ಸಾಮಾಜಿಕ ಜಾಲತಾಣ(social media) ಧೈತ್ಯ ಫೇಸ್ಬುಕ್(facebook) ಹೊಸ ಸೂಪರ್ ಸ್ಮಾರ್ಟ್ ಫೀಚರ್ ಒಂದರ ಮೇಲೆ ಕಾರ್ಯನಿರ್ವಹಿಸುತ್ತಿದ್ದು, ಈ ವಾರವೇ ಅದನ್ನು ಪ್ರಕಟಣೆ ಹೊರಡಿಸಲಿದೆಯಂತೆ. ಆ ಹೊಸ ಫೀಚರ್ ಹೆಸರು ಎಕೋ ಶೋ ಅಥವಾ ಸ್ಮಾರ್ಟ್ ಡಿಸ್ಪ್ಲೇ(Echo Show or Smart Display).
Echo Show or Smart Display ಫೀಚರ್ ನ ವಿಶೇಷತೆ ಬಗ್ಗೆ ಹೇಳುವುದಾದರೆ, ಯಾವುದೇ ಒಂದು ಡಿವೈಸ್ ಪೊರ್ಟಲ್ಗಳ ಕೋಡ್ಗಳನ್ನು ಹೊಂದಿದ್ದು ಆ ಪೊರ್ಟಲ್ನ ಬಳಕೆದಾರರು ಯಾರು ಎಂದು ತಿಳಿಯಲು ಮುಖ ಗುರುತಿಸುವಿಕೆ(Facial recognition) ಬಳಸುತ್ತದೆ ಎಂಬುದು ತಿಳಿದಿದೆ.
ಫೇಸ್ಬುಕ್ನಲ್ಲಿ ವಿಡಿಯೋ ಕರೆ ಮೊದಲ ಫೀಚರ್ ಆಗಿದ್ದು, ಮೆಸೇಂಜರ್ನಲ್ಲಿ ಬಹು ಕಠಿಣವಾಗಿ ಇಂಟಿಗ್ರೇಟೆಡ್ ಮಾಡಲಾಗಿದೆ. ಈಗ ಸ್ಮಾರ್ಟ್ ಡಿಸ್ಪ್ಲೇ ಎಂಬ ಹೊಸ ಪ್ರಾಡಕ್ಟ್ ಅನ್ನು ಹೊರತರುತ್ತಿದೆ. ಅಲ್ಲದೇ ಈ ಪ್ರಾಡಕ್ಟ್ ಎರಡು ಅಳತೆಯ ಸ್ಕ್ರೀನ್ ಹೊಂದಿದ್ದು, ಒಂದು 400 ಡಾಲರ್ ಮತ್ತು ಮತ್ತೊಂದು 300 ಡಾಲರ್ ಬೆಲೆಯದ್ದು ಎಂಬುದಾಗಿ ಆನ್ಲೈನ್ ಪೊರ್ಟಲ್ ಒಂದು ಹೇಳಿದೆ.
ಫೇಸ್ಬುಕ್, ಕಂಪನಿಯ ವಯಕ್ತಿಕ ಹಗರಣದ ನಂತರ ಪೊರ್ಟಲ್ಗೆ ಕೆಲವು ಬದಲಾವಣೆಯನ್ನು ತಂದಿದೆ. ಫ್ರಂಟ್ ಕ್ಯಾಮೆರಾ ಕ್ಕೆ ಗೌಪ್ಯತಾ ಶಟರ್ ಎಂಬ ಫೀಚರ್ ಅಳವಡಿಸಿದೆ.
ಫೇಸ್ಬುಕ್ ಸ್ಮಾರ್ಟ್ ಡಿಸ್ಪ್ಲೇ ಪ್ರಾಡಕ್ಟ್ ಅನ್ನು ಇನ್ನಷ್ಟು ವಯಕ್ತಿಕ ರಕ್ಷಣೆಯ ದೃಷ್ಟಿಯಿಂದ ಹೊರತರುತ್ತಿದೆ ಎಂಬುದು ತಿಳಿದಿದೆ.
Social media giant Facebook has been working on new product named an Echo Show or Smart display will reportedly be announced this week.