ಹೊಸದಾಗಿ ಆಧಾರ್ ಕಾರ್ಡ್, ವೋಟರ್ ಕಾರ್ಡ್, ರೇಷನ್ ಕಾರ್ಡ್, ಬ್ಯಾಂಕ್ ಖಾತೆ, ಪಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್ ಪಡೆಯುವವರಿಗಂತೂ ಸಮಯದ ಅಭಾವ ಜಾಸ್ತಿನ. ಯಾಕಂದ್ರೆ ಕಛೇರಿಗಳಿಗೆ ಹೋಗಿ ತಾಸು ಗಟ್ಟಲೇ ನಿಲ್ಲಬೇಕು, ಅಧಿಕಾರಿಗಳು ಹೇಳಿದ ಸಮಯಕ್ಕೆ ಹೋಗಬೇಕು. ಈ ಐಡಿಗಳನ್ನು ಪಡೆಯಲು ಇತರೆ ಆಧಾರಗಳನ್ನು ನೀಡಬೇಕು. ಆದ್ದರಿಂದ ಸಾಕಪ್ಪ ಸಾಕು ಈ ಗೋಳು ಎಂದು ರಾಗ ತೆಗೆಯುವವರೇ ಹೆಚ್ಚು.
ಆದರೆ ಇಂದು ‘ಟೆಕ್ನಾಲಜಿ ಮೇಡ್ ಲೈಫ್ ಈಜೀ’ ಎನ್ನುವವರು ದಿನೇ ದಿನೇ ಹೆಚ್ಚಾಗುತ್ತಿದ್ದಾರೆ. ತಂತ್ರಜ್ಞಾನ ಸದುಪಯೋಗ ಪಡೆದು ಹಲವು ಸೇವೆಗಳನ್ನು ಬಿಡುವಿನ ಸಮಯದಲ್ಲಿ ಪಡೆಯಬಹುದಾಗಿದೆ.ಅಂತೆಯೇ ಇಂದಿನ ಲೇಖನದಲ್ಲಿ ನಿಮ್ಮ ಕನ್ನಡ ಅಡ್ವೈಸರ್ ಡ್ರೈವಿಂಗ್ ಲೈಸೆನ್ಸ್‌ಗೆ ನೀವು ಕುಳಿತಲ್ಲಿಯೇ ಮೊಬೈಲ್, ಲ್ಯಾಪ್‌ಟಾಪ್, ಕಂಪ್ಯೂಟರ್‌ಗಳಲ್ಲಿ ಆನ್‌ಲೈನ್ ಮೂಲಕ ಅಪ್ಲಿಕೇಶನ್ ಹಾಕುವುದು ಹೇಗೆ ಎಂಬ ಮಾಹಿತಿಯನ್ನು ತಿಳಿಸುತ್ತಿದೆ.
ಡ್ರೈವಿಂಗ್ ಲೈಸೆನ್ಸ್ ಗಾಗಿ ಆನ್‌ಲೈನ್ ನಲ್ಲಿ ಅಪ್ಲೇ ಮಾಡಲು ಈ ಕೆಳಗಿನ ಸಿಂಪಲ್ ಸ್ಟೆಪ್‌ಗಳನ್ನು ಫಾಲೋ ಮಾಡಿ
1. ಭಾರತದಾದ್ಯಂತ ಡ್ರೈವಿಂಗ್ ಲೈಸೆನ್ಸ್ ಪಡೆಯಲು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಆದರೆ ಆಯಾ ರಾಜ್ಯದವರು ರಾಜ್ಯದ ಅಧಿಕೃತ ಆರ್‌ಟಿಓ ವೆಬ್‌ಸೈಟ್ ಮುಖಾಂತರ ಅರ್ಜಿಸಲ್ಲಿಸಬೇಕು.
2. ಕರ್ನಾಟಕದಲ್ಲಿ ಡ್ರೈವಿಂಗ್ ಲೈಸೆನ್ಸ್‌ಗಾಗಿ ಕರ್ನಾಟಕ ಆರ್‌ಟಿಓ ಅಧಿಕೃತ ವೆಬ್‌ಸೈಟ್ ‘rto.kar.nic.in’ ಅನ್ನು ಮೊದಲಿಗೆ ನಿಮ್ಮ ಬ್ರೌಸರ್‌ನಲ್ಲಿ ಓಪನ್ ಮಾಡಿ.
ಸೂಚನೆ : ವಯಕ್ತಿಕ ಮಾಹಿತಿ ಸುರಕ್ಷತೆ ದೃಷ್ಟಿಯಿಂದ ‘safari’ ವೆಬ್ ಬ್ರೌಸರ್ ಅನ್ನು ಡೌನ್‌ಲೋಡ್ ಮಾಡಿ ಬಳಸುವುದು ಉತ್ತಮ. ಅಲ್ಲದೇ safari ಬ್ರೌಸರ್‌ನಲ್ಲೇ ‘rto.kar.nic.in’ ವೆಬ್‌ಸೈಟ್ ಓಪನ್ ಮಾಡಿ.
3. rto.kar.nic.in ವೆಬ್‌ಸೈಟ್ ಓಪನ್ ಆದ ನಂತರ Online Applications ಬಟನ್ ಮೇಲೆ ಕ್ಲಿಕ್ ಮಾಡಿ.
4. Online Applications ಬಟನ್ ಕ್ಲಿಕ್ ಮಾಡಿದ ನಂತರ ಓಫನ್ ಆಗುವ ಪೇಜ್‌ನಲ್ಲಿ “Online Application For New Learner’s Licence” ಎಂಬಲ್ಲಿ ಕ್ಲಿಕ್ ಮಾಡಿ.
5. ಪ್ರಸ್ತುತ ಓಪನ್ ಆಗಿರುವ ವೆಬ್‌ಪೇಜ್ ಅನ್ನು ಕೆಳಗೆ ಸ್ಕ್ರಾಲಿಂಗ್ ಮಾಡಿ “Click here to go for Online Applications LL/DL ” ಎಂಬಲ್ಲಿ ಕ್ಲಿಕ್ ಮಾಡಿ.
6. ಈ ಹಂತದಲ್ಲಿ ನೀವು safari ವೆಬ್ ಬ್ರೌಸರ್ ಉಪಯೋಗಿಸಿದ್ದೇ ಆದಲ್ಲಿ ಅಪ್ಲಿಕೇಶನ್ ಒಂದು ಓಪನ್ ಆಗುತ್ತದೆ. ಆ ಅರ್ಜಿಯಲ್ಲಿ ‘ಅಪ್ಲಿಕೇಶನ್ ನಂಬರ್ ಕಾಲಂನಲ್ಲಿ ನಂಬರ್ ಈಗಾಗಲೇ ಇರುತ್ತದೆ. ಅಪ್ಲಿಕೇಶನ್ ನಂಬರ್ ಇರುವುದನ್ನು ಖಚಿತ ಪಡಿಸಿಕೊಳ್ಳಿ. ನಂತರ ನೀವು LL/DL ಯಾವುದು ಎಂದು ಕ್ಲಿಕ್ಕಿಸಬೇಕು. ನಂತರ ಅರ್ಜಿಯಲ್ಲಿ ಕೇಳಲಾದ ಮಾಹಿತಿಗಳನ್ನು ಭರ್ತಿ ಮಾಡಬೇಕು. ಕೆಲ ಮಾಹಿತಿಗಳನ್ನು ನೀಡಲು ನಿಮಗೆ ತಿಳಿಯದಿರಬಹುದು. ಆದ್ದರಿಂದ ವೀಡಿಯೊ ನೋಡಿ ಯಾವ ಯಾವ ಮಾಹಿತಿಗಳನ್ನು ಹೇಗೆ ನೀಡಬೇಕು ಎಂದು ತಿಳಿಯಿರಿ.
7. ಎಲ್ಲಾ ಮಾಹಿತಿಗಳನ್ನು ಭರ್ತಿ ಮಾಡಿದ ನಂತರ Submit ಎಂಬಲ್ಲಿ ಕ್ಲಿಕ್ ಮಾಡಿ, ಅಪ್ಲಿಕೇಶನ್ ಸೇವ್ ಮಾಡಿ ಮತ್ತು ನಂಬರ್ ಅನ್ನು ಬರೆದುಕೊಳ್ಳಿ. ನಂತರ rto.kar.nic.in ವೆಬ್ ಸೈಟ್ ಮಾಡಿ ಆನ್‌ಲೈನ್ ಅಪ್ಲಿಕೇಶನ್ ಬಟನ್ ಕ್ಲಿಕ್ ಮಾಡಿ ಓಪನ್ ಆದ ಪೇಜ್‌ನಲ್ಲಿ ಆರ್‌ಟಿಓ ಕಛೇರಿಗೆ ನೀಡಲು ಅಪ್ಲಿಕೇಶನ್ ಫಾರ್ಮ್ ಅನ್ನು ಪ್ರಿಂಟ್ ತೆಗೆದುಕೊಳ್ಳಿ. 10 ದಿನಗಳ ನಂತರ ನೀವು LL ಪಡೆಯುತ್ತೀರಿ. DL ಗಾಗಿಯೂ ಸಹ ಈ ರೀತಿಯಲ್ಲಿಯೇ ಆನ್‌ಲೈನ್ ಅರ್ಜಿ ಸಲ್ಲಿಸಬಹುದು. ಆದರೆ ಅರ್ಜಿ ಮೊದಲಿಗೆ DL ಆಯ್ಕೆ ಮಾಡಿಕೊಳ್ಳಬೇಕು.
In this article Kannadaadvisor giving very simple steps to apply for driving licence in online. Here is how to apply for driving licence know in kannada.