ಸೀತಾಫಲ ಎಲ್ಲರಿಗೂ ಚಿರಪರಿಚಿತವಾದ ಹಣ್ಣು ಹಾಗೂ ತಿನ್ನಲು ಬಹಳ ರುಚಿಕರವಾಗಿರುತ್ತದೆ. ಬರಿ ರುಚಿಕರವಾಗಿರುವುದಷ್ಟೇ ಅಲ್ಲದೆ ಪೋಷಕಾಂಶಗಳ ಆಗರವಾಗಿದ್ದು ಔಷದಿಯ ಗುಣಗಳನ್ನು ಹೊಂದಿದೆ.
ಸೀತಾಫಲದಲ್ಲಿ ವಿಟಮಿನ್ ಸಿ ಇದ್ದು ಇದರ ಸೇವನೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚುವುದು. ಅದರಲ್ಲೂ ಚಳಿಗಾಲದಲ್ಲಿ ಸಾಮಾನ್ಯವಾಗಿ ಕಾಡುವ ಶೀತ, ಅಲರ್ಜಿ ಸಮಸ್ಯೆಗಳು ಕಡಿಮೆಯಾಗುವುದು. ಅಲ್ಲದೆ ಇದರಲ್ಲಿ ವಿಟಮಿನ್ ಎ, ಇ ಮತ್ತು ಸಿ ಅಂಶ ಇದೆ.
ಸೀತಾಫಲ ಹಣ್ಣಿನಿಂದ ಆರೋಗ್ಯಕ್ಕೆ ಅನೇಕ ಪ್ರಯೋಜನಗಳಿದ್ದು ಅದರ ಗಿಡದ ಪ್ರತಿಯೊಂದು ಭಾಗದಿಂದಲೂ ಉಪಯೋಗವಿದೆ. ಅದರ ಎಲೆಯಿಂದ ಔಷಧ ತಯಾರಿಸಬಹುದು. ಕಾಂಡದಿಂದ ಪೀಠೋಪಕರಣ ಮತ್ತು ಬೀಜದಿಂದ ಸಾಬೂನು, ಕೀಟನಾಶಕ ತಯಾರಿಸಬಹುದಾಗಿದೆ. ಹೀಗಾಗಿ ಇಂದು ಸೀತಾಫಲದರುವ ಆರೋಗ್ಯಕರ ಗುಣಗಳ ಬಗ್ಗೆ ಕನ್ನಡ ಅಡ್ವೈಜರ್ ಮಾಹಿತಿ ನಿಡಲಿದೆ.
ಸೀತಾಫಲ ತಿನ್ನುವುದರಿಂದ ಆಗುವ ಪ್ರಯೋಜನಗಳು:
- ಸೀತಾಫಲದ ಗಿಡದ ತೊಗಟೆ ಯನ್ನು ಜಜ್ಜಿ ಸ್ವಲ್ಪ ನೀರಿನೊಂದಿಗೆ ಸೇರಿಸಿ ಚೆನ್ನಾಗಿ ಕುದಿಸಿ. ನಂತರ ಈ ನೀರಿಗೆ ಜೇನು ತುಪ್ಪ ಬೆರೆಸಿ ಕುಡಿದರೆ ಜ್ವರ, ಕೆಮ್ಮು ಕಡಿಮೆಯಾಗುತ್ತದೆ.
- ಪ್ರತಿನಿತ್ಯ ಬೆಳಗ್ಗೆ ಸೀತಾಫಲದ ಎಲೆಯ ಪುಡಿಯನ್ನು ಒಂದು ಟೀ ಸ್ಪೂನ್ ನಷ್ಟು ಸೇವಿಸಿದಲ್ಲಿ ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ.
- ಸೀತಾಫಲದ ಎಲೆಗಳನ್ನು ನೀರಿಗೆ ಹಾಕಿ ಕಷಾಯ ಮಾಡಿ ಕುಡಿದರೆ ನೆಗಡಿ ಮಾಯವಾಗುವ ಜೊತೆಗೆ ನರಗಳ ಬಲಹೀನತೆಯೂ ಮರೆಯಾಗುತ್ತದೆ.
- ಸೀತಾಫಲ ಸೇವನೆಯಿಂದ ದೃಷ್ಟಿ ಸಮಸ್ಯೆ ದೂರವಾಗುತ್ತದೆ.
- ಸೀತಾಫಲವನ್ನು ದಿನವೂ ಸೇವಿಸುವುದರಿಂದ ಅಸಿಡಿಟಿ, ಅಲ್ಸರ್, ಗ್ಯಾಸ್, ಅಜೀರ್ಣತೆ, ಮತ್ತು ಮಲಬದ್ಧತೆ ಕೂಡ ವಾಸಿಯಾಗುತ್ತದೆ.
- ಸೀತಾಫಲದ ಬೀಜದ ಪುಡಿಯನ್ನು ನೀರಿನಲ್ಲಿ ಕಲಸಿ ಕೂದಲ ಬುಡಕ್ಕೆ ಹಚ್ಚಿ, ೨೦ ನಿಮಿಷ ಬಿಟ್ಟು ತಲೆಗೆ ಸ್ನಾನ ಮಾಡಿದರೆ ಹೇನು ಮತ್ತು ಸೀರು ಕಡಿಮೆಯಾಗುತ್ತದೆ.
- ಪ್ರತಿದಿನ ಊಟದ ನಂತರ ಈ ಹಣ್ಣನ್ನು ಸೇವಿಸು ವುದರಿಂದ ಜೀರ್ಣಶಕ್ತಿ ಹೆಚ್ಚುವುದು.
- ಸೀತಾಫಲದಲ್ಲಿ ರಿಬೊಫ್ಲಾವಿನ್ ಮತ್ತು ವಿಟಮಿನ್ ‘ಸಿ’ ಅಂಶ ಹೇರಳವಾಗಿದೆ. ಇವುಗಳು ಕಣ್ಣಿಗೆ ಒಳ್ಳೆಯದು.
- ಸೀತಾಫಲ ಹಣ್ಣನ್ನು ಸೇವಿಸುತ್ತಾ ಇದ್ದರೆ ಹಿಮೋಗ್ಲೋಬಿನ್ ಪ್ರಮಾಣ ಹೆಚ್ಚುತ್ತದೆ.
- ತೂಕ ಹೆಚ್ಚಿಸಿಕೊಳ್ಳಲು ಪರದಾಡುವವರಿಗೆ ಈ ಹಣ್ಣು ಉತ್ತಮ ಮಾರ್ಗ. ಇದರ ತಿರುಳಿನ ಜೊತೆಗೆ ಸ್ವಲ್ಪ ಜೇನು ತುಪ್ಪವನ್ನು ಸೇರಿಸಿ ಪ್ರತಿನಿತ್ಯ ಸೇವಿಸುತ್ತಾ ಬಂದರೆ ತೂಕ ಕ್ರಮೇಣ ಹೆಚ್ಚುತ್ತದೆ.
- ಹೊಟ್ಟೆ ಉರಿ ಮತ್ತು ವಿಪರೀತ ದಾಹವಾಗುತ್ತಿದ್ದರೆ ಸೀತಾಫಲ ಹಣ್ಣಿನ ರಸಕ್ಕೆ ಸಕ್ಕರೆ ಸೇರಿಸಿ ಸೇವಿಸಬೇಕು.
- ಸೀತಾಫಲದಲ್ಲಿ ಅನ್ನಾಂಗ ಅಂಶ (ಸಿ, ಬಿ೬, ಮ್ಯಾಗ್ನಿಷಿಯಂ, ಪೊಟಾಷಿಯಂ, ಅಲ್ಪ ಪ್ರಮಾಣದಲ್ಲಿ ಬಿ೨, ಶರ್ಕರ ಪಿಷ್ಠ) ಹೇರಳವಾಗಿದೆ. ಇವು ದೇಹಕ್ಕೆ ಪುಷ್ಟಿ ನೀಡುತ್ತವೆ.
- ಕ್ಯಾನ್ಸರ್ ಪ್ರತಿರೋಧಕ ಗುಣ ಸೀತಾಫಲಕ್ಕಿದೆ.
- ಕೊಲೆಸ್ಟ್ರಾಲ್ ಮಟ್ಟ ನಿಯಂತ್ರಣಕ್ಕೆ ಬರಲು ಸೀತಾಫಲ ಒಳ್ಳೆಯ ಮದ್ದು. ಇದರಲ್ಲಿ ನಿಯಾಸಿನ್ ಮತ್ತು ಡಯಟೆರಿ ಫೈಬರ್ ಅಧಿಕ ಪ್ರಮಾಣದಲ್ಲಿ ಇರುವ ಕಾರಣ, ಇದು ಕೊಲೆಸ್ಟ್ರಾಲ್ ಮಟ್ಟ ತಗ್ಗಿಸಲು ನೆರವಾಗುತ್ತದೆ.
- ಸೀತಾಫಲ ಗಿಡದ ಎಲೆಗಳನ್ನು ಜಜ್ಜಿ ಕುರುವಿನ ಮೇಲೆ ಇಟ್ಟರೆ ಬಹು ಬೇಗನೆ ಕುರು ಮಾಯವಾಗುತ್ತದೆ.
health benefits of custard apple. Custard apple has strong medicinal properties and Nutrition. eating custard apple good for health. here is the benefits of eating custard apple.