ಕೆಲವರಿಗೆ ಈ ಸಣ್ಣ ಸಣ್ಣ ಕೆಲಸಗಳು ಅಂದ್ರೆ ಕಿರಿಕಿರಿ. ಅದನ್ನ ಮುಗಿಸಿದ್ರು ಸ್ವಲ್ಪ ತಡವಾಗಿಯೇ ಮಾಡುವುದು ರೂಢಿ. ದಾಖಲೆಗಳನ್ನು ಹಿಡಿದು ಸರ್ಕಾರಿ ಕಛೇರಿಗಳಿಗೆ ಹೋಗಿ ನಿಲ್ಲುವುದು, ಬ್ಯಾಂಕ್ನಲ್ಲಿ ಗಂಟೆ ಗಟ್ಟಲೇ ಕಾಯುವುದು ಇಂತಹ ಕೆಲಸಗಳು ಅಂದ್ರೆ ಮುಖ ಸಿಂಡರಿಸುವವರೇ ಹೆಚ್ಚು. ಅವರವರ ಸ್ವಂತಕ್ಕೆ ಆದ್ರು ಸಹ ಸ್ವಲ್ಪ ಹೀಗಿಯೇ.(benefits of linking aadhaar card to pan card)
ಈ ರೀತಿ ಯಾಕೆ ಹೇಳ್ತಿದ್ದೀವಿ ಅಂದ್ರೆ ಆಧಾರ್ ಸಂಖ್ಯೆ ಜೊತೆಗೆ ಪ್ಯಾನ್ ಕಾರ್ಡ್ ಲಿಂಕ್ ಮಾಡುವುದು ಕಡ್ಡಾಯ ಎಂದು ತಿಳಿದಿದ್ದರು ಸಹ, ಈ ಕೆಲಸವನ್ನು ಬಹುಸಂಖ್ಯಾತ ಜನರು ಇನ್ನೂ ಸಹ ಮಾಡಿಲ್ಲ.
ಆದ್ದರಿಂದ ಇಂದಿನ ಲೇಖನದಲ್ಲಿ ಆಧಾರ್ ಸಂಖ್ಯೆಗೆ ಪ್ಯಾನ್ ಕಾರ್ಡ್ ಲಿಂಕ್ ಮಾಡುವುದರಿಂದ ಏನೆಲ್ಲಾ ಪ್ರಯೋಜನಗಳು ಇವೆ ಎಂಬುದನ್ನು ನಿಮ್ಮ ಕನ್ನಡ ಅಡ್ವೈಸರ್ ಇಲ್ಲಿ ತಿಳಿಸಿದೆ.
ಆಧಾರ್ ಕಾರ್ಡ್ ಅನುಕೂಲಗಳು
-ಆದಾಯ ತೆರಿಗೆ ಪಾವತಿಸಲು ಆಧಾರ್ ಕಾರ್ಡ್ ಅಗತ್ಯ
– ಪಾಸ್ಪೋರ್ಟ್ ಪಡೆಯಲು ಆಧಾರ್ ಕಾರ್ಡ್ ಬೇಕು.
– ಸರ್ಕಾರದ ಹಲವು ಅಗತ್ಯ ಯೋಜನೆಗಳ ಸದುಪಯೋಗ ಪಡೆಯಲು ಆಧಾರ್ ಕಾರ್ಡ್ ಬೇಕು.
– ಕಾರ್ಮಿಕರ ಭವಿಷ್ಯ ನಿಧಿ(EPF) ಮೂಲಕ ಪಿಂಚಣಿ ಹಣ ಪಡೆಯಲು Adhaar Card ಅಗತ್ಯ.
– ಇಂದು ಯಾವುದೇ ಸರ್ಕಾರಿ ಹುದ್ದೆಗಳಿಗೆ, ಸರ್ಕಾರಿ ಯೋಜನೆಗಳ ಸದುಪಯೋಗಕ್ಕೆ ಆನ್ಲೈನ್ ಅರ್ಜಿ ಸಲ್ಲಿಸಬೇಕಾದರೂ ಆಧಾರ್ ಅಗತ್ಯ.
ಪ್ಯಾನ್ ಕಾರ್ಡ್ ಅನುಕೂಲಗಳು
– ಆಧಾರ್ ಮತ್ತು ಪ್ಯಾನ್ ಕಾರ್ಡ್ ಲಿಂಕ್ ಮಾಡಿದ್ದಲ್ಲಿ ಒಬ್ಬ ವ್ಯಕ್ತಿ ಒಂದಕ್ಕಿಂತ ಹೆಚ್ಚು ಕಾರ್ಡ್ ಹೊಂದುವುದನ್ನು ತಡೆಯಬಹುದು.
– ತೆರಿಗೆ ವಂಚನೆ ಮಾಡುವವರನ್ನು ಪತ್ತೆ ಮಾಡಲು, ಆದಾಯ ತೆರಿಗೆ ಇಲಾಖೆಗೆ ಪ್ಯಾನ್ ಕಾರ್ಡ್ ಸಹಾಯಕ. ಪ್ಯಾನ್ ಕಾರ್ಡ್ ಇದ್ದಲ್ಲಿ ಆದಾಯ ತೆರಿಗೆ ಪಾವತಿ ವಿಧಾನ ಸುಲಭವಾಗುತ್ತದೆ.
– 5 ಲಕ್ಷಕ್ಕಿಂತ ಅಧಿಕ ಮೌಲ್ಯದ ಸ್ಥಿರಾಸ್ತಿ ಖರೀದಿ ಮತ್ತು ಮಾರಾಟ, ವಾಹನಗಳ ಖರೀದಿ ಮತ್ತು ಮಾರಾಟ ಸೇರಿದಂತೆ ಹಲವು ವಹಿವಾಟುಗಳಿಗೆ ಪ್ಯಾನ್ ಕಾರ್ಡ್ ಬೇಕಾಗುತ್ತದೆ.
– ಪಾನ್ ಕಾರ್ಡ್ ಹೊಂದುವುದರಿಂದ ಪಾವತಿಸುವ ತೆರಿಗೆಯ ವಿವರಗಳು ಸುಲಭವಾಗಿ ಸಿಗುತ್ತವೆ.
– ಪ್ಯಾನ್ ಕಾರ್ಡ್ ಸಹ ಇಂದು ಹಲವು ಪ್ರಯೋಜನಗಳಿಗೆ ಕಡ್ಡಾಯವಾಗಿ ಬೇಕಾಗಿದೆ. ಉದ್ಯೋಗ ಕಾರ್ಡ್ ಸದುಪಯೋಗ ಪಡೆಯಲು ಸಹ ಪ್ಯಾನ್ ಕಾರ್ಡ್ ಅಗತ್ಯವಾಗಿದೆ. ಕಾರಣ ಬ್ಯಾಂಕ್ ಖಾತೆಯೊಂದಿಗೆ ಪ್ಯಾನ್ ಕಾರ್ಡ್ ಲಿಂಕ್ ಆಗಿದ್ದಲ್ಲಿ ಮಾತ್ರ ಹಣ ಪಡೆಯುವ ವೇಳೆ ಅನುಕೂಲವಾಗುತ್ತದೆ.
– ಆಧಾರ್ ಮತ್ತು ಪ್ಯಾನ್ ಕಾರ್ಡ್ ಲಿಂಕ್ ಮಾಡುವ ಮೂಲಕ ನಿಮ್ಮ ಪ್ಯಾನ್ ಕಾರ್ಡ್ ರದ್ದಾಗದಂತೆ ತಡೆಯಬಹುದು.
Linking Aadhaar card with Pan card is important and mandatory. Here you can know benefits of linking aadhaar card with pan card.