ವ್ಯಕ್ತಿ ಒಂಟಿಯಾಗಿದ್ದರೆ ಆತ ಮಾನಸಿಕ ಖಿನ್ನತೆಗೆ ಒಳಗಾಗುತ್ತಾನೆ, ಮಾನಸಿಕ ತೊಂದರೆಗಳು ಸೃಷ್ಟಿಯಾಗುತ್ತವೆ ಎಂಬುದು ಹಳೆಯ ಡೈಲಾಗ್. ಆದರೆ ಈಗ ವ್ಯಕ್ತಿಗಳು ಏಕಾಂತದಲ್ಲಿದ್ದರೆ ಅವರಿಗೆ ಹೆಚ್ಚು ಹೊಸ ಹೊಸ ಆಲೋಚನೆಗಳು ಹೊಳೆಯುತ್ತವೆ. ಅಲ್ಲದೇ ಸೃಜನಶೀಲತೆ ಹೆಚ್ಚುತ್ತದೆ ಎಂದಿದೆ ಒಂದು ವರದಿ.
ಹೌದು.. ಮನುಷ್ಯ ಏಕಾಂತದಲ್ಲಿದ್ದರೆ ಆತ ಹೊಸ ಹೊಸ ಐಡಿಯಾಗಳನ್ನು ಅವಲೋಕಿಸುತ್ತಾನೆ. ಹಾಗೆ ಹೊಸ ಕೌಶಲ್ಯಗಳ ಬಗ್ಗೆ ಚಿಂತಿಸಿ ಸೃಜನಶೀಲತೆ ಹಚ್ಚುತ್ತದೆ ಎಂಬುದನ್ನು ಹೊಸ ಅಧ್ಯಯನ ಒಂದು ಹೇಳಿದೆ.
ನ್ಯೂಯಾರ್ಕ್ನ ಬಫೆಲೋ ವಿಶ್ವವಿದ್ಯಾನಿಲಯದ ಸಂಶೋಧಕರ ತಂಡವೊಂದು ನಡೆಸಿರುವ ಸಮೀಕ್ಷೆಯ ಪ್ರಕಾರ ‘ಕೆಲವರು ತಾವು ಒಂಟಿಯಾಗಿರಲು ಇಷ್ಟಪಡುತ್ತಾರೆ. ಅಂತಹವರು ತಮ್ಮ ಆಂತರ್ಯವನ್ನು ಈ ರೀತಿ ಇದ್ದು ಹೊರಹಾಕಲು ಪ್ರಯತ್ನಿಸುತ್ತಾರೆ. ತಮ್ಮ ಸಮಸ್ಯೆಗಳನ್ನು ಒಂಟಿಯಾಗಿ ಇದ್ದುಕೊಂಡೆ ಅದಕ್ಕೆ ಪರಿಹಾರಗಳನ್ನು ಕಂಡುಕೊಳ್ಳುತ್ತಾರೆ. ಇದನ್ನು ನಾವು ಜಾಗೃತೆಯಿಂದ ಅರ್ಥೈಸಿಕೊಳ್ಳಬೇಕು’ ಎಂದು ಅಮೆರಿಕದ ಪ್ರಮುಖ ಲೇಖಕರಾದ ಜೂಲಿ ಬೌಕರ್ ಹೇಳಿದ್ದಾರೆ.
ಕೆಲವರು ಒಬ್ಬಂಟಿಯಾಗಿ ಪುಸ್ತಕ ಓದುವುದಕ್ಕೆ, ಕಂಪ್ಯೂಟರ್ ಕೆಲಸ ಮಾಡುವುದಕ್ಕೆ ಇಷ್ಟಪಡುತ್ತಾರೆ. ಈಗಿನ ಯುವಕ-ಯುವಕರು ಮೊಬೈಲ್ ನಲ್ಲೇ ಪುಸ್ತಕ ಓದುವುದು, ಗೇಮ್ ಆಡುವುದು, ಅಥವಾ ಇತರೆ ಸೃಜನ ಶೀಲತೆಯಲ್ಲಿ ಹೊಸ ಗ್ಯಾಜೆಟ್ಗಳನ್ನು ಬಳಸಿಕೊಂಡು ತೊಡಗಿಕೊಳ್ಳುವವರು ಇದ್ದಾರೆ.
ಹಿಂದಿನ ಅಧ್ಯಯನಗಳೂ ವ್ಯಕ್ತಿ ಒಂಟಿಯಾಗಿದ್ದರೆ ಆತ ಮಾನಸಿಕ ಖಿನ್ನತೆಗೊಳಗಾಗುತ್ತಾನೆ ಎಂದು ಹೇಳುತ್ತಿದ್ದವು. ಆದರೆ ಈಗಿನ ನೂತನ ಅಧ್ಯಯನದ ವರದಿಯು ವ್ಯಕ್ತಿಯ ಒಂಟಿತನ ಆತನ ವ್ಯಕ್ತಿತ್ವ ವಿಕಸನಕ್ಕೂ ಎಡೆಮಾಡಿಕೊಡುತ್ತದೆ ಎಂದಿದೆ.
ಉದಾಹರಣೆಗೆ ಕೆಲವೊಮ್ಮೆ ವ್ಯಕ್ತಿಗಳು ಒಂಟಿಯಾಗಿದ್ದಾಗ ಇತರರು ಮಾತನಾಡಿಸಿದ್ದಲ್ಲಿ ಸಿಟ್ಟಿನಿಂದಲೇ ಡಿಸ್ಟರ್ಬ್ ಮಾಡಬೇಡಿ ಎನ್ನುತ್ತಾರೆ. ಅಂತಹವರ ಚಟುವಟಿಕೆಗಳನ್ನು ಹಾಗೆ ಗಮನಿಸಿ ನೋಡಿ.
“ಒಂಟಿಯಾಗಿರುವುದು ಕೆಲವೊಮ್ಮೆ ತುಂಬಾ ಒಳ್ಳೆಯದು – ಏಕೆ? ” ಈ ಕುರಿತು ಒಂದು ವಿಶೇಷ ಲೇಖನ ಇದೇ ವಿಭಾಗದಲ್ಲಿ ಶೀಘ್ರದಲ್ಲಿ ನಮ್ಮ ಓದುಗ ಪ್ರಿಯರಿಗೆ ಸಿಗಲಿದೆ. ಆಗಾಗ ಚೆಕ್ ಮಾಡುತ್ತಿರಿ.