ಇತ್ತೀಚೆಗೆ ‘ಸೊಸೈಟಿ ಆಫ್ ಡೆರ್ಮಟೊಲೊಜಿ ಸ್ಕಿನ್‌ಕೇರ್ ಸ್ಪೆಷಿಯಲಿಸ್ಟ್(SDSS)’ ಅಧ್ಯಯನದ ವರದಿ ಪ್ರಕಾರ ಶೇಕಡ 88 ರಷ್ಟು ಮಹಿಳೆಯರಿಗೆ ತಮ್ಮ ಚರ್ಮದ ಸುರಕ್ಷತೆಗೆ ಉತ್ತಮವಾದ ಪರಿಹಾರ, ಪ್ರಾಡಕ್ಟ್ ಯಾವುದು ಎಂಬುದೇ ತಿಳಿದಿಲ್ಲ ಎಂಬ ಮಾಹಿತಿ ಹೊರಬಿದ್ದಿದೆ. ಇದು ಒಂದು ರೀತಿಯ ಆಶ್ಚರ್ಯದ ಸಂಗತಿಯೇ ಆದರೂ ಇಂತಹ ಸಮಸ್ಯೆಗಳಿಗೆ ಸಾಕಷ್ಟು ಪರಿಹಾರಗಳು ಇವೆ ಎಂಬುದನ್ನು ಮರೆಯುವಂತಿಲ್ಲ.(ayurvedic beauty tips in kannada language)
ಕೇವಲ ಮಾರುಕಟ್ಟೆಯಲ್ಲಿ ಮಾತ್ರವಲ್ಲ ಮನೆಯಲ್ಲೇ ತಮ್ಮ ತಮ್ಮ ಚರ್ಮದ ಸುರಕ್ಷತೆಗೆ ಮದ್ದುಗಳಿವೆ. ಆದರೆ ಅವುಗಳನ್ನು ಬಳಸಿಕೊಳ್ಳುವ ವಿಧಾನ ತಿಳಿದಿರಬೇಕಷ್ಟೆ.
ಇಂದು ನಾನಾಕಾರಣಗಳ ಜೊತೆಗೆ ವಾಯುಮಾಲಿನ್ಯವು ಸಹ ಸ್ಕಿನ್ ಮತ್ತು ದೇಹದ ಆರೋಗ್ಯದ ಮೇಲೆ ದುಷ್ಟರಿಣಾಮ ಬೀರುತ್ತಿದೆ. ಆದ್ರೆ ಯಾವುದೇ ಸಮಸ್ಯೆ ಇದ್ರು ಅದಕ್ಕೆ ಒಂದು ಉತ್ತಮ ಪರಿಹಾರ ಅಂತ ಇದ್ದೇ ಇರುತ್ತೆ ಅಲ್ವೇ..
ಚರ್ಮದ ಅಂದವನ್ನು ಕಾಪಾಡಲು ಆಯುರ್ವೇದ ಜೀವನ ಶೈಲಿ ಅತ್ಯುತ್ತಮವಾದದ್ದು. ಆಯುರ್ವೇದ ವಿಜ್ಞಾನ ಮಾತ್ರವಲ್ಲದೇ ಅದೊಂದು ಕಲೆಯು ಹೌದು. ಇದು ನೈಸರ್ಗಿಕವಾಗಿ ಸ್ಫೂರ್ತಿದಾಯಕವಾದದ್ದು. ಕೇವಲ ಗಿಡಮೂಲಿಕೆಗಳ ಪರಿಹಾರ ಮಾತ್ರವಲ್ಲದೇ ಸುಂದರ ಜೀವನಶೈಲಿಯೂ ಎನ್ನಬಹುದು.
ಇಂದಿನ ಲೇಖನದಲ್ಲಿ ಹಲವು ಭಾರಿ ಪರೀಕ್ಷೆ ಮಾಡಿದ ಆಯುರ್ವೇದಿಕ್ ಹವ್ಯಾಸಗಳನ್ನು ನಿಮ್ಮ ಸಹಜ ಸೌಂದರ್ಯಕ್ಕಾಗಿ, ಜೊತೆಗೆ ವಿಶೇಷವಾಗಿ ಚರ್ಮದ ಅಂದವನ್ನು ಸಹ ಕಾಪಾಡುವ ಸಲಹೆಗಳನ್ನು ಈ ಲೇಖನದಲ್ಲಿ ನೀಡಲಾಗಿದೆ.(ayurvedic beauty tips for skin whitening)
ಹೊಳೆವ ಚರ್ಮದ ಕಾಂತಿಕೆ ಆಯುರ್ವೇದಿಕ್ ಜೀವನ ಶೈಲಿಯ ಸಲಹೆಗಳು
ನಿದ್ರೆ
ಬಹುಬೇಗ ನಿದ್ರೆಗೆ ತೆರಳುವುದರಿಂದ ಆರೋಗ್ಯ ಮತ್ತು ಜ್ಞಾಪಕ ಶಕ್ತಿ ಉತ್ತಮವಾಗಿರುವುದಲ್ಲದೇ, ಅಂದವನ್ನು ಕಾಪಾಡುತ್ತದೆ. ತೀರ ತಡವಾಗಿ ನಿದ್ರೆಗೆ ತೆರಳುವುದರಿಂದ ಚರ್ಮದ ಕಾಂತಿಯತೆ ಕಡಿಮೆ ಆಗುವುದು, ಮುಖ ಒಣಗಿದಂತೆ ಆಗುವುದು, ಹೆಚ್ಚು ವಯಸ್ಸಾದಂತೆ ಆಗುವುದು. ಆದರೆ ನಿದ್ರೆಗೆ ಉತ್ತಮವಾದ ದಿನನಿತ್ಯ ಸಮಯ ಕಾದಿರಿಸಿದಲ್ಲಿ ಚರ್ಮಕ್ಕೆ ಪುನರುಜ್ಜೀವನ ನೀಡಿದಂತಾಗುವುದು.(ayurvedic beauty tips for face whitening in kannada)
ಹೊಂದಾಣಿಕೆ ಅಲ್ಲದ ಆಹಾರವನ್ನು ಮಿಕ್ಸ್ ಮಾಡಿ ತಿನ್ನಬೇಡಿ
ಆಹಾರ ಹೊಟ್ಟೆ ತುಂಬಲು ಮಾತ್ರವಲ್ಲದೇ ಮೆಡಿಸನ್ ಕೂಡ ಹೌದು. ಆದರೆ ಹೊಂದಾಣಿಕೆಯಲ್ಲದ ಆಹಾರ ಕ್ರಮವನ್ನು ಅನುಸರಿಸಿದರೆ ವಿಷ ಆಗುವುದರಲ್ಲಿ ಡೌಟೇ ಇಲ್ಲ.
* ಹಣ್ಣು ಮತ್ತು ಹಾಲು – ಇವೆರಡು ನಿಮಗೆ ಇಷ್ಟವಾಗಬಹುದು. ಇವೆರಡರ ಕಾಂಬಿನೇಷನ್ ಯೋಗ್ಯ ಆಹಾರವಲ್ಲ. ಕಾರಣ ಹಣ್ಣು ಬಹುಬೇಗ ಜೀರ್ಣವಾಗುತ್ತದೆ. ಆದರೆ ಹಾಲು ಬಹಳ ಸಮಯ ತೆಗೆದುಕೊಳ್ಳುತ್ತದೆ. ಹಾಗೂ ನೀವು ಹಣ್ಣು ಮತ್ತು ಹಾಲು ಮಿಶ್ರಿತವಾಗಿ ಸೇವನೆ ಮಾಡಿದರೆ ಅಸಿಡಿಟಿ ಉಂಟಾಗುವುದು.
* ಹಾಲು ಮತ್ತು ಮಾಂಸ – ಹಾಲು ದೇಹವನ್ನು ತಂಪಾಗಿ ಇರಿಸುತ್ತದೆ. ಮಾಂಸ ಮತ್ತು ಮೀನು ದೇಹದಲ್ಲಿ ಉಷ್ಣತೆಯನ್ನು ಹಿಡಿದಿಡುತ್ತದೆ. ಆದ್ದರಿಂದ ಮಾಂಸ ಸೇವನೆ ಮಾಡಿದಾಗ ಹಾಲು ಸೇವನೆ ಮಾಡದಿರಿ. ಹಾಗಿಯೂ ಮಾಡಿದ್ದಲ್ಲಿ ಪ್ರಮುಖ ಅನಾರೋಗ್ಯ ಸಮಸ್ಯೆಗಳು ಆಗುವುದರಲ್ಲಿ ಸಂಶಯವೇ ಇಲ್ಲ.
* ಊಟದ ನಂತರ ಕೂಲ್ ಡ್ರಿಂಕ್ಸ್ – ಊಟದ ನಂತರ ಕೂಲ್ ಡ್ರಿಂಕ್ಸ್ ಮತ್ತು ಐಸ್ ಐಟೆಮ್‌ಗಳನ್ನು ಆದಷ್ಟು ಕಡಿಮೆ ಮಾಡಿ. ಇದು ಜೀರ್ಣ ಕ್ರಿಯೆಯ ಮೇಲೆ ಪರಿಣಾಮ ಬೀರುವುದಲ್ಲದೇ, ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ತಂದೊಡ್ಡಬಹುದು.
* ತುಪ್ಪ ಮತ್ತು ಜೇನುತುಪ್ಪ – ಇವೆರಡು ದೇಹದಲ್ಲಿ ಪರಸ್ಪರ ವಿರೋಧಾತ್ಮಕ ಪ್ರಕ್ರಿಯೆಗಳನ್ನು ಉಂಟುಮಾಡುತ್ತವೆ. ತುಪ್ಪ ದೇಹವನ್ನು ತಂಪಾಗಿ ಇಟ್ಟರೆ, ಜೇನುತುಪ್ಪ ಉಷ್ಣತೆಯನ್ನು ಹೆಚ್ಚಿಸುತ್ತದೆ. ಇದರಿಂದ ದೇಹದ ಆರೋಗ್ಯ ಸ್ಥಿತಿ ಸಮತೋಲನ ಕಳೆದುಕೊಳ್ಳುತ್ತದೆ .
ಟೀ ಸೇವನೆ
ದೇಹದ ದಿನವಿಡೀ ನೀರಿನ ಅಂಶವನ್ನು ಹಿಡಿದಿಡುವುದು ಮುಖ್ಯ. ಆದ್ದರಿಂದ ಆಗಾಗ್ಗೆ ನೀರು ಮತ್ತು ಹರ್ಬಲ್ ಟೀ ಸೇವನೆ ಮಾಡಿ. ಗಿಡಮೂಲಿಕೆಗಳ ಟೀ ಗಳಾದ ಸುಂಟಿ, ನಿಂಬೆಹಣ್ಣು, ಮತ್ತು ಕ್ಯಾಮೋಮೈಲ್ ಟೀ ಅನ್ನು ಮಧ್ಯಾಹ್ನದ ವೇಳೆ ಸೇವಿಸಿ. ಇದರಿಂದ ಜೀರ್ಣಕ್ರಿಯೆ ಉತ್ತಮವಾಗಿರುವಿಕೆಗಗೆ ಮತ್ತು ಚರ್ಮದ ಕಾಂತಿಗೆ ಒಳ್ಳೆಯದು.
ಹೆಚ್ಚು ನೀರಿನಂಶ ಇರುವ ತರಕಾರಿಗಳನ್ನು ಸೇವಿಸಿ
ನೀರಿನಂಶ ಹೆಚ್ಚಾಗಿ ಇರುವ ತರಕಾರಿಗಳು ಸುಲಭವಾಗಿ ಜೀರ್ಣವಾಗಬಲ್ಲವು. ಅಂತಹ ತರಕಾರಿಗಳೆಂದರೆ ಕ್ಯಾರೋಟ್, ಮೂಲಂಗಿ, ಸೌತೆಕಾಯಿ, ಸೊಪ್ಪು, ಎಲ್ಲಾ ಬಗೆಯ ಚರ್ಮಕ್ಕೆ ಅತ್ಯುತ್ತಮವಾದವು. ಇವು ದೇಹದ ಶುದ್ಧೀಕರಣಗಳು ಎಂದು ಹೆಸರವಾಸಿಯಾಗಿವೆ. ಈ ತರಕಾರಿಗಳನ್ನು ಬೇಯಿಸಿ ಅಥವಾ ಸಾಲಡ್ ಮಾಡಿ. ಕನಿಷ್ಟ 3-5 ತರಕಾರಿಗಳನ್ನು ಮಿಶ್ರ ಮಾಡಿ ಸೇವಿಸಿ. ಇದರಿಂದ ಚರ್ಮದ ಆರೋಗ್ಯವನ್ನು ಕಾಪಾಡಬಹುದು.(beauty tips for face in kannada)
ವ್ಯಾಯಾಮ
ವ್ಯಾಯಾಮ ಕೇವಲ ಹೃದಯ ಮತ್ತು ಶ್ವಾಸಕೋಶದ ಅರೋಗ್ಯಕ್ಕೆ ಮಾತ್ರವಲ್ಲದೇ, ದೇಹದ ಸೌಂದರ್ಯ ಮತ್ತು ಹೊಳೆವ ಚರ್ಮಕ್ಕೆ ಉತ್ತಮವಾದುದು. ವ್ಯಾಯಾಮ ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ, ಚರ್ಮದ ಕೋಶಗಳನ್ನು ಆರೋಗ್ಯವಾಗಿಡಲು ಸಹಕಾರಿ, ಮತ್ತು ಹಾನಿಕಾರಕ ಜೀವಾಣುಗಳನ್ನು ಹೊರಹಾಕಿ ಸಂಪೂರ್ಣ ದೇಹವನ್ನು ಕಾಪಾಡುತ್ತದೆ.
ಉಸಿರಾಟದ ವ್ಯಾಯಾಮ ಮಾಡಿ
ದೇಹಿಕ ನೋವಿಗಿಂತ ಮಾನಸಿಕ ಒತ್ತಡ ಹೆಚ್ಚಾದಲ್ಲಿ ಚರ್ಮದ ಆರೋಗ್ಯದ ಮೇಲೆ ಪರಿಣಾಮ ಬೀರಬಲ್ಲದು. ಆದರೆ ದೀರ್ಘಕಾಲದ ಉಸಿರಾಟ ವ್ಯಾಯಾಮ ಮಾಡುವುದರಿಂದ ಮಾನಸಿಕ ಒತ್ತಡ ಕಡಿಮೆ ಮಾಡಿ ಶಾಂತಿ ಇಂದಿರಬಹುದು. ರಾತ್ರಿ ನಿದ್ರೆಗೆ ತೆರಳುವ ಮುನ್ನ ಸರಳವಾದ ಉಸಿರಾಟ ವ್ಯಾಯಾಮ ಮಾಡಿ.
ಧ್ಯಾನ ಮಾಡಿ
ಧ್ಯಾನ ಮಾಡುವುದರಿಂದ ನಿಮ್ಮ ಚರ್ಮದ ಕಾಂತಿಯಲ್ಲಾಗುವ ಬದಲಾವಣೆಯನ್ನು ನೋಡಿ ನೀವೆ ಆಶ್ಚರ್ಯ ಪಡುವಲ್ಲಿ ಯಾವುದೇ ಸಂಶಯವಿಲ್ಲ. ಉತ್ತಮವಾದ ಧ್ಯಾನ ಮನಸ್ಸನ್ನು ಶಾಂತಗೊಳಿಸುವುದಲ್ಲದೇ, ದೇಹದಲ್ಲಿ ಎನರ್ಜಿ ಹೆಚ್ಚಿಸುತ್ತದೆ.
ಚರ್ಮದ ತೇವಾಂಶವನ್ನು ಕಾಪಾಡಿಕೊಳ್ಳಿ
ಹೆಚ್ಚು ನೀರು ಕುಡಿಯುವುದನ್ನು ಹೊರತುಪಡಿಸಿ ಚರ್ಮದ ತೇವಾಂಶವನ್ನು ಕಾಪಾಡಿಕೊಳ್ಳುವುದು ಮತ್ತು ಹೈಡ್ರೇಟೆಡ್ ಆಗಿ ಇರಿಸಿಕೊಳ್ಳುವುದು ಬಹುಮುಖ್ಯ. ಎಣ್ಣೆ ಮಸಾಜ್ ಮತ್ತು ಅಭ್ಯಾಂಗ ಆಯುರ್ವೇದಿಕ್ ಸ್ಕಿನ್ ಕೇರ್ ನ ಒಂದು ಕ್ರಮ. ಗಿಡಮೂಲಿಕೆಗಳ ಆಯಿಲ್ ಮಸಾಜ್ ಸ್ನಾಯುಗಳನ್ನು ರಿಲ್ಯಾಕ್ಸ್ ಮಾಡುವುದಲ್ಲದೇ, ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ.
ಹಲವು ಬಗೆಯ ಬೀಜಗಳು ಮತ್ತು ಕಾಳುಗಳ ಸೇವನೆ
ಇವು ಕೇವಲ ಪ್ರಾಣಿಗಳು ಮತ್ತು ಪಕ್ಷಿಗಳಿಗೆ ಮಾತ್ರವಲ್ಲದೇ, ನಾವು ದಿನನಿತ್ಯ ಆಹಾರದಲ್ಲಿ ಸೇವನೆ ಮಾಡಿದರೆ ಚರ್ಮದ ಸುರಕ್ಷತೆಯನ್ನು ಕಾಪಾಡುತ್ತವೆ. ಆರೋಗ್ಯಕರ ಕೊಬ್ಬು ಹೊಂದಿದ್ದು, ಚರ್ಮ ಮತ್ತು ಹೃದಯನಾಳಗಳಿಗೆ ಉತ್ತಮವಾಗಿವೆ. ಹೊಳೆಯುವ ಚರ್ಮಕ್ಕಾಗಿ ಸೂರ್ಯಕಾಂತಿ ಬೀಜಗಳು, ಬಾದಾಮಿ, ಪಿಸ್ತಾ ಮತ್ತು ಅಗಸೆ ಬೀಜಗಳನ್ನು ನಿಯಮಿತವಾಗಿ ಸೇವಿಸಿ.
ಸುಗರ್ ಮತ್ತು ಉಪ್ಪಿನಂಶವನ್ನು ಕಡಿಮೆಗೊಳಿಸಿ
ಹೆಚ್ಚಿನ ಉಪ್ಪಿನಂಶ ಸೇವನೆ ರಕ್ತದ ಒತ್ತಡವನ್ನು ಹೆಚ್ಚಿಸುತ್ತದೆ ಅಲ್ಲದೇ ಹೃದಯನಾಳ ರೋಗವನ್ನು ಹೆಚ್ಚಿಸುತ್ತದೆ. ಹೆಚ್ಚಿನ ಪ್ರಮಾಣದ ಸುಗರ್ ಮತ್ತು ಉಪ್ಪು ಸೇವನೆಯಿಂದ Collagen ಮತ್ತು Elastin ಡ್ಯಾಮೇಜ್ ಗೆ ಕಾರಣವಾಗುತ್ತದೆ. ಆದರೆ ಈ ಎರಡು ಸಂಯುಕ್ತಗಳೇ ಚರ್ಮದ ಕಾಂತೀಯತೆ, ಸೊಕ್ಕು ಬರದ ರೀತಿ ಕಾಪಾಡುವವು.
ವಿಪರೀತ ಸೂರ್ಯನ ಶಾಖಕ್ಕೆ ಚರ್ಮವನ್ನು ಒಡ್ಡದಿರಿ
ಯಾವುದೇ ವಿಪರೀತವಾದಲ್ಲಿ ಅದು ದೇಹಕ್ಕೆ ಕೆಟ್ಟದ್ದೇ. ಅಲ್ಪ ಪ್ರಮಾಣದ ಅದರಲ್ಲೂ ಬೆಳಗಿನ ವೇಳೆ ಸೂರ್ಯನ ಶಾಖಕ್ಕೆ ಚರ್ಮ ಒಡ್ಡುವುದು ವಿಟಮಿನ್ ಡಿ ಗಾಗಿ ಅಗತ್ಯ. ಆದರೆ ಅತೀ ಹೆಚ್ಚಾಗಿ ಸೂರ್ಯನ ಯುವಿ ಕಿರಣಗಳಿಗೆ ಚರ್ಮ ಒಡ್ಡುವುದರಿಂದ ಟ್ಯಾನಿಂಗ್, ಸನ್ಬರ್ನ್, ಹೈಪರ್ಪಿಗ್ಮೆಂಟೇಶನ್, ಮತ್ತು ಸುಕ್ಕುಗಳನ್ನು ಉಂಟುಮಾಡಬಹುದು. ಅತಿಯಾದ ಬಿಸಿಲಿನ ವೇಳೆ ಹೊರಗೆ ಹೋದ ವೇಳೆ ಛತ್ರಿ, ಟೋಪಿ, ಸ್ಕ್ರಾಫ್ ಅನ್ನು ಸ್ಕಿನ್ ಸುರಕ್ಷತೆಗಾಗಿ ಬಳಸಲು ಮರೆಯದಿರಿ.
ಸೂಚನೆ: ಈ ಸಲಹೆಗಳು ಜೆನೆರಲ್ ಸಲಹೆಗಳಾಗಿದ್ದು, ಮೊದಲು ಡಾಕ್ಟರ್ ಅನ್ನು ಸಂಪರ್ಕಿಸಿ ಚರ್ಮದ ಆರೋಗ್ಯಕ್ಕಾಗಿ, ಮುಖದ ಸೌಂದರ್ಯಕ್ಕಾಗಿ ಸಲಹೆಗಳನ್ನು ಪಡೆಯುವುದು ಸೂಕ್ತ.
Ayurvedic beauty tips in kannada language are here. these tips also use as ayurvedic beauty tips for face whitening.