಸರು, ವಿದ್ಯಾರ್ಹತೆ, ಪ್ರಮುಖ ದಿನಾಂಕಗಳು, ಅರ್ಜಿ ವಿಧಾನ, ಅರ್ಜಿ ಶುಲ್ಕ, ನೋಟಿಫಿಕೇಶನ್ ಲಿಂಕ್, ಇತರೆ ಮಾಹಿತಿಗಳನ್ನು ಕೆಳಗಿನಂತೆ ನೀಡಲಾಗಿದೆ.
ನೇರ ನೇಮಕಾತಿ ಹುದ್ದೆಗಳು ಹುದ್ದೆಗಳ ಸಂಖ್ಯೆ
ಟೆಕ್ನೀಷಿಯನ್ ಆಫೀಸರ್ / ಸಿ : 181
ಸೈಂಟಿಫಿಕ್ ಅಸಿಸ್ಟಂಟ್ /ಬಿ : 7
ಟೆಕ್ನೀಷಿಯನ್/ಬಿ : 24
ಶೈಕ್ಷಣಿಕ ಅರ್ಹತೆಗಳು
ಟೆಕ್ನೀಷಿಯನ್ ಆಫೀಸರ್ / ಸಿ : ಎಂಎಸ್ಸಿ / ಎಂ.ಲಿಬ್ / ಬಿಇ / ಬಿ.ಟೆಕ್.
ಸೈಂಟಿಫಿಕ್ ಅಸಿಸ್ಟಂಟ್ /ಬಿ : ಎಂಎಸ್ಸಿ / ಬಿಎಸ್ಸಿ
ಟೆಕ್ನೀಷಿಯನ್/ಬಿ : ಎಸ್ಎಸ್ಸಿ ಜತೆಗೆ ಸೆಕೆಂಡ್ ಕ್ಲಾಸ್ ಬಾಯ್ಲರ್ ಅಟೆಂಡಂಟ್ಸ್ ಸರ್ಟಿಫಿಕೇಟ್.
ಟ್ರೈನಿಂಗ್ ಸ್ಕೀಮ್ (ಸ್ಟೈಫಂಡರಿ ಟ್ರೈನಿ) ಹುದ್ದೆಗಳ ಸಂಖ್ಯೆ
ಕೆಟಗರಿ 1 ಹುದ್ದೆಗಳು: 1216
ಕೆಟಗರಿ 2 ಹುದ್ದೆಗಳು: 2946
ಕೆಟಗರಿ 1 ಹುದ್ದೆಗಳಿಗೆ 3 ವರ್ಷದ ಡಿಪ್ಲೊಮ ಪಾಸ್ ಅಥವಾ ಬಿಎಸ್ಸಿ ಪಾಸ್.
ಕೆಟಗರಿ 2 ಹುದ್ದೆಗಳಿಗೆ ಐಟಿಐ ಸರ್ಟಿಫಿಕೇಟ್ ಅನ್ನು ಹೊಂದಿರಬೇಕು.
ಅಪ್ಲಿಕೇಶನ್ ಹಾಕುವ ವಿಧಾನ
ವೆಬ್ಸೈಟ್ https://www.barc.gov.in/ ಗೆ ಭೇಟಿ ನೀಡಿ. ಓಪನ್ ಆಗುವ ಮುಖಪುಟದಲ್ಲಿ ‘Career Opportunities > Recruitment > New Vacancies’ ಆಯ್ಕೆ ಮಾಡಿ ಕ್ಲಿಕ್ ಮಾಡಿ. ಇನ್ನೊಂದು ವೆಬ್ಪೇಜ್ ಓಪನ್ ಆಗುತ್ತದೆ. ಇಲ್ಲಿ ಜಾಹಿರಾತು ಸಂಖ್ಯೆ 03/2023 /BARC ಮುಂದಿರುವ ‘Apply Online’ ಎಂದಿರುವ ಲಿಂಕ್ ಕ್ಲಿಕ್ ಮಾಡಿ. ನಂತರ ಅರ್ಜಿ ಸಲ್ಲಿಸಿ.
ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 24-04-2023 ರ ರಾತ್ರಿ 10-00 ಗಂಟೆವರೆಗೆ.
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 22-05-2023 ರ ರಾತ್ರಿ 11-59 ಗಂಟೆವರೆಗೆ.
ಅರ್ಜಿ ಶುಲ್ಕ ಯಾವ ಹುದ್ದೆಗೆ ಎಷ್ಟು?
ಟೆಕ್ನೀಷಿಯನ್ ಆಫೀಸರ್ / ಸಿ : Rs.500
ಸೈಂಟಿಫಿಕ್ ಅಸಿಸ್ಟಂಟ್ /ಬಿ : Rs.150.
ಟೆಕ್ನೀಷಿಯನ್/ಬಿ : Rs.100.
ಕೆಟಗರಿ 1 ಹುದ್ದೆ : Rs.150.
ಕೆಟಗರಿ 2 ಹುದ್ದೆ: Rs.100.
BARC Recruitment 2023 Notification