ಹೌದು. ಮನುಷ್ಯ ಇಂದು ಕೆಲಸ, ಹಣ, ಸಂಪಾದನೆ ಹೀಗೆ ಹಲವು ಆಸೆಗಳ ಜೊತೆ ಅತಿಯಾಸೆಗೆ ಒಳಗಾಗಿ ಸರಿಯಾದ ಸಮಯಕ್ಕೆ ತನ್ನ ಎನರ್ಜಿಗೆ ಬೇಕಾಗುವಷ್ಟು ಆಹಾರವನ್ನು ಸೇವಿಸುವುದನ್ನು ಮರೆತಿದ್ದಾನೆ. ಇನ್ನೂ ಇಂತಹವರಿಗಂತೂ ಫ್ಯಾಮಿಲಿಯೊಂದಿಗೆ ಬೆರೆಯುವುದನ್ನು ತರಬೇತಿಯನ್ನೇ ನೀಡಿ ನೀತಿ ಪಾಠ ಮಾಡಬೇಕಾಗುತ್ತದೆ.
ಏನೇ ಇರಲಿ ಇಂದು ಇಂದಿನ ಲೇಖನದಲ್ಲಿ ಕನ್ನಡ ಅಡ್ವೈಸರ್ ದೇಹಕ್ಕೆ ಅತ್ಯಮೂಲ್ಯವಾಗಿ ಹೇರಳವಾಗಿ ಬೇಕಾಗಿರುವ ನೀರನ್ನು ಯಾವ ಸಮಯದಲ್ಲಿ ಮರೆತರು ಕೆಲವೊಂದು ಪ್ರಮುಖ ಸಮಯದಲ್ಲಿ ಮರೆಯಲೇ ಬಾರದು ಎಂದು ತಿಳಿಸುತ್ತಿದೆ. ಅಂತಹ ಆ ಸಮಯಗಳು ಅಂದರೆ ಯಾವಾಗ ನಾವು ಆರೋಗ್ಯ, ಪ್ರಾಣಪಾಯಗಳ ದೃಷ್ಟಿಯಿಂದ ನೀರನ್ನು ಕುಡಿಯಲು ಮರೆಯಬಾರದು ಎಂಬುದನ್ನು ಈ ಕೆಳಗೆ ತಿಳಿಸಲಾಗಿದೆ.
ರಾತ್ರಿ ಮಲಗುವ ಮುನ್ನ ನೀರು ಕುಡಿಯಲು ಮರೆಯಲೇಬಾರದು
ಹೌದು. ಯಾಕೆ ಅಂತಿರಾ? ಶೇಕಡ 90 ರಷ್ಟು ಹೃದಯಘಾತ ಆಗುವ ಸಂಭವ ಬೆಳಗಿನ ಸಮಯ. ಆದ್ದರಿಂದ ರಾತ್ರಿ ಮಲಗುವ ವೇಳೆ ಒಂದು ಅಥವಾ ಎರಡು ಲೋಟ ನೀರನ್ನು ಕುಡಿದು ಮಲಗಿದರೆ ಹೃದಯಘಾತ()Heart Attacks) ಸಂಭವದಿಂದ ದೂರ ಉಳಿಯಬಹುದು
ಹೆಚ್ಚಿನ ವೈಜ್ಞಾನಿಕ ಕಾರಣ ತಿಳಿಯಲು ಬಯಸುವವರು ಈ ಲೇಖನ ಓದಿ
ಕೆಲವು ಸರಿಯಾದ ಸಂದರ್ಭಗಳಲ್ಲಿ ನೀರನ್ನು ಕುಡಿಯುವುದರಿಂದ ಮನುಷ್ಯನ ದೇಹದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಅಂತಹ ಕೆಲವು ಮರೆಯದೇ ನೀರು ಕುಡಿಯಲೇಬೇಕಾದ ವೇಳೆ ಎಂದರೆ…
1. ಬೆಳಿಗ್ಗೆ ಬೆಡ್ ನಿಂದ ಎದ್ದ ತಕ್ಷಣ ಒಂದು ಲೋಟ ನೀರು ಕುಡಿಯುವುದರಿಂದ ದೇಹದ ಆಂತರಿಕ ಅಂಗಗಳು ಸಕ್ರಿಯಗೊಳ್ಳುತ್ತವೆ.
2 ಊಟ ಮಾಡುವ 30 ನಿಮಿಷಕ್ಕೆ ಮೊದಲು ಒಂದು ಗ್ಲಾಸ್ ನೀರು ಕುಡಿಯುವುದು ಆಹಾರ ಉತ್ತಮ ಜೀರ್ಣ ಕ್ರಿಯೆಗೆ ಸಹಾಯಕಾರಿ.
3 ತಣ್ಣೀರು ಸ್ನಾನ ಆರೋಗ್ಯಕ್ಕೆ ಒಳ್ಳೆಯದ ಆದರು ಸಹ, ಹಳ್ಳಿ ಮತ್ತು ನಗರ ಪ್ರದೇಶದ ಎಲ್ಲಾ ಜನರು ಬಿಸಿ ನೀರು ಸ್ನಾನಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ. ಆದರೆ ಬಿಸಿ ನೀರು ಸ್ನಾನ ಮಾಡುವ ಬಹುಸಂಖ್ಯಾತ ಜನರು ಸ್ನಾನ ಮಾಡಿದ ನಂತರ ಹೆಚ್ಚು ಬೆವರುತ್ತಾರೆ. ಇದಕ್ಕೆ ಕಾರಣ ಬಿಸಿನೀರು ದೇಹದ ಮೇಲೆ ಬೀಳುವುದರಿಂದ ರಕ್ತದ ಒತ್ತಡ ಹೆಚ್ಚಾಗುತ್ತದೆ. ಆದರೆ ಸ್ನಾನಕ್ಕೆ ಮೊದಲು ಒಂದು ಲೋಟ ತಣ್ಣನೆಯ ನೀರು ಕುಡಿಯುವುದರಿಂದ ರಕ್ತದ ಒತ್ತಡ ಕಡಿಮೆ ಮಾಡಲು ಸಹಾಯಕ. ಅಲ್ಲದೇ ಬಿಸಿನೀರು ಸ್ನಾನ ಮಾಡಿದ ನಂತರ ಬೆವರುವುದನ್ನು ನಿಯಂತ್ರಿಸಬಹುದು.
4 ನೀರನ್ನು ಮಲಗುವ ಮುನ್ನ ಕುಡಿಯುವುದರಿಂದ ಹೃದಯಘಾತ ಮಾತ್ರವಲ್ಲದೇ, ಹೃದಯ ಸಂಬಂಧಿ ಮತ್ತು ಸ್ಟ್ರೋಕ್ ಅನ್ನು ದೂರವಿರಿಸಬಹುದು.
Drinking a glass of water before going to bed prevents heart attacks and strokes. The american heart association along with other national health organization, recommended several ways of decreasing your risk of a heart attack or stroke.