ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಿಂದ ಮೊರಾರ್ಜಿ ದೇಸಾಯಿ/ಏಕಲವ್ಯ ಮಾದರಿ ವಸತಿ ಪದವಿ ಪೂರ್ವ ವಿಜ್ಞಾನ ಕಾಲೇಜುಗಳ ಪ್ರಥಮ ಪಿಯುಸಿ ತರಗತಿಗೆ 2019-20ನೇ ಸಾಲಿಗೆ ಪ್ರವೇಶಕ್ಕಾಗಿ ಅರ್ಜಿ ಸಲ್ಲಿಸಲು ದಿನಾಂಕ03-05-2019 ರಂದು ಪ್ರಕಟಣೆ ಹೊರಡಿಸಿ ಅರ್ಜಿಗೆ ಸಂಬಂಧಿಸಿದ ಎಲ್ಲಾ ಮಾಹಿತಿ ಮತ್ತು ದಿನಾಂಕಗಳನ್ನು ಪ್ರಕಟಿಸಲಾಗಿತ್ತು. ಆದರೆ ಈಗ ಆ ಪ್ರಕಟಣೆಗೆ ತಿದ್ದುಪಡಿ ಮಾಡಿ ಅರ್ಜಿಗೆ ಸಂಬಂಧಿಸಿದ ದಿನಾಂಕಗಳ ಮಾರ್ಪಾಡು ಮಾಡಿ ಪ್ರಕಟಣೆ ಹೊರಡಿಸಲಾಗಿದೆ. ಈ ಬಗ್ಗೆ ಸಂಪೂರ್ಣ ವಿವಿರ ಈ ಕೆಳಗಿನಂತಿದೆ.
– ಪ್ರವೇಶ ಅರ್ಜಿಗಳನ್ನು ವಿತರಿಸಲು ಕೊನೆಯ ದಿನಾಂಕ: 06-05-2019
– ಭರ್ತಿ ಮಾಡಿದ ಅರ್ಜಿಗಳನ್ನು ಸ್ವೀಕರಿಸಲು ಕೊನೆಯ ದಿನಾಂಕ: 08-05-2019
ಪ್ರಥಮ ಪಿಯುಸಿ ಪ್ರವೇಶಕ್ಕೆ ಅರ್ಜಿ ಸಲ್ಲಿಸಿರುವ ಎಲ್ಲಾ ವಿದ್ಯಾರ್ಥಿಗಳ ಪಟ್ಟಿ(ವರ್ಗಾವಾರು, ಮೆರಿಟ್ ಅನ್ವಯ ಇಳಿಕೆ ಕ್ರಮದಲ್ಲಿ) ಪ್ರಕಟಣೆ : 10-05-2019
ಆಯ್ಕೆಯಾದ ವಿದ್ಯಾರ್ಥಿಗಳ ಪ್ರಥಮ ಪಟ್ಟಿ ಪ್ರಕಟಣೆ: 13-05-2019
ಆಯ್ಕೆಯಾದ ವಿದ್ಯಾರ್ಥಿಗಳ ದ್ವಿತೀಯ ಪಟ್ಟಿ ಪ್ರಕಟಣೆ: 17-05-2019
ಅಯ್ಕೆಯಾದ ವಿದ್ಯಾರ್ಥಿಗಳ ಅಂತಿಮ ಪಟ್ಟಿ ಪ್ರಕಟಣೆ : 20-05-2019
ಹೆಚ್ಚಿನ ಮಾಹಿತಿಗೆ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಧಿಕೃತ ವೆಬ್ಸೈಟ್: www.kreis.kar.nic.in