ಮೈಸೂರು: ನಗರದ ಊಟಿ ರಸ್ತೆಯಲ್ಲಿರುವ ಜೆಎಸ್ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನ ‘ಕನ್ನಡ ಸ್ನಾತಕೋತ್ತರ ವಿಭಾಗ’ದಲ್ಲಿ 2018-19ನೇ ಶೈಕ್ಷಣಿಕ ವರ್ಷದ ಕನ್ನಡ ಸ್ನಾತಕೋತ್ತರ ಪದವಿಗೆ ಪ್ರವೇಶ ಪ್ರಕ್ರಿಯೆಯು ಪ್ರಾರಂಭವಾಗಿದ್ದು, ಜುಲೈ ತಿಂಗಳಿನಲ್ಲಿ ತರಗತಿಗಳು ಆರಂಭವಾಗಲಿವೆ.
ಪದವಿಯಲ್ಲಿ ಕನ್ನಡವನ್ನು ಐಚ್ಛಿಕ (ಮುಖ್ಯ) ವಿಷಯವಾಗಿ ಕಲಿತಿರುವ ವಿದ್ಯಾರ್ಥಿಗಳು ಎಂ.ಎ ಕನ್ನಡಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ. ಅಂತಿಮ ಫಲಿತಾಂಶದ ನಿರೀಕ್ಷೆಯಲ್ಲಿರುವವರು ಸಹ ಅರ್ಜಿ ಸಲ್ಲಿಸಬಹುದು.
ಜೆಎಸ್ಎಸ್ ಕನ್ನಡ ಸ್ನಾತಕೋತ್ತರ ವಿಭಾಗದಲ್ಲಿ ಸಿ.ಬಿ.ಸಿ.ಎಸ್. ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳು ಸಾಂಸ್ಕೃತಿಕವಾಗಿ ವ್ಯಕ್ತಿತ್ವವನ್ನು ಬೆಳಸಿಕೊಳ್ಳುವ ದೃಷ್ಟಿಯಿಂದ – ಆಕಾಶವಾಣಿ ಕಾರ್ಯಕ್ರಮದಲ್ಲಿ ಭಾಗವಹಿಸುವುದು, ವಿಭಾಗದ ‘ಸಾಹಿತ್ಯ ವೇದಿಕೆ’ಯ ಅಡಿಯಲ್ಲಿ ಪ್ರಚಲಿತ ವಿದ್ಯಾಮಾನಗಳ ಬಗೆಗೆ ಚರ್ಚೆ-ಸಂವಾದ, ಕ್ವಿಜ್, ‘ನನ್ನ ನೋಟ’ ಎಂಬ ವಿದ್ಯಾರ್ಥಿ ಕೇಂದ್ರಿತ ವಿಚಾರ ಗೋಷ್ಠಿ, ವಿಶೇಷ ಉಪನ್ಯಾಸಗಳು, ಕ್ಷೇತ್ರಕಾರ್ಯ, ಪ್ರವಾಸ ಮುಂತಾದ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ಇವುಗಳೊಂದಿಗೆ NET ಪರೀಕ್ಷೆಗೂ ಕೂಡ ತರಬೇತಿಯನ್ನು ನೀಡಲಾಗುವುದು.
ಇದರ ಜೊತೆಗೆ ವಿಭಾಗವು ಮೈಸೂರು ವಿಶ್ವವಿದ್ಯಾನಿಲಯದಿಂದ ಸಂಶೋಧನಾ ಕೇಂದ್ರದ ಮಾನ್ಯತೆಯನ್ನು ಪಡೆದುಕೊಂಡಿದೆ, ಪ್ರಸ್ತುತ ವಿಭಾಗದಲ್ಲಿ ಐದು ಸಂಶೋಧನಾ ವಿದ್ಯಾರ್ಥಿಗಳು ಯುಜಿಸಿಯ ಜೂನಿಯರ್
ರೀಸರ್ಚ್ ಫೆಲೋಶಿಪ್ ನೊಂದಿಗೆ ಸಂಶೋಧನಾ ನಿರತರಾಗಿದ್ದಾರೆ. ಇವುಗಳಿಗೆ ಪೂರಕವಾಗಿ ಐವತ್ತು ವರ್ಷಗಳಷ್ಟು ಹಿರಿದಾದ ಉತ್ತಮ ಗ್ರಂಥಾಲಯದ ಸೌಲಭ್ಯವಿದೆ.
(ಕನ್ನಡ ಎಂ.ಎ ವಿದ್ಯಾರ್ಥಿಗಳಿಗೆ ಕರ್ನಾಟಕ ಸರ್ಕಾರದಿಂದ ಶಿಷ್ಯವೇತನ ಮತ್ತು ಶುಲ್ಕ ಮರುಪಾವತಿಯ ಸೌಲಭ್ಯವಿರುತ್ತದೆ. ನವದೆಹಲಿ ಯುಜಿಸಿಯಿಂದ ಹೆಣ್ಣು ಮಕ್ಕಳಿಗೆ ಶಿಷ್ಯವೇತನವಿರುತ್ತದೆ.)
ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ:
ಡಾ.ಬಿ.ಎಸ್. ಸುದೀಪ್ (ಸಹಾಯಕ ಪ್ರಾಧ್ಯಾಪಕರು) – 9242829947
M.A Kannada Admissions 2018 – 2019 Academic Year. The degree Master of Arts in kannada is two year course. Admission open to kannada MA course in JSS college ooty road mysore. Apply today