ಮೈಸೂರು: ಕೇರಳ ರಾಜ್ಯದಿಂದ ಟನ್ ಗಟ್ಟಲೆ ತ್ಯಾಜ್ಯ ವಸ್ತುಗಳು ಮೈಸೂರಿಗೆ ರವಾನೆಯಾಗುತ್ತಿರುವ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ. ಕೇರಳವು ಪ್ಲಾಸ್ಟಿಕ್, ಬಯೋ ವೇಸ್ಟ್, ಸಾಲಿಡ್ ವೇಸ್ಟ್, ಮೆಡಿಕಲ್ ವೇಸ್ಟ್ ಎಲ್ಲದಕ್ಕೂ ಮೈಸೂರು(mysuru) ನಗರವನ್ನು ಕಸದ ತೊಟ್ಟಿ ಮಾಡಿಕೊಂಡಿದೆ. ಪ್ರತಿನಿತ್ಯ 10-15 ಲಾರಿಗಳಲ್ಲಿ ತ್ಯಾಜ್ಯ ವಸ್ತುಗಳು ಮೈಸೂರಿಗೆ ಬರುತ್ತಿವೆ.
ಹೌದು. ಸ್ಥಳೀಯರ ಮಾಹಿತಿ ಆಧಾರದ ಮೇಳೆ ನಗರಪಾಲಿಕೆ ಅಧಿಕಾರಿಗಳು, ಪಾಲಿಕೆ ಸದಸ್ಯರು ಕಾರ್ಯಾಚರಣೆ ನಡೆಸಿದ್ದಾರೆ. ತ್ಯಾಜ್ಯ ಹೊತ್ತು ತಂದಿದ್ದ ಲಾರಿಯನ್ನು ಮೈಸೂರು-ನಂಜನಗೂಡು ರಸ್ತೆಯಲ್ಲಿ ಜಪ್ತಿಮಾಡಲಾಗಿದೆ. ಈ ವೇಳೆ ಪ್ರತಿನಿತ್ಯ 10-15 ಲಾರಿಗಳಲ್ಲಿ ತ್ಯಾಜ್ಯ ವಸ್ತುಗಳು ಮೈಸೂರಿಗೆ ಬರುತ್ತಿವೆ ಎಂಬ ವಿಷಯ ತಿಳಿದುಬಂದಿದೆ.
ಮೈಸೂರಿನ ರಾಜೀವ್ ನಗರ, ಭಾರತ್ ನಗರ ಮತ್ತು ಬನ್ನೂರು ರಸ್ತೆಯ ರಂಗಾಚಾರಿ ಹುಂಡಿಯ ಖಾಸಗಿ ಡಂಪಿಂಗ್ ಯಾರ್ಡ್ ಗಳಿಗೆ ಈ ಕಸ ರವಾನೆಯಾಗುತ್ತಿದೆ. ಒಂದು ಲೋಡ್ ಸಾಗಿಸಲು 25 ಸಾವಿರ ರೂಪಾಯಿ ಪಡೆಯಲಾಗುತ್ತದೆ ಎಂದು ಹೇಳಲಾಗಿದೆ. ಸ್ಥಳಕ್ಕೆ ನಗರಪಾಲಿಕೆ ಆರೋಗ್ಯಾಧಿಕಾರಿ ಡಾ. ರಾಮಚಂದ್ರ, ನಗರಪಾಲಿಕೆ ಸದಸ್ಯ ಪ್ರಶಾಂತರ ಗೌಡ, ಪರಿಸರ ಮಾಲಿನ್ಯ ನಿಯಂತ್ರಣಾಧಿಕಾರಿ ಮಂಜುನಾಥ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ ಈ ಬಗ್ಗೆ ಮೈಸೂರು ಗ್ರಾಮಾಂತರ ಪೊಲೀಸರಿಗೆ ದೂರು ನೀಡಲಾಗಿದೆ.
Shocking News to Mysuru. Tons of wastage’s from Kerala state transported to Mysuru. plastic, bio waste, solid waste and medical Waste materials are coming to Mysore daily in 10-15 lorries. The lorry carrying waste was seized on Mysore-Nanjangud road.