ಕೊಲೆಸ್ಟ್ರಾಲ್ ಹೆಚ್ಚಾದರೆ ಹೃದಯ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಹೃದಯಾಘಾತ, ಪಾರ್ಶ್ವವಾಯು, ಹೃದಯಕ್ಕೆ ಸಂಬಂಧಿಸಿದ ಗಂಭೀರ ಕಾಯಿಲೆಗಳು ಬರಬಹುದು. ಕಳಪೆ ಆಹಾರ ಪದ್ಧತಿ, ಜಡ ಜೀವನಶೈಲಿ ಮತ್ತು ವ್ಯಾಯಾಮದ ಕೊರತೆಯಿಂದಾಗಿ ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾಗಬಹುದು.
ಕೊಲೆಸ್ಟ್ರಾಲ್ ನಿಯಂತ್ರಿಸಲು ಸರಳ ಉಪಾಯವೆಂದರೆ ಅನಾರೋಗ್ಯಕರ ಆಹಾರವನ್ನು ಬಿಟ್ಟು ದಿನನಿತ್ಯದ ದೈಹಿಕ ಚಟುವಟಿಕೆಯನ್ನು ಮಾಡುವುದು. ಕೊಲೆಸ್ಟ್ರಾಲ್ ಇರುವವರು ದಿನನಿತ್ಯ ವ್ಯಾಯಾಮ, ಯೋಗ, ಓಟ, ಈಜು ಕಾರ್ಯಗಳಲ್ಲಿ ತೊಡಗಿಕೊಳ್ಳುವುದು.
ಕೊಲೆಸ್ಟ್ರಾಲ್ ಕಡಿಮೆ ಮಾಡಲು ಆಯುರ್ವೇದ ವಿಧಾನಗಳನ್ನು ಈ ಕೆಳಗಿನ ರೀತಿ ಅನುಸರಿಸಬಹುದು.
ವೈದ್ಯರ ಪ್ರಕಾರ ಅಧಿಕ ಕೊಲೆಸ್ಟ್ರಾಲ್ ಗೆ ಆಯುರ್ವೇದ ಚಿಕಿತ್ಸೆ ಸೇವಿಸುವ ಆಹಾರ, ಮಸಾಜ್, ಯೋಗ, ಜೀವನಶೈಲಿಯಲ್ಲಿನ ಬದಲಾವಣೆಗಳು, ವ್ಯಾಯಾಮ, ಪ್ರಾಣಾಯಾಮ ಮತ್ತು ಗಿಡಮೂಲಿಕೆಗಳ ಪೂರಕಗಳನ್ನು ಒಳಗೊಂಡಿರುತ್ತದೆ.
ಕೊಲೆಸ್ಟ್ರಾಲ್ ಅನ್ನು ನಿರ್ವಹಿಸಲು ಮೊದಲಿಗೆ ಕಫವನ್ನು ನಿರ್ವಹಿಸುವುದು ಮುಖ್ಯ. ಈ ಸಂದರ್ಭದಲ್ಲಿ ಕಫ ಸಮತೋಲನ ಆಹಾರವು ಅಗತ್ಯ. ಅಲ್ಲದೆ ಜಡ ಜೀವನ ಶೈಲಿಯ ಕೊಲೆಸ್ಟ್ರಾಲ್ಗೆ ಆರೋಗ್ಯಕರವಲ್ಲ. ಹಾಗಾಗಿ ಮೊದಲಿಗೆ ನಿಮ್ಮ ಆಹಾರ ಪದ್ಧತಿಯನ್ನು ಸುಧಾರಿಸಿ ಮತ್ತು ಸಕ್ರಿಯ ಜೀವನಶೈಲಿಯನ್ನು ಅನುಸರಿಸಿ.
ಮೆಂತ್ಯ ಬೀಜಗಳನ್ನು ಬಹಳ ಹಿಂದಿನಿಂದಲೂ ಔಷಧೀಯ ಗುಣಗಳಿಗಾಗಿ ಬಳಸಲಾಗುತ್ತದೆ. ಈ ಬೀಜಗಳು ವಿಟಮಿನ್ ಇ ಅಲ್ಲಿ ಸಮೃದ್ಧವಾಗಿವೆ. ಮಧುಮೇಹ ವಿರೋಧಿ, ಉತ್ಕರ್ಷಣ ನಿರೋಧಕ, ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ. ಆದ್ದರಿಂದ ಸಕ್ಕರೆಕಾಯಿಲೆ ಇರುವವರಿಗೆ ಮೆಂತೆಕಾಳು ಬಹಳ ಉಪಕಾರಿಯಾಗಿದೆ.
ಅಧಿಕ ತೂಕ ಹೊಂದಿರುವ ಜನರ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಸಂಗ್ರಹವಾಗುವ ಸಾಧ್ಯತೆ ಇರುತ್ತದೆ. ಆದಷ್ಟು ತೂಕ ಸಮತೋಲನದಲ್ಲಿ ಇಡಲು ಪ್ರಯತ್ನಿಸಬೇಕು. ತೂಕ ನಷ್ಟದೊಂದಿಗೆ ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವು ಕಡಿಮೆ ಆಗುತ್ತದೆ. ಅದಕ್ಕಾಗಿ ಫಿಟ್ ಆಗಿರಬೇಕಾದರೆ ಡಯಟ್ ಜತೆಗೆ ವ್ಯಾಯಾಮವೂ ಮುಖ್ಯ.
ಕೊತ್ತಂಬರಿ ಬೀಜಗಳಿಂದ ಹಲವು ಪ್ರಯೋಜನಗಳಿವೆ. ಅವುಗಳನ್ನು ವಿವಿಧ ಆಯುರ್ವೇದ ಪರಿಹಾರಗಳಲ್ಲಿ ಬಳಸಲಾಗುತ್ತದೆ. ಕೊತ್ತಂಬರಿ ಬೀಜಗಳಲ್ಲಿ ಫೋಲಿಕ್ ಆಮ್ಲ, ವಿಟಮಿನ್ ಎ, ಸಿ ಇವೆ. ಈ ಪೋಷಕಾಂಶಗಳು ದೇಹದ ನಿರ್ವಿಶೀಕರಣ ಪ್ರಕ್ರಿಯೆಯನ್ನು ವೇಗಗೊಳಿಸಲು ಅನುವು ಮಾಡಿಕೊಡುತ್ತದೆ. ಕೊತ್ತಂಬರಿ ಬೀಜದ ನೀರನ್ನು ಕುಡಿಯಬಹುದು.
ಪಾಮ್ ಆಯಿಲ್, ತೆಂಗಿನ ಎಣ್ಣೆಯಲ್ಲಿ ಸ್ಯಾಚುರೇಟೆಡ್ ಕೊಬ್ಬಿನಂಶ ಹೆಚ್ಚಾಗಿ ಇರುತ್ತದೆ. ಇದು ಎಲ್ಡಿಎಲ್ ಕೊಲೆಸ್ಟ್ರಾಲ್ ಮತ್ತು ಹೃದ್ರೋಗದ ಅಪಾಯವನ್ನು ಹೆಚ್ಚಿಸುತ್ತದೆ. ನೀವು ಆಹಾರದಲ್ಲಿ ಎಣ್ಣೆಯನ್ನು ಬಳಸಿದರೆ, ನೀವು ಜಾಗರೂಕರಾಗಿರಬೇಕು. ಸ್ವಲ್ಪ ಎಣ್ಣೆ ಬಳಸಿದರೆ ಸಾಕು. ಹೆಚ್ಚು ಎಣ್ಣೆಯಲ್ಲಿ ಕರಿದಿರುವ ಆಹಾರಗಳನ್ನು ಆದಷ್ಟು ದೂರವಿಡಿ.