ರಾಜ್ಯದ ಸ್ವತಂತ್ರ ನಿಯಂತ್ರಣ ಸಂಸ್ಥೆಯಾಗಿರುವ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣಾ ಆಯೋಗ(KERC)ದಲ್ಲಿ ಶೀಘ್ರದಲ್ಲಿಯೇ ತೆರವುಗೊಳ್ಳಲಿರುವ ಇಬ್ಬರು ಸದಸ್ಯರು(ಕಾನೂನು) ಮತ್ತು ಅಧ್ಯಕ್ಷರ ನೇಮಕಾತಿಗಾಗಿ ಅರ್ಜಿ ಅಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 27/11/2018 ರ ಸಂಜೆ 5.30 ರೊಳಗಾಗಿ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ಇಂಧನ ಇಲಾಖೆ, ಕೊಠಡಿ ಸಂಖ್ಯೆ:236, 2ನೇ ಮಹಡಿ, ವಿಕಾಸ ಸೌಧ, ಡಾ.ಬಿ.ಆರ್.ಅಂಬೇಡ್ಕರ್ ಬೀದಿ, ಬೆಂಗಳೂರು-560 001 ಇವರಿಗೆ ಸಲ್ಲಿಸುವುದು.
ಆಯೋಗದ ಅಧ್ಯಕ್ಷರ ಹುದ್ದೆಗೆ ಅರ್ಜಿ ಸಲ್ಲಿಸಲು ಇರಬೇಕಾದ ವಿದ್ಯಾರ್ಹತೆ ಮತ್ತು ಅನುಭವ
– ಆಯೋಗದ ಅಧ್ಯಕ್ಷರ ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅರ್ಜಿದಾರರುಗಳು ಇಂಜಿನಿಯರಿಂಗ್, ಆರ್ಥಿಕ, ಅರ್ಥಶಾಸ್ತ್ರ, ವಾನಿಜ್ಯ ಶಾಸ್ತ್ರ, ಕಾನೂನು ಅಥವಾ ಆಡಳಿತ ವಿಷಯಗಳಲ್ಲಿ ಪರಿಪೂರ್ಣ ಜ್ಞಾನ, ನಿಷ್ಠೆ ಮತ್ತು ಅನುಭವವುಳ್ಳವರಾಗಿರುವುದಲ್ಲದೆ ಈ ವಿಷಯಗಳನ್ನು ವ್ಯವಹರಿಸುವಲ್ಲಿ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿದವರಾಗಿರಬೇಕು.
– ಭಾರತದ ಪ್ರಜೆಯಾಗಿರಬೇಕು ಮತ್ತು ಕನ್ನಡ ವ್ಯವಹಾರ ಜ್ಞಾನವುಳ್ಳವರಾಗಿರಬೇಕು.
– ಅಭ್ಯರ್ಥಿಯು ಕನಿಷ್ಠ 25 ವರ್ಷಗಳ ಅನುಭವವುಳ್ಳವರಾಗಿರತಕ್ಕದ್ದು. ಹಾಗೂ ಈ ಕ್ಷೇತ್ರದಲ್ಲಿ ಹಿರಿಯ ಹುದ್ದೆಯಲ್ಲಿ ಸೇವೆ ಸಲ್ಲಿಸಿರಬೇಕು.
ಆಯೋಗದ ಸದಸ್ಯರು(ಕಾನೂನು) ಹುದ್ದೆಗೆ ಅರ್ಜಿ ಸಲ್ಲಿಸಲು ಇರಬೇಕಾದ ವಿದ್ಯಾರ್ಹತೆ ಮತ್ತು ಅನುಭವ
– ಕಾನೂನು ವಿಷಯದಲ್ಲಿ ಪರಿಪೂರ್ಣ ಜ್ಞಾನ, ನಿಷ್ಠೆ ಮತ್ತು ಅನುಭವವುಳ್ಳವರಾಗಿರಬೇಕು.
– ಅರ್ಜಿದಾರರು ನ್ಯಾಯಾಂಗದ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿರುವವರು ಅಥವಾ ಸಲ್ಲಿಸಿರುವವರಾಗಿರಬೇಕಾಗಿದ್ದು, ಅಥವಾ ಅರ್ಜಿದಾರರು ಕಾನೂನು ವಿಷಯದಲ್ಲಿ ವಿದ್ಯಾರ್ಹತೆ ಉಳ್ಳವರಾಗಿ, ವಕೀಲ ವೃತ್ತಿಯಲ್ಲಿ ಹೆಚ್ಚಿನ ಅನುಭವವುಳ್ಳವರಾಗಿ, ಉಚ್ಛ ನ್ಯಾಯಾಲಯದ ನ್ಯಾಯಾದೀಶರಾಗಿ ಅಥವಾ ಜಿಲ್ಲಾ ನ್ಯಾಯಾದೀಶರಾಗಿ ನೇಮಕಾತಿಗೆ ಅರ್ಹತೆ ಹೊಂದಿರಬೇಕು.
– ಭಾರತದ ಪ್ರಜೆಯಾಗಿರಬೇಕು ಮತ್ತು ಕನ್ನಡ ವ್ಯವಹಾರ ಜ್ಞಾನವುಳ್ಳವರಾಗಿರಬೇಕು.
Application invited for appointment of posts in Karnataka Electricity Regulatory Commission. Read more in this article.