ತಮ್ಮತ್ರ ಮಕ್ಕಳನ್ನ ಓದಿಸೋಕೆ ಸಾಕಷ್ಟು ಹಣ ಇಲ್ಲಾ ಅಂತ ಹಲವು ಪೋಷಕರು ಮಕ್ಕಳನ್ನ ಜಸ್ಟ್ SSLC ಮತ್ತು PUC ನಂತರ ಎಜುಕೇಷನ್ ಸ್ಟಾಪ್ ಮಾಡಿಸೋರೆ ಹೆಚ್ಚು. ಆದರೆ ಕಾಲ ಬದಲಾಗಿದೆ. ಈಗ ವಿದ್ಯಾರ್ಥಿಗಳೇ ಸ್ವಲ್ಪ ಎಚ್ಚೆತ್ತುಕೊಂಡ್ರೆ ತಮ್ಮ ಆಸಕ್ತಿಯ ಶಿಕ್ಷಣ ಪಡೆಯಲು ಹಲವು ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಅಡಿಯಲ್ಲಿ ಸ್ಕಾಲರ್ಶಿಪ್ ಪಡೆಯಬಹುದಾಗಿದೆ.
ಹೌದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಿಂದಿಗಿಂತಲೂ ಈಗ ವಿದ್ಯಾರ್ಥಿಗಳು ಸ್ಕಾಲರ್ಶಿಪ್ ಪಡೆಯುವುದನ್ನು ಸರಳಗೊಳಿಸಿವೆ. ಮೊದಲಿನಂತೆ ವಿದ್ಯಾರ್ಥಿಗಳು ಹಲವು ಡಾಕ್ಯುಮೆಂಟ್ಗಳನ್ನು ಕೈಯಲ್ಲಿ ಹಿಡಿದು ಹೋಬಳಿ, ತಾಲ್ಲೂಕು ಕಛೇರಿ, ಜಿಲ್ಲಾ ಕಛೇರಿ, ಬ್ಯಾಂಕ್ ಎಂದು ಓಡಾಡುವುದನ್ನು ತಪ್ಪಿಸಿವೆ. ವಿದ್ಯಾರ್ಥಿಗಳು ಕೇವಲ ಕುಳಿತಲ್ಲಿಯೇ ತಮ್ಮ ಮೊಬೈಲ್ನಲ್ಲಿಯೇ ವಿದ್ಯಾರ್ಥಿ ವೇತನಕ್ಕಾಗಿ ಆನ್ಲೈನ್ನಲ್ಲಿ ಅರ್ಜಿಸಲ್ಲಿಸಬಹುದಾಗಿದೆ.
ಅಂದಹಾಗೆ ಇಂದಿನ ಲೇಖನದಲ್ಲಿ ಅಂತಹ ವಿದ್ಯಾರ್ಥಿ ಸ್ಕಾಲರ್ಶಿಪ್ ಗಳಲ್ಲಿ ಒಂದಾದ ಪಿಎಂ ಮೋದಿ ಸ್ಕಾಲರ್ಶಿಪ್(PM Modi Scholarship) ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸುತ್ತಿದ್ದೇವೆ. ಮಾಹಿತಿ ಈ ಕೆಳಗಿನಂತಿದೆ.
ಉನ್ನತ ಮತ್ತು ತಾಂತ್ರಿಕ ಶಿಕ್ಷಣಗಳಾದ ಬಿಇ, ಬಿಟೆಕ್, ವೈದ್ಯಕೀಯ, ಬಿಬಿಎ, ಬಿಸಿಎ, ಫಾರ್ಮಸಿ, ಇಂಜಿನಿಯರಿಂಗ್ ಇತ್ಯಾದಿ ವೃತ್ತಿಪರ ಶಿಕ್ಷಣದಲ್ಲಿ ಪ್ರವೇಶ ಪಡೆಯ ಬಯಸುವ SSLC ಮತ್ತು PUC ತರಗತಿ ವಿದ್ಯಾರ್ಥಿಗಳಿಗೆ ಪಿಎಂ ಮೋದಿ ಸ್ಕಾಲರ್ಶಿಪ್ ಯೋಜನೆ ಜಾರಿಗೊಳಿಸಲಾಗಿದೆ. ಈ ಮೇಲೆ ತಿಳಿಸಿದ ಉನ್ನತ ಶಿಕ್ಷಣ ಕೋರ್ಸ್ಗಳಿಗೆ ಸೇರಲು ಬಯಸುವವರು ಈ ಸ್ಕಾಲರ್ಶಿಪ್ ಗೆ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.
ಯಾವ ಕೋರ್ಸ್ಗಳಿಗೆ ಪಿಎಂ ಮೋದಿ ಸ್ಕಾಲರ್ಶಿಪ್ ಲಭ್ಯ?
-ಇಂಜಿನಿಯರಿಂಗ್
-ವೈದ್ಯಕೀಯ
-ಪಿಎಚ್ಡಿ
-ಸ್ನಾತಕೋತ್ತರ ಪದವಿ(ಎಂಎ, ಎಂಕಾಂ, ಎಂಎಸ್ಸಿ)
-ಪದವಿ(ಬಿಎ, ಬಿಕಾಂ, ಬಿಎಸ್ಸಿ)
ಪಿಎಂ ಮೋದಿ ಸ್ಕಾಲರ್ಶಿಪ್ ಪಡೆಯಲು ಇರಬೇಕಾದ ಅರ್ಹತೆಗಳು
– ಭಾರತೀಯ ವಿದ್ಯಾರ್ಥಿಯಾಗಿದ್ದು, ಇಲ್ಲಿಯೇ ವಾಸಮಾಡುತ್ತಿರಬೇಕು
– ವಿದ್ಯಾರ್ಥಿಯು ಈ ಹಿಂದಿನ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡಿದ್ದು, ಮೊದಲ ಸ್ಥಾನ ಪಡೆದಿರಬೇಕು
– ವಿದ್ಯಾರ್ಥಿಯ ಕುಟುಂಬದ ಆದಾಯ ವಾರ್ಷಿಕವಾಗಿ ರೂ.6,00,000ಕ್ಕಿಂತ ಕಡಿಮೆ ಇರಬೇಕು. ವಿದ್ಯಾರ್ಥಿಯ ವಯಸ್ಸು 18 ವರ್ಷದಿಂದ 25 ವರ್ಷಗಳೊಳಗಿರಬೇಕು.
ಪ್ರಧಾನಮಂತ್ರಿ ವಿದ್ಯಾರ್ಥಿವೇತನ 2018-2019 ಪಡೆಯಲು ಮಾನದಂಡಗಳು
-ವಿದ್ಯಾರ್ಥಿಯು ಮಾನ್ಯತೆ ಪಡೆದ ಬೋರ್ಡ್/ಮಂಡಳಿಯಲ್ಲಿ ವಿದ್ಯಾರ್ಥಿಗಳು PUC ತರಗತಿಯಲ್ಲಿ ಕನಿಷ್ಠ ಶೇ.75 ಅಂಕಗಳನ್ನು ಗಳಿಸಿರಬೇಕು.
– ಈ ವಿದ್ಯಾರ್ಥಿಗಳು ಮಾಸಿಕವಾಗಿ ರೂ.1000 ಹಾಗೂ ಒಟ್ಟಾರೆ ರೂ.10000 ಪಡೆಯುತ್ತಾರೆ.
– ಶೇಕಡ 85 ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ರೂ.25,000 ದೊರೆಯುತ್ತದೆ.
-ಮೇಲಿನ ವಿದ್ಯಾರ್ಥಿ ವೇತನದ ಹೊರತಾಗಿ, ಕೇಂದ್ರ ಸರ್ಕಾರವು 4 ಅಥವಾ 5 ವರ್ಷಗಳ ವೃತ್ತಿಪರ ಶಿಕ್ಷಣ ಪಡೆಯಬಯಸುವ ವಿದ್ಯಾರ್ಥಿಗಳಿಗೆ 2000 ರೂ.ನಂತೆ ವಿದ್ಯಾರ್ಥಿ ವೇತನ ನೀಡುತ್ತಿದೆ. ವಿದ್ಯಾರ್ಥಿಯು 4-5 ನೇ ವರ್ಷದಲ್ಲಿ ಈ ವೇತನ ಪಡೆಯಬಹುದಾಗಿದ್ದು, ಪಡೆಯಲು ಪ್ರತಿ ಸೆಮಿಸ್ಟರ್ನಲ್ಲಿ ಶೇ.50 ಕನಿಷ್ಠ ಅಂಕಗಳನ್ನು ಗಳಿಸಬೇಕು.
ಪಿಎಂ ಸ್ಕಾಲರ್ಶೀಪ್ ಪಡೆಯಲು ಬೇಕಾದ ಪ್ರಾಥಮಿಕ ದಾಖಲೆಗಳು
-ವಯಸ್ಸಿನ ಆಧಾರಕ್ಕಾಗಿ SSLC ಮಾರ್ಕ್ಸ್ ಕಾರ್ಡ್
-ಹಿಂದಿನ ವರ್ಷದ ಅಧಿಕೃತ ಅಂಕಪಟ್ಟಿ
– ಆಧಾರ್ ಕಾರ್ಡ್
– ಆಧಾರ್ ಕಾರ್ಡ್ ಲಿಂಕ್ ಆಗಿರುವ ಬ್ಯಾಂಕ್ ಖಾತೆ ಸಂಖ್ಯೆ
-ಪಾಸ್ಪೋರ್ಟ್ ಸೈಜಿನ ಲೇಟೆಸ್ಟ್ ಭಾವಚಿತ್ರ
-ವೃತ್ತಿಪರ ಕೋರ್ಸ್ಗೆ ಸೇರಲು ವ್ಯವಸ್ಥಿತವಾಗಿರುವ ಪ್ರವೇಶದ ದಾಖಲೆಗಳು
ಅರ್ಜಿಸಲು ಮತ್ತು ಅಧಿಕೃತ ಮಾಹಿತಿಗಾಗಿ ವೆಬ್ಸೈಟ್ scholarships.gov.in ಗೆ ಭೇಟಿ ನೀಡಿ
ಅರ್ಜಿಸಲು ಕೊನೆಯ ದಿನಾಂಕ :ಸೆಪ್ಟೆಂಬರ್ 10
ಅಲ್ಪಸಂಖ್ಯಾತರಿಗೆ ಪೂರ್ವ ಮೆಟ್ರಿಕ್ ವಿದ್ಯಾರ್ಥಿವೇತನ ಯೋಜನೆಗಾಗಿ ಕ್ಲಿಕ್ ಮಾಡಿ
ಅಲ್ಪಸಂಖ್ಯಾತರಿಗೆ ಪೋಸ್ಟ್ ಮೆಟ್ರಿಕ್ ವಿದ್ಯಾರ್ಥಿವೇತನ ಯೋಜನೆಗಾಗಿ ಕ್ಲಿಕ್ ಮಾಡಿ
ವೃತ್ತಿಪರ ಮತ್ತು ತಾಂತ್ರಿಕ ಕೋರ್ಸ್ಗಳಿಗೆ ವಿದ್ಯಾರ್ಥಿವೇತನ ಪಡೆಯಲು ಕ್ಲಿಕ್ ಮಾಡಿ
In this article Kannadaadvisor giving full details of PM Modi Scholarship. SSLC and PUC passed students can know full details about PM Modi Scholarship.