ಇಂದಿನ ಲೇಖನದಲ್ಲಿ ಯಾವ ರಾಜ್ಯವು ಯಾವ ಕೃಷಿ ಉತ್ಪನ್ನವನ್ನು ಹೆಚ್ಚು ಉತ್ಪಾದಿಸುತ್ತದೆ(Agricultural products and the most producing states list), ಆ ರಾಜ್ಯದ ಪ್ರಮುಖ ಕೃಷಿ ಬೆಳೆ ಯಾವುದು ಎಂಬ ಮಾಹಿತಿಯನ್ನು ನೀಡಲಾಗಿದೆ. ಈ ಮಾಹಿತಿಯು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಕೂಲವಾಗಲಿದೆ.
– ಅತಿ ಹೆಚ್ಚು ಮಾವು ಬೆಳೆಯುವ ರಾಜ್ಯಗಳು – ಉತ್ತರ ಪ್ರದೇಶ, ಆಂಧ್ರ ಪ್ರದೇಶ
– ಅತಿ ಹೆಚ್ಚು ಅನಾನಸ್ ಬೆಳೆಯುವ ರಾಜ್ಯ – ಪಶ್ಚಿಮ ಬಂಗಾಳ
– ಅತಿ ಹೆಚ್ಚು ಬದನೆಕಾಯಿ ಬೆಳೆಯುವ ರಾಜ್ಯ – ಒಡಿಸ್ಸಾ
– ಅತಿ ಹೆಚ್ಚು ಈರುಳ್ಳಿ ಬೆಳೆಯುವ ರಾಜ್ಯ – ಮಹಾರಾಷ್ಟ್ರ
– ಅತಿ ಹೆಚ್ಚು ರಬ್ಬರ್ ಬೆಳೆಯುವ ರಾಜ್ಯ – ಕೇರಳ
– ಅತಿ ಹೆಚ್ಚು ಕಾಫಿ ಬೆಳೆಯುವ ರಾಜ್ಯ – ಕರ್ನಾಟಕ
– ಅತಿ ಹೆಚ್ಚು ಚಹ ಬೆಳೆಯುವ ರಾಜ್ಯ – ಅಸ್ಸಾಂ
– ಅತಿ ಹೆಚ್ಚು ಆಹಾರ ಧಾನ್ಯಗಳನ್ನು ಉತ್ಪಾದಿಸುವ ರಾಜ್ಯ – ಉತ್ತರ ಪ್ರದೇಶ
– ಅತಿ ಹೆಚ್ಚು ತೋಟಗಾರಿಕಾ ಬೆಳೆ ಬೆಳೆಯುವ ರಾಜ್ಯ – ಪಶ್ಚಿಮ ಬಂಗಾಳ
– ಅತಿ ಹೆಚ್ಚು ತರಕಾರಿ ಬೆಳೆಯುವ ರಾಜ್ಯ – ಪಶ್ಚಿಮ ಬಂಗಾಳ
– ಅತಿ ಹೆಚ್ಚು ಹಣ್ಣು ಬೆಳೆಯುವ ರಾಜ್ಯ – ಆಂಧ್ರ ಪ್ರದೇಶ
– ಅತಿ ಹೆಚ್ಚು ಬಿಡಿ ಹೂ ಬೆಳೆಯುವ ರಾಜ್ಯ – ತಮಿಳು ನಾಡು
– ಅತಿ ಹೆಚ್ಚು ಕತ್ತರಿಸಿದ ಹೂಗಳ ಉತ್ಪಾದನೆಯಿರುವ ರಾಜ್ಯ -ಪಶ್ಚಿಮ ಬಂಗಾಳ
– ಅತಿ ಹೆಚ್ಚು ಬಾಳೆಹಣ್ಣು ಉತ್ಪಾದಿಸುವ ರಾಜ್ಯ – ತಮಿಳು ನಾಡು
– ಅತಿ ಹೆಚ್ಚು ದ್ರಾಕ್ಷಿ ಬೆಳೆಯುವ ರಾಜ್ಯ – ಮಹಾರಾಷ್ಟ್ರ
– ಅತಿ ಹೆಚ್ಚು ಸೇಬು ಬೆಳೆಯುವ ರಾಜ್ಯ – ಜಮ್ಮು ಮತ್ತು ಕಾಶ್ಮೀರ
– ಅತಿ ಹೆಚ್ಚು ಅಡಿಕೆ ಬೆಳೆಯುವ ರಾಜ್ಯ – ಕರ್ನಾಟಕ
– ಅತಿ ಹೆಚ್ಚು ಕೊಕೊ ಬೆಳೆಯುವ ರಾಜ್ಯ – ಕೇರಳ
– ಅತಿ ಹೆಚ್ಚು ತೆಂಗು ಬೆಳೆಯುವ ರಾಜ್ಯ – ತಮಿಳು ನಾಡು
– ಅತಿ ಹೆಚ್ಚುಗೋಡಂಬಿ ಬೆಳೆಯುವ ರಾಜ್ಯ – ಮಹಾರಾಷ್ಟ್ರ
– ಅತಿ ಹೆಚ್ಚು ನಿಂಬೆಹಣ್ಣು ಮತ್ತು ಮೋಸಂಬಿ ಬೆಳೆಯುವ ರಾಜ್ಯ – ಆಂಧ್ರ ಪ್ರದೇಶ
– ಅತಿ ಹೆಚ್ಚು ಕಿತ್ತಳೆ ಬೆಳೆಯುವ ರಾಜ್ಯ – ಪಂಜಾಬ್
– ಅತಿ ಹೆಚ್ಚು ಅಕ್ಕಿ ಉತ್ಪಾದಿಸುವ ರಾಜ್ಯ – ಪಶ್ಚಿಮ ಬಂಗಾಳ
– ಅತಿ ಹೆಚ್ಚು ಗೋಧಿ ಉತ್ಪಾದಿಸುವ ರಾಜ್ಯ -ಉತ್ತರ ಪ್ರದೇಶ
– ಅತಿ ಹೆಚ್ಚು ಮೆಕ್ಕೆಜೋಳ ಉತ್ಪಾದಿಸುವ ರಾಜ್ಯ – ಆಂಧ್ರ ಪ್ರದೇಶ
– ಅತಿ ಹೆಚ್ಚು ಎಣ್ಣೆ ಕಾಳುಗಳನ್ನು ಉತ್ಪಾದಿಸುವ ರಾಜ್ಯ – ಗುಜರಾತ್
– ಅತಿ ಹೆಚ್ಚು ಸಾಸಿವೆ ಬೆಳೆಯುವ ರಾಜ್ಯ – ರಾಜಸ್ಥಾನ
– ಅತಿ ಹೆಚ್ಚು ಸೋಯಾಬಿನ್ ಬೆಳೆಯುವ ರಾಜ್ಯ – ಮಧ್ಯ ಪ್ರದೇಶ
– ಅತಿ ಹೆಚ್ಚು ಸೂರ್ಯಕಾಂತಿ ಬೆಳೆಯುವ ರಾಜ್ಯ – ಕರ್ನಾಟಕ
– ಅತಿ ಹೆಚ್ಚು ಕಬ್ಬು ಬೆಳೆಯುವ ರಾಜ್ಯ – ಉತ್ತರ ಪ್ರದೇಶ
– ಅತಿ ಹೆಚ್ಚು ಹತ್ತಿ ಬೆಳೆಯುವ ರಾಜ್ಯ – ಗುಜರಾತ್
– ಅತಿ ಹೆಚ್ಚು ಸೆಣಬು ಬೆಳೆಯುವ ರಾಜ್ಯ – ಪಶ್ಚಿಮ ಬಂಗಾಳ
In this article Kannada Advisor giving iformation about Agricultural products and the most producing states in kannada. This information will help to kpsc exam aspirants.