ನಾನ್ ವೆಜ್ ಪ್ರಿಯರಿಗಾಗಿ ಇಂದಿನ ಅಡುಗೆ ವಿಶೇಷದಲ್ಲಿ ಚಿಕನ್ ಫ್ರೈಡ್ ರೈಸ್. ಎಲ್ಲರಿಗೂ ಇಷ್ಟವಾಗುವ ಚಿಕನ್ ಫ್ರೈಡ್ ರೈಸ್ ಮನೆಯಲ್ಲಿಯೇ ಸುಲಭವಾಗಿ ಮಾಡಿ ಸವಿಯಬಹುದಾಗಿದೆ.
ಬೇಕಾಗುವ ಸಾಮಗ್ರಿಗಳು:
- ½ ಕೆ.ಜಿ.ಚಿಕನ್(ಬೋನ್ ಲೆಸ್),
- ಎರಡು ಕಪ್ ಅನ್ನ,
- 50 ಗ್ರಾಂ ಎಣ್ಣೆ,
- 50 ಗ್ರಾಂ ಈರುಳ್ಳಿ,
- 1 ಸ್ಪೂನ್ ಕರಿಮೆಣಸಿನ ಪುಡಿ,
- 50 ಗ್ರಾಂ ಕ್ಯಾರೆಟ್,
- 50 ಗ್ರಾಂ ಬೀನ್ಸ್,
- 50 ಗ್ರಾಂ ಬಟಾಣಿ
- 2 ಮೊಟ್ಟೆ,
- ಸೋಯಾಸಾಸ್,
- ರುಚಿಗೆ ತಕ್ಕಷ್ಟು ಉಪ್ಪು.
ತಯಾರಿಸುವ ವಿಧಾನ:
ಮೊದಲಿಗೆ ಚಿಕನ್ ಬೇಯಿಸಿಕೊಂಡು ಸಣ್ಣದಾಗಿ ತುಂಡರಿಸಿ ಇಟ್ಟುಕೊಳ್ಳಿ. ಅಕ್ಕಿಯನ್ನು ಮುಕ್ಕಾಲು ಭಾಗ ಬೇಯಿಸಿಟ್ಟುಕೊಳ್ಳಿ.
ಕ್ಯಾರೆಟ್, ಬೀನ್ಸ್ ಸಣ್ಣಗೆ ಕತ್ತರಿಸಿ ಜೊತೆಯಲ್ಲಿ ಬಟಾಣಿಯನ್ನು ಬೇಯಿಸಿಟ್ಟುಕೊಳ್ಳಿ. ಬಾಣಲೆಯಲ್ಲಿ ಅಥವಾ ಪ್ಯಾನ್ ನಲ್ಲಿ ಈರುಳ್ಳಿ ಮತ್ತು ದೊಣ್ಣೆ ಮೆಣಸಿನಕಾಯಿಯನ್ನು ಎಣ್ಣೆಯಲ್ಲಿ ಕರಿದುಕೊಂಡು 2 ನಿಮಿಷವಾದ ನಂತರ ಮೊಟ್ಟೆಯನ್ನು ಒಡೆದು ಹಾಕಿ ತಿರುಗಿಸಿರಿ. ಅದಕ್ಕೆ ಬೇಯಿಸಿದ ಅನ್ನ, ತರಕಾರಿ, ಚಿಕನ್, ಸೋಯಾ ಸಾಸ್ ಹಾಕಿ ಕೆಲವು ನಿಮಿಷಗಳ ಕಾಲ ತಿರುಗಿಸಿ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿದರೆ ಟೊಮೋಟೊ ಸಾಸ್’ನೊಂದಿಗೆ ಚಿಕನ್ ಪ್ರೈಡ್ ರೈಸ್ ತಿನ್ನಲು ರೆಡಿ.
chicken fried rice Non-Vegetarian Recipe For all chicken lovers. you can make at Home easily. Restaurant Style chicken fried rice. Fried Rice with Chicken and Egg, Mixed Fried Rice,