Home » ಉಚಿತ ಊಟ, ವಸತಿ, ಶಿಕ್ಷಣ ಭತ್ಯೆಯೊಂದಿಗೆ 4 ವರ್ಷ ಸಂಗೀತ ತರಬೇತಿಗೆ ಅರ್ಜಿ ಆಹ್ವಾನ

ಉಚಿತ ಊಟ, ವಸತಿ, ಶಿಕ್ಷಣ ಭತ್ಯೆಯೊಂದಿಗೆ 4 ವರ್ಷ ಸಂಗೀತ ತರಬೇತಿಗೆ ಅರ್ಜಿ ಆಹ್ವಾನ

by manager manager

ಉಚಿತ ಊಟ, ವಸತಿ, ಶಿಕ್ಷಣ ಮತ್ತು ತರಬೇತಿ ಭತ್ಯೆಯೊಂದಿಗೆ 4 ವರ್ಷ ಸಂಗೀತ ತರಬೇತಿ ನೀಡಲು 2018-2019ನೇ ಸಾಲಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಅರ್ಜಿ ಆಹ್ವಾನಿಸಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಆಯುಕ್ತರು ಪ್ರಕಟಣೆ ಹೊರಡಿಸಿದ್ದಾರೆ.

2018-2019 ನೇ ಸಾಲಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಆಹ್ವಾನಿಸಿರುವ ಸಂಗೀತ ತರಬೇತಿ ಅರ್ಜಿಯು ಸವಿತಾ ಸಮಾಜದ ವಿದ್ಯಾರ್ಥಿಗಳಿಗೆ ಮಾತ್ರ. ಈ ಸಮಾಜದ ವಿದ್ಯಾರ್ಥಿಗಳಿಗೆ ಪಾರಂಪರಿಕ ಸಂಗೀತ ಕಲೆಗಳಾದ ಡೋಲು ಮತ್ತು ನಾದಸ್ವರ ಸಂಗೀತ ಕಲೆಗಳನ್ನು 4 ವರ್ಷ ಉಚಿತ ಊಟ, ವಸತಿ, ಶಿಕ್ಷಣ ಮತ್ತು ತರಬೇತಿ ಭತ್ಯೆಯೊಂದಿಗೆ ನೀಡಲಾಗುತ್ತದೆ.

ತರಬೇತಿ ನೀಡು ಸ್ಥಳ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯ ತರಬೇತಿ ಕೇಂದ್ರದಲ್ಲಿ

ಅರ್ಜಿ ಸಲ್ಲಿಸುವುದು ಹೇಗೆ?

ಸವಿತಾ ಸಮಾಜದ ಆಸಕ್ತ ವಿದ್ಯಾರ್ಥಿಗಳು ಅರ್ಜಿ ನಮೂನೆಯನ್ನು ಆಯಾ ಜಿಲ್ಲೆಯ, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಛೇರಿಯಿಂದ ಪಡೆದು ಭರ್ತಿ ಮಾಡಿ ದಿನಾಂಕ 30/06/2018 ರೊಳಗಾಗಿ ಆಯಾ ಜಿಲ್ಲೆಯ ಜಿಲ್ಲಾ ಹಿಂದುಳಿದ ವರ್ಗಗಳ ಕಛೇರಿಗೆ ಸಲ್ಲಿಸಲು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 30/06/2018

ಹೆಚ್ಚಿನ ಮಾಹಿತಿಗಾಗಿ : ಇಲಾಖಾ ಅಧಿಕೃತ ವೆಬ್‌ಸೈಟ್ www.backwardclasses.kar.nic.in ಗೆ ಭೇಟಿ ನೀಡಿ. ಪ್ರಕಟಣೆಯ ಲಿಂಕ್ ಗೆ ಕ್ಲಿಕ್ ಮಾಡಿ

http://www.backwardclasses.kar.nic.in/PDF/Savitha_Samaja/Prakatane.pdf

ಅಪ್ಲಿಕೇಶನ್ ಫಾರ್ಮ್‌ ಗಾಗಿ ಕ್ಲಿಕ್ ಮಾಡಿ

http://www.backwardclasses.kar.nic.in/PDF/Savitha_Samaja/Application.pdf

Department of backwardclasses invited application’s to Savitha Samaja students for 4 years Music Training. The last date for apply 30/06/2018.

You may also like