ಮೊಟ್ಟೆಯಲ್ಲಿ ವಿಟಮಿನ್ A, E, B6, B12 ಥೈಮೆನ್, ರೈಬೊಫ್ಲಾವಿನ್ ಫೊಲಾಟೆ, ಕಬ್ಬಿಣ, ಫೋಸ್ಪರಸ್, ಮೆಗ್ನೀಷಿಯಂ, ಸೆಲೆನಿಯಂ ಮತ್ತು ಇತರ ಹಲವಾರು ರೀತಿಯ ಪೋಷಕಾಂಶಗಳು ಲಭ್ಯವಿದೆ. ಮೊಟ್ಟೆ ಸೇವನೆಯಿಂದ ದೇಹಕ್ಕೆ ವಿವಿಧ ಪೌಷ್ಟಿಕಾಂಶ, ಪ್ರೋಟೀನ್, ಸತು ಮತ್ತು ಕೊಲೈನ್ ಎಂಬ ಅಂಶ ಲಭ್ಯವಾಗುತ್ತದೆ. ಇದು ದಿನದ ಚಟುವಟಿಕೆಗಳಿಗೆ ಅಗತ್ಯವಾದ ಶಕ್ತಿಯನ್ನು ನೀಡುತ್ತದೆ. ಒಂದು ವಾರದಲ್ಲಿ ಮೂರರಿಂದ ಆರು ಮೊಟ್ಟೆಗಳನ್ನು ಅಥವಾ ಪ್ರತಿದಿನ ಒಂದು ಮೊಟ್ಟೆ ಸೇವಿಸಿದರೆ ದೇಹಕ್ಕೆ ಅನೇಕ ರೀತಿಯ ಲಾಭಗಳಿವೆ.
ಮೊಟ್ಟೆಯಿಂದ ಅನೇಕ ಖಾದ್ಯಗಳನ್ನು ತಯಾರಿಸಲಾಗುತ್ತೆ. ಅದರಲ್ಲಿ ಎಗ್ ಬುರ್ಜಿ ರೆಸಿಪಿ ವಿಶೇಷವಾದದ್ದು. ಕಡಿಮೆ ಸಮಯದಲ್ಲಿ ತಯಾರಿಸಬಹುದಾದ ಈ ಎಗ್ ಬುರ್ಜಿ ಒಳ್ಳೆಯ ಬ್ರೇಕ್ ಫಾಸ್ಟ್ ಕೂಡ ಹೌದು. ಹಾಗಿದ್ದರೆ ಬನ್ನಿ ಇಂದು ಎಗ್ ಬುರ್ಜಿ ಮಾಡುವುದು ಹೇಗೆ ಎಂಬುದನ್ನು ಕನ್ನಡ ಅಡ್ವೈಜರ್ ತಿಳಿಸಿಕೊಡಲಿದೆ.
ಬೇಕಾಗುವ ಸಾಮಾಗ್ರಿಗಳು:
- ಮೊಟ್ಟೆ – 4-5
- ಹೆಚ್ಚಿಕೊಂಡ ನುಗ್ಗೆ ಸೊಪ್ಪು – 1 ಕಪ್
- ಗರಂ ಮಸಾಲ – 1 ಚಮಚ
- ಹಸಿ ಮೆಣಸಿನ ಕಾಯಿ 3
- ಹೆಚ್ಚಿದ ಈರುಳ್ಳಿ – 1 ಕಪ್
- ಟೊಮೋಟೊ – 2
- ಲವಂಗ – 1-2
- ಚೆಕ್ಕೆ – 4
- ಜೀರ್ಗೆ – 1 ಚಮಚ
- ನಿಂಬೆ ರಸ – 2 ಚಮಚ
- ಎಣ್ಣೆ – 1 ಕಪ್
- ಅರಿಶಿಣ ಪುಡಿ – 1 ಚಮಚ
- ಉಪ್ಪು – ರುಚಿಗೆ ತಕ್ಕಷ್ಟು
- ಅಲಂಕಾರಕ್ಕೆ ಕೊತ್ತಂಬರಿ ಸೊಪ್ಪು
ಮಾಡುವ ವಿಧಾನ
ಒಂದು ಬಟ್ಟಲಿನಲ್ಲಿ ಮೊಟ್ಟೆಯನ್ನು ಒಡೆದು ಹಾಕಿ ಚೆನ್ನಾಗಿ ಕದಡಿಕೊಳ್ಳಿ. ಸ್ಟೌ ಮೇಳೆ ಪ್ಯಾನ್ ಇಟ್ಟು ಎಣ್ಣೆ ಬಿಸಿ ಮಾಡಿ ಅದಕ್ಕೆ ಚೆಕ್ಕೆ, ಲವಂಗ, ಜೀರಿಗೆ ಹಾಕಿ ಹುರಿದುಕೊಳ್ಳಿ. ನಂತರ ಇದಕ್ಕೆ ಹಸಿಮೆಣಸಿನ ಕಾಯಿ, ಈರುಳ್ಳಿ, ಟೊಮೋಟೊ, ಉಪ್ಪು, ನುಗ್ಗೆಸೊಪ್ಪು, ಅರಿಶಿಣ ಪುಡಿ, ಗರಂ ಮಸಾಲ ಪುಡಿ, ಮೊಟ್ಟೆ ಮಿಶ್ರಣ ಸೇರಿಸಿ ನಿರಂತರವಾಗಿ ತಿರುಗಿಸುತ್ತಲೇ ಹುರಿಯಿರಿ. ಮೊಟ್ಟೆ ಸ್ಕ್ರಂಬಲ್ಡ್ ಆದ ಮೇಲೆ ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಈಗ ನಿಂಬೆ ರಸ ಹಾಕಿ ಮಿಕ್ಸ್ ಮಾಡಿದರೆ ಎಗ್ ಬುರ್ಜಿ ಸವಿಯಲು ಸಿದ್ಧ. ಸರ್ವಿಂಗ್ ಬೌಲ್’ಗೆ ಹಾಕಿ ಚಪಾತಿ ಅಥವಾ ರೊಟ್ಟಿ, ಬ್ರೆಡ್ ಮಾತ್ರವಲ್ಲ, ಅನ್ನದ ಜೊತೆಗೂ ಎಗ್ ಬುರ್ಜಿ ತಿನ್ನಬಹುದು.
Egg bhurji is a great spicy scrambled-egg-style dish. Nothing makes our mouths water more than a plate of delicious egg bhurji. Egg bhurji is easy to make. try it at home and taste it.