ನವದೆಹಲಿ: ಪಾಸ್ ಪೋರ್ಟ್(Passport) ಸೇವೆ ಪಡೆಯಲು ಇದ್ದ ಕಠಿಣ ಷರತ್ತುಗಳನ್ನು ಕೇಂದ್ರ ವಿದೇಶಾಂಗ ಸಚಿವಾಲಯ ಸಡಿಲಗೊಳಿಸಿದೆ. ಈ ಮೂಲಕ ಶೀಘ್ರವಾಗಿ ಎಲ್ಲರಿಗೂ ಈ ಸೇವೆ ಕೈ ಸೇರುವಂತ ಹೊಸ ಯೋಜನೆಗಳನ್ನು ರೂಪಿಸಿದೆ.
Now, through Passport Seva app, people can apply for a passport from any part of the country. Police verification will be done on the address you will give on the app. The passport will be dispatched to that address: EAM Sushma Swaraj pic.twitter.com/rdYdq6sRsb
— ANI (@ANI) June 26, 2018
ಇತ್ತೀಚೆಗೆ ನಡೆದ ಆರನೇ ರಾಷ್ಟ್ರೀಯ ಪಾಸ್ಪೋರ್ಟ್ ಸೇವಾ ದಿವಸದಂದು ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಪಾಸ್ ಪೋರ್ಟ್ ನಿಯಾಮಳಿಗಳಲ್ಲಿ ಹಲವು ತಿದ್ದುಪಡಿಗಳನ್ನು ಮಾಡಲಾಗಿದ್ದು, ಹಲವು ಕಠಿಣ ಷರತ್ತುಗಳನ್ನು ಸಡಿಲಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ. ಈ ವೇಳೆ ದೇಶದ ಯಾವುದೇ ಮೂಲೆಯಿಂದಾದರೂ ಪಾಸ್ಪೋರ್ಟ್ಗೆ ಅರ್ಜಿ ಸಲ್ಲಿಸಬಹುದಾದ ಹೊಸ ಎಂ ಪಾಸ್ಪೋರ್ಟ್ ಸೇವಾ(mPassport Seva) ಎಂಬ ಮೊಬೈಲ್ ಆ್ಯಪ್ ಅನ್ನು ಲೋಕಾರ್ಪಣೆ ಮಾಡಿದ್ದಾರೆ.
ಈ ಹೊಸ ಯೋಜನೆಯಿಂದ ದೇಶದ ನಾಗರಿಕರು ತಮ್ಮ ಮೂಲ ವಿಳಾಸದಿಂದ ದೇಶದ ಯಾವುದೇ ಭಾಗದಲ್ಲಿಯೂ ಕೂಡ ಅರ್ಜಿ ಸಲ್ಲಿಸುವ ಸೌಲಭ್ಯವನ್ನು ಪಡೆದುಕೊಂಡಿದ್ದಾರೆ. ಈ ಬದಲಾವಣೆಯಿಂದ ಉದ್ಯೋಗಕ್ಕಾಗಿ ಬೇರೆ ಕಡೆ ವಾಸಿಸುವ ಜನರಿಗೆ ಅನುಕೂಲವಾಗಿದೆ. ತಮಗೆ ಬೇಕಾದ ಸೇವಾಕೇಂದ್ರವನ್ನು ಆಯ್ಕೆಮಾಡಿಕೊಳ್ಳುವ ಸೌಲಭ್ಯವನ್ನು ಪಡೆದುಕೊಂಡಿದ್ದಾರೆ ಎಂದು ಹೇಳಿದರು.
ನಾಗರಿಕರು ತಮ್ಮ ವ್ಯಾಪ್ತಿಯಲ್ಲೇ ಬರುವ ಸೇವಾ ಕೇಂದ್ರದಲ್ಲಿ ಅರ್ಜಿ ಸಲ್ಲಿಸುವ ಕ್ರಮ, ಪತಿ-ಪತ್ನಿಯರ ಕಡ್ಡಾಯ ವಿವಾಹ ನೋಂದಣಿ ಪತ್ರ ಲಗತ್ತು, ಜನ್ಮ ದಿನಾಂಕ ಪ್ರಮಾಣ ಪತ್ರ ಹಾಗೂ ವಿಚ್ಛೇದಿತ ದಂಪತಿಗಳ ಹೆಸರು ನಮೂದುಗೊಳಿಸುವ ಕಠಿಣ ಷರತ್ತುಗಳು ಬದಲಾವಣೆಯಾಗಿವೆ.
ಇನ್ನು ಮುಂದೆ ನಿಮ್ಮ ಮೊಬೈಲ್ ಫೋನ್ನಲ್ಲಿ ಈ ಆ್ಯಪ್ ಡೌನ್ಲೋಡ್ ಮಾಡಿಕೊಂಡರೆ, ಪಾಸ್ಪೋರ್ಟ್ ಸೇವೆ ಕುರಿತ ವ್ಯವಹಾರಗಳನ್ನು ನಿರ್ವಹಿಸಬಹುದು. ಈ ಆ್ಯಪ್ ಆ್ಯಂಡ್ರಾಯ್ಡ್ ಮತ್ತು ಐಒಎಸ್ಗಳಲ್ಲಿ ಲಭ್ಯವಿದೆ.
Government of India Released the Passport Seva App. External Affairs Minister Sushma Swaraj launches mPassport Seva App. now be much easier to Getting a passport.