ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವವರು ದಿನನಿತ್ಯ ಪತ್ರಿಕೆಗಳು ಹಾಗೂ ಇತರೆ ನಿಯತಕಾಲಿಕೆಗಳನ್ನು ಓದುತ್ತೀರಿ. ಇಂದಿನ ಪ್ರಚಲಿತ ವಿದ್ಯಮಾನಗಳ ಬಗ್ಗೆ ನಾಳೆ ಪ್ರಶ್ನೆಗಳನ್ನು ನಾಲ್ಕು ಆಯ್ಕೆಗಳನ್ನು ಕೊಟ್ಟು ಕೇಳಿದರೆ ಭಾಗಶಃ ಶೇ.90 ರಷ್ಟು ಸರಿ ಉತ್ತರಗಳನ್ನು ನೀಡಬಹುದು. ಆದರೆ ಆಯ್ಕೆಗಳನ್ನು ನೀಡದೆ ಕೇವಲ ಪ್ರಶ್ನೆಗಳನ್ನು ಕೇಳಿದರೆ? ಎಷ್ಟು ಉತ್ತರ ಸರಿ ಹೇಳುತ್ತೀರಿ? ನಿಮಗೆ ನೀವೆ ಪರೀಕ್ಷಿಸಿಕೊಳ್ಳಿ..
ನಿಮ್ಮ ಕನ್ನಡ ಅಡ್ವೈಜರ್ ದಿನನಿತ್ಯ 10 ಪ್ರಶ್ನೆಗಳನ್ನು ಬಹು ಆಯ್ಕೆ ಉತ್ತರಗಳನ್ನು ನೀಡದೆ ಮೊದಲು ಕೇವಲ ಪ್ರಶ್ನೆಗಳನ್ನು ನೀಡಿ, ನಂತರ ಪುಟದ ಕೆಳಭಾಗದಲ್ಲಿ ಉತ್ತರಗಳನ್ನು ನೀಡಲಿದೆ. ಉತ್ತರಗಳನ್ನು ನೋಡುವ ಮೊದಲು ನಿಮ್ಮ ಜ್ಞಾನದ ಮಟ್ಟವನ್ನು ನೀವೆ ಮೊದಲು ಪರೀಕ್ಷಿಸಿಕೊಳ್ಳಿ. ನಂತರ ಉತ್ತರಗಳನ್ನು ನೋಡಿಕೊಳ್ಳಿರಿ..
1.ಭಾರತ ಸರ್ಕಾರವು ಇತ್ತೀಚೆಗೆ ಯಾವ ರಾಜ್ಯದಲ್ಲಿ ಬಹುಶಿಸ್ತಿನ ಭಯೋತ್ಪಾದನಾ ಮೇಲ್ವಿಚಾರಣ ಗುಂಪನ್ನು(MDTMG) ನೇಮಿಸಿದೆ?
2. ಭಾರತವು ವಿಶೇಷವಾಗಿ ಅತಿಥಿಯಾಗಿರುವ ‘Livre Paris’ ಯಾವ ವಿಶೇಷ ಕಾರ್ಯಕ್ರಮಕ್ಕೆ ಸಂಬಂಧಿಸಿದೆ?
3. 5G ಮತ್ತು ಕೃತಕ ಬುದ್ಧಿಮತ್ತೆ ಆತ್ಯಾಧುನಿಕ ಸಂಶೋಧನೆಗೆ ಸಂಬಂಧಿಸಿದಂತೆ ವಿಪ್ರೊದೊಂದಿಗೆ ಯಾವ ಐಐಟಿ ಸಂಘಟಿತಗೊಂಡಿದೆ?
4. ‘ದಿ ಸ್ಟೇಟ್ ಆಫ್ ದಿ ಗ್ಲೋಬಲ್ ಕ್ಲೈಮೇಟ್’ ವರದಿಯನ್ನು ಯಾವ ಅಂತರಾಷ್ಟ್ರೀಯ ಸಂಸ್ಥೆ ಆರಂಭಿಸಿದೆ?
5. ಬಿಳಿ ರಾಷ್ಟ್ರೀಯತೆ ಮತ್ತು ಪ್ರತ್ಯೇಕತಾವಾದವನ್ನು ಯಾವ ಸಾಮಾಜಿಕ ಜಾಲತಾಣ ನಿಷೇಧಿಸಿದೆ?
6. ಬ್ಲಾಕ್ಚೈನ್ ಶಕ್ತ ಮಾರುಕಟ್ಟೆ ಮೊಬೈಲ್ ಆಪ್ ಅನ್ನು ಕೇಂದ್ರ ಸರ್ಕಾರವು ಯಾವ ಸರಕುಗಳಿಗಾಗಿ ಆರಂಭಿಸಿದೆ?
7. ಕ್ರೊಟಿಯಾಸ್ನ ಉನ್ನತ ನಾಗರೀಕ ಪ್ರಶಸ್ತಿ ‘ಗ್ರ್ಯಾಂಡ್ ಆರ್ಡರ್ ಆಫ್ ದಿ ಕಿಂಗ್ ಆಫ್ ಟೊಮಿಸ್ಲಾವ್’ ಅನ್ನು ಭಾರತದ ಯಾರಿಗೆ ನೀಡಿ ಗೌರವಿಸಲಾಗಿದೆ?
8. ಯಾವ ದಿನಾಂಕದಂದು, ಬಂಧಿತ ಮತ್ತು ಮಿಸ್ಸಿಂಗ್ ಸಿಬ್ಬಂದಿ ಸದಸ್ಯರೊಂದಿಗೆ 2019 ಅಂತರಾಷ್ಟ್ರೀಯ ಒಗ್ಗಟ್ಟು ದಿನವನ್ನು ಇತ್ತೀಚೆಗೆ ಆಚರಿಸಲಾಯಿತು?
9. ‘Gandhi: The Writer’ ಪುಸ್ತಕದ ಲೇಖಕರು ಯಾರು?
10. 2019 ಸ್ಕೈಟ್ರ್ಯಾಕ್ಸ್ ವರ್ಲ್ಡ್ ಏರ್ಪೋರ್ಟ್ ಪ್ರಶಸ್ತಿಗೆ ಭಾರತದ ಅತ್ಯುತ್ತಮ ವಿಮಾನಯಾನ ಕೇಂದ್ರವಾಗಿ ಹೆಸರಿಸಲ್ಪಟ್ಟ ವಿಮಾನ ನಿಲ್ದಾಣ ಯಾವುದು?
ಈ ಮೇಲಿನ ಪ್ರಶ್ನೆಗಳಿಗೆ ಉತ್ತರಗಳು ಈ ಕೆಳಗಿನಂತಿವೆ
1. ಜಮ್ಮು ಮತ್ತು ಕಾಶ್ಮೀರ
2. ಪುಸ್ತಕ ಜಾತ್ರೆ
3. ಐಐಟಿ ಖರಗ್ಪುರ್
4. WMO(World Meteorological Organization)
5. ಫೇಸ್ಬುಕ್
6. ಕಾಫಿ
7. ರಾಮ್ನಾಥ್ ಕೋವಿಂದ್
8. ಮಾರ್ಚ್ 25
9. ಭಭಾನಿ ಭಟ್ಟಾಚಾರ್ಯ
10. ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ
Kannadaadvisor publishes relevant fact based on Current Affairs almost daily basis. This information helps you to keep a watch on current happenings and may be useful for General Awarness part of KAS, IAS, IBPS Banking, ssc-cgl, bank clerical and other similar examination. Here are the today current affairs quizzes.