Home » ಆಯುರ್ವೇದ ಸೌಂದರ್ಯ ಸಲಹೆಗಳು: ಕಡಿಮೆ ದುಡ್ಡು ಆರೋಗ್ಯ ಹೆಚ್ಚು

ಆಯುರ್ವೇದ ಸೌಂದರ್ಯ ಸಲಹೆಗಳು: ಕಡಿಮೆ ದುಡ್ಡು ಆರೋಗ್ಯ ಹೆಚ್ಚು

by manager manager

ಶರೀರದ ಸೌಂದರ್ಯಕ್ಕೆ ಆಯುರ್ವೇದ ಪ್ರಕೃತಿದತ್ತವಾಗಿ ಸಿಗುವ ಅದ್ಬುತ ಮದ್ದು. ಭಾರತದಲ್ಲಂತು ಈ ಆಯುರ್ವೇದ ಪ್ರಾಚೀನ ಕಾಲದಿಂದಲೂ ಬಳಕೆಯಲ್ಲಿದೆ, ಸದ್ಯ ಜಗ ಬದಲಾದಂತೆ ಆಯುರ್ವೇದ ತನ್ನ ಜಾಗದ ವಿಶಾಲತೆಯನ್ನು ಸಂವೃದ್ದಿಗೊಳಿಸುತ್ತ ಸಾಗುತ್ತಿದೆ. ಪ್ರತೀ ರೋಗಕ್ಕೂ ಮದ್ದು ಈ ಆಯುರ್ವೇದ ಪದ್ಧತಿಯಲ್ಲಿದೆ. ಇದಕ್ಕೆ ಸೌಂದರ್ಯ ಹೊರತಾಗಿಲ್ಲ. ಸೌಂದರ್ಯ ವೃದ್ಧಿಗೆ ಆಯುರ್ವೇದ ಪದ್ಧತಿಯಲ್ಲಿ ಅನೇಕ ಪಥ್ಯ ಮತ್ತು ಅಳವಡಿಸಿಕೊಳ್ಳಬಹುದಾದ ಹಲವು ಬಗೆಯ ಆಚರಣೆಗಳಿವೆ ಮತ್ತು ಅವುಗಳ ವಿಶೇಷತೆ ಏನೆಂದರೆ ಅವುಗಳಿದ ಯಾವುದೇ ದುಷ್ಪರಿಣಾಮವಿಲ್ಲ. ಆಯುರ್ವೇದ ಇಂಗ್ಲೀಷ್ ಔಷಧಿ ಪದ್ಧತಿಗೆ ಹೋಲಿಸಿದರೆ ಪರಿಣಾಮ ನಿಧಾನವಾದರೂ, ಫಲ ಉತ್ತಮ ರೀತಿಯದ್ದು. ಹಾಗೆ ಇದು ಆರೋಗ್ಯಕರ ಜೀವನ ಶೈಲಿಗೆ ಪುಷ್ಟಿ ನೀಡುವಂತಿದೆ. ಹಾಗಾದ್ರೆ ನಮ್ಮ ಸೌಂದರ್ಯ ವೃದ್ಧಿಗೆ ಆಯುರ್ವೇದ ಪದ್ಧತಿಯಲ್ಲಿ ಇರುವ ಟಿಪ್ಸ್ ಗಳ ಬಗ್ಗೆ ಇಲ್ಲಿದೆ ಮಾಹಿತಿ.


ಬೇಗ ಮಲಗಿ ಬೇಗ ಎದ್ದೇಳಿ
ನಮ್ಮ ಆಯುರ್ವೇದ ಪದ್ದತಿಯಲ್ಲಿ ಇದು ಬಹಳ ಮುಖ್ಯವಾದ ವಿಷಯ. ಏಕೆಂದರೆ ಬಹುಬೇಗ ನಿದ್ರೆಗೆ ತೆರಳುವುದರಿಂದ ಆರೋಗ್ಯ ಮತ್ತು ಜ್ಞಾಪಕ ಶಕ್ತಿ ಉತ್ತಮವಾಗಿರುವುದಲ್ಲದೇ, ಶರೀರದ ಅಂದವನ್ನು ಕಾಪಾಡುತ್ತದೆ. ತೀರ ತಡವಾಗಿ ನಿದ್ರೆಗೆ ತೆರಳುವುದರಿಂದ ಚರ್ಮದ ಕಾಂತಿಯತೆ ಕಡಿಮೆ ಆಗುವುದು, ಮುಖ ಒಣಗಿದಂತೆ ಆಗುವುದು, ಹೆಚ್ಚು ವಯಸ್ಸಾದಂತೆ ಆಗುವುದು. ಒಳ್ಳೆಯ ನಿದ್ರೆ ಚರ್ಮಕ್ಕೆ ಪುನರ್ ಚೇತನ ನೀಡುತ್ತದೆ. ಹಾಗೆ ಬೆಳ್ಳಿಗ್ಗೆ ಬೇಗ ಏಳುವ ಅಭ್ಯಾಸ ದೇಹ ಮತ್ತು ಮನಸ್ಸಿನ ಆರೋಗ್ಯಕ್ಕೂ ಒಳ್ಳೆಯದು.


ಒಳ್ಳೆಯ ಆಹಾರ ಸೇವನೆ
ಆಹಾರ ನಮ್ಮ ಹಸಿವನ್ನು ನೀಗಿಸುವುದಲ್ಲದೆ ದೇಹಕ್ಕೆ ಶಕ್ತಿಯ ಮೂಲವಾಗಿಯು ಸಹಾ ಕೆಲಸ ಮಾಡುತ್ತದೆ ಆದರೆ ಶರೀರಕ್ಕೆ ಹೊಂದಿಕೆಯಾಗದ ಆಹಾರ ಕ್ರಮವನ್ನು ಅನುಸರಿಸಿದರೆ ಜೀರ್ಣಕ್ರಿಯೆ ಸರಿಯಾದ ರೀತಿಯಲ್ಲಿ ನಡೆಯದೆ ಬೇರೆ ದುಷ್ಪರಿಣಾಮಕ್ಕೆ ಕಾರಣವಾಗಬಹುದು. ಹಾಗಾಗಿ ಹಣ್ಣು ಮತ್ತು ಹಾಲು, ಹಾಲು ಮತ್ತು ಮಾಂಸ, ಊಟದ ನಂತರ ಕೂಲ್ ಡ್ರಿಂಕ್ಸ್ ಸೇವನೆ, ತುಪ್ಪ ಮತ್ತು ಜೇನುತುಪ್ಪ ಗಳಂತಹ ಆಹಾರವನ್ನು ಒಟ್ಟಿಗೆ ಸೇವಿಸುವುದನ್ನು ಸಂಪೂರ್ಣವಾಗಿ ನಿಲ್ಲಿಸುವುದು ಒಳ್ಳೆಯದು. ಮತ್ತು ದೇಹಕ್ಕೆ ಒಗ್ಗುವ ಆಹಾರವನ್ನೇ ಸೇವಿಸಿ. ಹೊಳೆಯುವ ಚರ್ಮಕ್ಕಾಗಿ ಸೂರ್ಯಕಾಂತಿ , ಬಾದಾಮಿ, ಪಿಸ್ತಾ ಮತ್ತು ಅಗಸೆ ಬೀಜಗಳನ್ನು ನಿಯಮಿತವಾಗಿ ಸೇವಿಸುವುದರಿಂದ ಉತ್ತಮ ಫಲಿತಾಂಶ ದೊರೆಯುತ್ತದೆ.


ಪಾನೀಯ ಸೇವನೆ
ದೇಹದಲ್ಲಿ ದಿನವಿಡೀ ನೀರಿನ ಅಂಶವನ್ನು ಹಿಡಿದಿಡುವುದು ಮುಖ್ಯ. ಆದ್ದರಿಂದ ಆಗಾಗ್ಗೆ ನೀರು ಮತ್ತು ಹರ್ಬಲ್ ಟೀ ಸೇವನೆ ಉತ್ತಮ ಅಭ್ಯಾಸ. ಗಿಡಮೂಲಿಕೆಗಳ ಟೀಗಳಾದ ಸುಂಟಿ, ನಿಂಬೆಹಣ್ಣು, ಮತ್ತು ಕ್ಯಾಮೋಮೈಲ್ ಟೀ ಹಾಗೆ ಹಣ್ಣಿನ ರಸಗಳನ್ನು ಮಧ್ಯಾಹ್ನದ ವೇಳೆ ಸೇವಿಸುವುದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು ಚರ್ಮದ ಕಾಂತಿಗೆ ಒಳ್ಳೆಯದು.


ಹೆಚ್ಚು ನೀರಿನಂಶ ಇರುವ ತರಕಾರಿಗಳನ್ನು ಸೇವಿಸಿ
ನೀರಿನಂಶ ಹೆಚ್ಚಾಗಿ ಇರುವ ತರಕಾರಿಗಳು ಸುಲಭವಾಗಿ ಜೀರ್ಣವಾಗಬಲ್ಲವು. ಅಂತಹ ತರಕಾರಿಗಳೆಂದರೆ ಕ್ಯಾರೋಟ್, ಮೂಲಂಗಿ, ಸೌತೆಕಾಯಿ, ಸೊಪ್ಪು, ಎಲ್ಲಾ ಬಗೆಯ ಚರ್ಮಕ್ಕೆ ಇವು ಅತ್ಯುತ್ತಮವಾದವು. ಈ ತರಕಾರಿಗಳನ್ನು ಬೇಯಿಸಿ ಅಥವಾ ಸಾಲಡ್ ಮಾಡಿ. ಕನಿಷ್ಟ ಮೂರರಿಂದ ನಾಲ್ಕು ಬಗೆಯ ತರಕಾರಿಗಳನ್ನು ಮಿಶ್ರ ಮಾಡಿ ಸೇವಿಸಿದರೆ ಚರ್ಮದ ಆರೋಗ್ಯ ಉತ್ತಮವಾಗಿರುತ್ತದೆ.


ವ್ಯಾಯಾಮ
ವ್ಯಾಯಾಮ ಕೇವಲ ಹೃದಯ ಮತ್ತು ಶ್ವಾಸಕೋಶದ ಆರೋಗ್ಯಕ್ಕೆ ಮಾತ್ರವಲ್ಲದೇ, ದೇಹದ ಸೌಂದರ್ಯ ಮತ್ತು ಹೊಳೆವ ಚರ್ಮಕ್ಕೆ ಉತ್ತಮವಾದುದು. ವ್ಯಾಯಾಮ ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ, ಚರ್ಮದ ಕೋಶಗಳನ್ನು ಆರೋಗ್ಯವಾಗಿಡಲು ಸಹಕಾರಿಯಾಗಿದೆ, ಮತ್ತು ಹಾನಿಕಾರಕ ಜೀವಾಣುಗಳನ್ನು ಹೊರಹಾಕಿ ಸಂಪೂರ್ಣ ದೇಹವನ್ನು ಕಾಪಾಡುತ್ತದೆ. ಹಾಗೆ ದೀರ್ಘಕಾಲದ ಉಸಿರಾಟ ವ್ಯಾಯಾಮ ಮಾಡುವುದರಿಂದ ಮಾನಸಿಕ ಒತ್ತಡ ಕಡಿಮೆ ಮಾಡಿ ಶಾಂತಿ ನೆಲೆಸಲು ಉತ್ತಮ ಮಾರ್ಗವಾಗಿದೆ. ರಾತ್ರಿ ನಿದ್ರೆಗೆ ತೆರಳುವ ಮುನ್ನ ಸರಳವಾದ ಉಸಿರಾಟದ ವ್ಯಾಯಾಮ ಮನಸಿನ ಒತ್ತಡವನ್ನು ಕಡಿಮೆ ಮಾಡಿ ಸುಖ ನಿದ್ರೆಗೆ ಚಾಲ್ತಿ ನೀಡುತ್ತದೆ.


ಅರಿಶಿನ ಬಳಕೆ
ಚರ್ಮದ ಕಾಂತಿ ಹೆಚ್ಚಿಸಿ ಸೌಂದರ್ಯಾ ವೃದ್ಧಿಸಲು ಅರಿಶಿನ ಉತ್ತಮ ಮತ್ತು ಇದು ಚರ್ಮದ ಮೇಲಿನ ಕಪ್ಪು ಕಲೆಗಳನ್ನು ನಿವಾರಿಸುತ್ತದೆ, ದೇಹದಲ್ಲಿನ ಬೇಡದ ಕೂದಲನ್ನು ತೊಲಗಿಸುತ್ತದೆ. ಹಾಗೆ ಮುಲ್ತಾನಿ ಮಿಟ್ಟಿಯ ಫೇಸ್ ಪ್ಯಾಕ್, ಅಕ್ಕಿ ತೊಳೆದ ನೀರಿನಿಂದ ಮುಖ ತೊಳೆಯುವ ಅಭ್ಯಾಸ, ಲೋಳೆ ಸರದ ಮಸಾಜ್ ಮತ್ತು ಬೇವಿನ ಎಲೆ ಪುಡಿಯ ಬಳಕೆ ದೇಹ ಇನ್ನಷ್ಟು ಕಾಂತಿಯುತವಾಗಿ ಕಾಣಲು ಸಹಾಯ ಮಾಡುತ್ತದೆ.


ಆಯಿಲ್ ಮಸಾಜ್
ನಮ್ಮ ಸೌಂದರ್ಯ ಕಾಪಾಡಲು ಚರ್ಮದ ತೇವಾಂಶವನ್ನು ಕಾಪಾಡಿಕೊಳ್ಳುವುದು ಮತ್ತು ಹೈಡ್ರೇಟೆಡ್ ಆಗಿ ಇರಿಸಿಕೊಳ್ಳುವುದು ಬಹುಮುಖ್ಯ ಅದಕ್ಕೆ ಉತ್ತಮ ಉಪಾಯ ಆಯಿಲ್ ಮಸಾಜ್. ಎಣ್ಣೆ ಮಸಾಜ್ ಆಯುರ್ವೇದಿಕ್ ಸ್ಕಿನ್ ಕೇರ್ ನ ಒಂದು ಕ್ರಮ. ಗಿಡಮೂಲಿಕೆಗಳ ಆಯಿಲ್ ಮಸಾಜ್ ಸ್ನಾಯುಗಳನ್ನು ರಿಲ್ಯಾಕ್ಸ್ ಮಾಡುವುದಲ್ಲದೇ, ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ. ಇದು ಚರ್ಮದ ಕಾಂತಿ ಹೆಚ್ಚಾಗುವಂತೆ ಮಾಡುತ್ತದೆ. ಇದೇ ಕಾರಣಕ್ಕೆ ಇರಬೇಕು ಹಬ್ಬದ ದಿನದ ನೆಪವಾಗಿ ಎಣ್ಣೆ ಸ್ನಾನ ನಮ್ಮಲ್ಲಿ ರೂಢಿಯಲ್ಲಿರುವುದು.


ಶುಗರ್ ಮತ್ತು ಉಪ್ಪಿನಾಂಶ ಸಮತೆಯಲ್ಲಿರಲಿ
ಹೆಚ್ಚಿನ ಉಪ್ಪಿನಂಶ ಸೇವನೆ ರಕ್ತದ ಒತ್ತಡವನ್ನು ಹೆಚ್ಚಿಸುತ್ತದೆ ಅಲ್ಲದೇ ಹೃದಯನಾಳ ರೋಗವನ್ನು ಹೆಚ್ಚಿಸುತ್ತದೆ. ಹೆಚ್ಚಿನ ಪ್ರಮಾಣದ ಸೆಕ್ಕರೆ ಮತ್ತು ಉಪ್ಪು ಸೇವನೆಯಿಂದ Collagen ಮತ್ತು Elastin ಡ್ಯಾಮೇಜ್ ಗೆ ಕಾರಣವಾಗುತ್ತದೆ. ಆದರೆ ಈ ಎರಡು ಸಂಯುಕ್ತಗಳೇ ಚರ್ಮದ ಕಾಂತೀಯತೆ, ಸೊಕ್ಕು ಬರದ ರೀತಿ ಕಾಪಾಡುವವು.


ಎಳೆ ಬಿಸಿಲಿನ ಸ್ಪರ್ಶ
ಅಲ್ಪ ಪ್ರಮಾಣದ ಅದರಲ್ಲೂ ಬೆಳಗಿನ ವೇಳೆ ಸೂರ್ಯನ ಶಾಖಕ್ಕೆ ಚರ್ಮ ಒಡ್ಡುವುದು ವಿಟಮಿನ್ ಡಿ ಗಾಗಿ ಅಗತ್ಯ. ಆದರೆ ಅತೀ ಹೆಚ್ಚಾಗಿ ಸೂರ್ಯನ ಯುವಿ ಕಿರಣಗಳಿಗೆ ಚರ್ಮ ಒಡ್ಡುವುದರಿಂದ ಟ್ಯಾನಿಂಗ್, ಸನ್ಬರ್ನ್, ಹೈಪರ್ಪಿಗ್ಮೆಂಟೇಶನ್, ಮತ್ತು ಸುಕ್ಕುಗಳನ್ನು ಉಂಟುಮಾಡಬಹುದು.

ಚಳಿಗಾಲದಲ್ಲಿ ಚರ್ಮದ ಆರೋಗ್ಯ ಕಾಪಾಡಿಕೊಳ್ಳೊದು ಹೇಗೆ?

You may also like