ಇಂದು ಯಾವ ಉದ್ಯೋಗಕ್ಕೆ ಸೇರಿದವರು ಸಹ ಪಾನ್ ಕಾರ್ಡ್ ಬೇಕೆ ಬೇಕು. ಹಳ್ಳಿಯಲ್ಲಿನ ಜನರು ಸಹ ಬ್ಯಾಂಕ್ ಖಾತೆ ತೆರೆದು ಸರ್ಕಾರದ ಹಲವು ಯೋಜನೆಗಳಿಂದ ಆರ್ಥಿಕ ನೆರವು ಪಡೆಯಲು, ಸಹಾಯಧನ ಪಡೆಯಲು ಹಾಗೂ ಇನ್ನಿತರೆ ಹಲವು ಉದ್ದೇಶಗಳಿಗಾಗಿ ಪಾನ್ ಕಾರ್ಡ್ ಬೇಕೇ ಬೇಕು.
ಪಟ್ಟಣಗಳಲ್ಲಿರುವ ಪೋಸ್ಟ್ ಆಫೀಸ್ ಕಛೇರಿಗಳಿಗೆ ಭೇಟಿ ನೀಡಿ ಅರ್ಜಿ ಪಡೆದು ಭರ್ತಿ ಮಾಡಿ, ಅಗತ್ಯ ದಾಖಲೆಗಳನ್ನು ನೀಡಿ ಪಾನ್ ಕಾರ್ಡ್ ಮಾಡಿಸಲು ತಗಲುವ ವೆಚ್ಚ ಕೇವಲ 110 ರೂ ಅಷ್ಟೆ. ಆದರೆ ಇದೇ ಪಾನ್ ಕಾರ್ಡ್ ಮಾಡಿಸಲು ಹಳ್ಳಿಯಲ್ಲಿರುವ ಜನರ ಹತ್ತಿರ ಪಾನ್ ಕಾರ್ಡ್ ಮಾಡಿಸಲು ಬ್ರೋಕರ್ ಗಳು 200-250 ಪೀಕ್ತ್ತಾರೆ.
ಕೆಲವರು ಅದರಲ್ಲೂ ಹಳ್ಳಿಯವರು ಇವೆಲ್ಲ ನಮಗೆ ತಲೆ ನೋವು ರೀ.. ಅದರ ಬದಲು ಬ್ರೋಕರ್ಗಳಿಗೆ ದುಡ್ಡು ಕೊಟ್ರೆ ಅವರೇ ಮಾಡಿಸಿ ಕೊಡುತ್ತಾರೆ ಎನ್ನಬಹುದು. ಆದ್ರೆ ಇಂತಹ ಕಛೇರಿ ಕೆಲಸಗಳ ಬಗ್ಗೆ ಇನ್ಯಾವಾಗ ನೀವೆಲ್ಲಾ ತಿಳಿದುಕೊಳ್ಳುವುದು? ಅನ್ನೋ ಪ್ರಶ್ನೆ ನಮ್ಮದು. ಏನೇ ಇರಲಿ. ಅದರೆ ಈಗ ಪಾನ್ ಕಾರ್ಡ್ ಮಾಡಿಸಲು ಪಟ್ಟಣಕ್ಕೂ ಹೋಗುವ ಅಗತ್ಯವಿಲ್ಲ. ಜಸ್ಟ್ ಮನೆಯಲ್ಲೇ ಕುಳಿತು ಮೊಬೈಲ್, ಲ್ಯಾಪ್ಟಾಪ್, ಕಂಪ್ಯೂಟರ್ಗಳ ಮೂಲಕ ಆನ್ಲೈನ್ ಅರ್ಜಿ ಸಲ್ಲಿಸಬಹುದು. ಹೌದು. ಹೇಗೆ ಅನ್ನೋದನ್ನ ತಿಳಿಯಲು ಈ ಕೆಳಗಿನ ಹಂತಗಳನ್ನು ಫಾಲೋ ಮಾಡಿ. ಇತರರಿಗೂ ಈ ಮಾಹಿತಿಯನ್ನು ಶೇರ್ ಮಾಡಿ, ತಿಳಿಸಿ.
ಆನ್ಲೈನ್ ನಲ್ಲಿ ಪಾನ್ ಕಾರ್ಡ್ ಗಾಗಿ ಅಪ್ಲೇ ಮಾಡಲು ಈ 11 ಸರಳ ಹಂತಗಳನ್ನು ಫಾಲೋ ಮಾಡಿ
1. ಮೊಬೈಲ್, ಲ್ಯಾಪ್ಟಾಪ್, ಕಂಪ್ಯೂಟರ್ ಇವುಗಳಲ್ಲಿ ಯಾವ ಗ್ಯಾಜೆಟ್ ನಲ್ಲಾದರೂ ಮೊದಲು ಎನ್ಎಸ್ಡಿಎಲ್ ವೆಬ್ಸೈಟ್ https://tin.nsdl.com/pan/ ಓಪನ್ ಮಾಡಿ.
2. ಎರಡನೇ ಹಂತದಲ್ಲಿ New PAN for Indian Citizens (Form 49A) ಎಂಬ ಲಿಂಕ್ ಮೇಲೆ ಕ್ಲಿಕ್ ಮಾಡಿ.
3. online Application for New PAN (Form 49A) ಎಂಬ ಲಿಂಕ್ ಮೇಲೆ ಕ್ಲಿಕ್ಮಾಡಿ. ಆದರೆ ಅರ್ಜಿ ಸಲ್ಲಿಸುವ ಮೊದಲು ಯಾವುದನ್ನು ಫಿಲ್ ಮಾಡಬೇಕು, ಯಾವುದನ್ನು ಮಾಡಬಾರದು ಎಂಬುದನ್ನು ಓದಿಕೊಳ್ಳಿ.
4. ಸೂಚನೆಗಳನ್ನೆಲ್ಲಾ ನಿಖರವಾಗಿ ಓದಿಕೊಳ್ಳಿ. ನಂತರದಲ್ಲಿ ಪೇಜ್ ಕೆಳಗೆ ನೋಡಲು ಸ್ಕ್ರಾಲ್ ಮಾಡಿ. ಅಲ್ಲಿ ಯಾವ ವಿಧದ ಅರ್ಜಿದಾರ ಎಂಬುದನ್ನು ಆಯ್ಕೆ ಮಾಡಲು ಆಯ್ಕೆಗಳು ಕಾಣುತ್ತದೆ.
5. ಅರ್ಜಿದಾರರ ವಿಧದಲ್ಲಿ ನೀವು ಯಾವ ರೀತಿಯ ಅರ್ಜಿದಾರ ಎಂಬುದನ್ನ ಆಯ್ಕೆ ಮಾಡಿ. ಸಾಮಾನ್ಯವಾಗಿ ವಯಕ್ತಿಕವಾಗಿ ನೀವು ಪಾನ್ ಕಾರ್ಡ್ ಹೊಂದಲು ಬಯಸುವವರಾಗಿದ್ದರೆ Induvidual ಎಂಬುದನ್ನು ಆಯ್ಕೆ ಮಾಡಿ.
6. ಅರ್ಜಿಯ ಕೆಟಗರಿ ಆಯ್ಕೆ ಮಾಡಿದ ನಂತರ ನಿಮಗೆ ಅರ್ಜಿಯ ಆನ್ಲೈನ್ ಫಾರ್ಮ್ ಓಪನ್ ಆಗುತ್ತದೆ. ಅದನ್ನು ನಿಖರವಾಗಿ ಎಚ್ಚರದಿಂದ ಓದಿಕೊಂಡು ಭರ್ತಿ ಮಾಡಿ. ನಂತರ ನೀವು ಶುಲ್ಕವನ್ನು ಕ್ರೆಡಿಟ್/ಡೆಬಿಟ್ ಕಾರ್ಡ್ ಮೂಲಕ ಅಥವಾ ನೆಟ್ ಬ್ಯಾಂಕಿಂಗ್ ಮೂಲಕ ಪಾವತಿ ಮಾಡಬೇಕಾಗುತ್ತದೆ. ಅಲ್ಲದೇ ಅಲ್ಲಿ AO ಕೋಡ್ ಸರ್ಚ್ ಮಾಡಿ ನೀಡಬೇಕಾಗುತ್ತದೆ.
7. ಮಾಹಿತಿಗಳನ್ನು ಭರ್ತಿ ಮಾಡಿದ ನಂತರ ನೀವು ಒಂದು ಸ್ವೀಕೃತಿ ಫಾರ್ಮ್ ಅನ್ನು 16 ಸಂಖ್ಯೆಯ ಸ್ವೀಕೃತಿ ನಂಬರ್ನೊಂದಿಗೆ ಪಡೆಯುತ್ತೀರಿ. ಇದನ್ನು ಪ್ರಿಂಟ್ ತೆಗೆದುಕೊಳ್ಳಿ.
8. ಇತ್ತೀಚಿನ ಎರಡು ಭಾವಚಿತ್ರ ಫೋಟೋಗಳನ್ನು ಸ್ವೀಕೃತಿ ಫಾರ್ಮ್ನಲ್ಲಿ ಫೋಟೋಗಾಗಿ ಕಾಯ್ದಿರಿಸಿದ ಸ್ಥಳದಲ್ಲಿ ಅಂಟಿಸಿ ಮತ್ತು ಸಹಿ ಬಾಕ್ಸ್ನಲ್ಲಿ ಸಹಿ ಮಾಡಿ.
9. ಒಂದು ವೇಳೆ ಆನ್ಲೈನ್ನಲ್ಲಿ ನೀವು ಶುಲ್ಕ 106 ರೂಪಾಯಿಗಳನ್ನು ಪಾವತಿ ಮಾಡದಿದ್ದಲ್ಲಿ ಡಿಮ್ಯಾಂಡ್ ಡ್ರಾಫ್ಟ್ ಅಥವಾ ಚೆಕ್ ಅನ್ನು ಸೆಲ್ಪ್ ಅಟೆಸ್ಟ್ ಮಾಡಿದ ನಿಮ್ಮ ಡಾಕುಮೆಂಟ್ಗಳ ಜೊತೆ ಪೋಸ್ಟ್ ಕವರ್ ಒಳಗೆ ಹಾಕಿರಿ.
10. ಪೋಸ್ಟ್ ಮಾಡುವ ಕವರ್ ಮೇಲೆ “Application for PAN” ಎಂದು ಬರೆದು ನಿಮ್ಮ ಸ್ವೀಕೃತ ನಂಬರ್ ಅನ್ನು ಸಹ ಬರೆಯಿರಿ.
11. ಪೋಸ್ಟ್ ಕವರ್ ಅನ್ನು ಎನ್ಎಸ್ಡಿಎಲ್ನ ವಿಳಾಸ: Income Tax PAN Services Unit, NSDL e-Governance Infrastructure Limited, 5th floor, Mantri Sterling, Plot No. 341, Survey No. 997/8, Model Colony, Near Deep Bungalow Chowk, Pune – 411016 ಬರೆದು ಪೋಸ್ಟ್ ಮಾಡಿ
12. ಅರ್ಜಿಯನ್ನು ಪೋಸ್ಟ್ ಮಾಡಿದ 15 ದಿನದ ಒಳಗೆ ನಿಮಗೆ ನಿಮ್ಮ ಪೋಸ್ಟ್ ಎನ್ಎಸ್ಡಿಎಲ್ಗೆ ತಲುಪಿದ್ದರೆ, ನೀವು ನೀಡಿರುವ ಇಮೇಲ್ ವಿಳಾಸಕ್ಕೆ ಇಮೇಲ್ ಸಂದೇಶ ಪಡೆಯುತ್ತೀರಿ. ನಂತರದಲ್ಲಿ ಪಾನ್ ಕಾರ್ಡ್ ನೀವು ನೀಡಿರುವ ಪೋಸ್ಟ್ ವಿಳಾಸಕ್ಕೆ ಬರುತ್ತದೆ.
In this article Kannadaadvisor giving information about online procedure for apply to PAN card. People can apply via online for PAN(Personal Account Number) card just following these simple steps.