ರಾತ್ರಿಯ ಊಟಕ್ಕು ಬೆಳಗಿನ ತಿಂಡಿಗೂ ಸುಮಾರು 8 ರಿಂದ 10 ಗಂಟೆಗಳ ಅಂತರವಿರುತ್ತದೆ. ಬೆಳಿಗ್ಗೆ ಗರಷ್ಠ9 ಗಂಟೆಯೊಳಗೆ ತಿಂಡಿ ತಿನ್ನುವುದರಿಂದ ಇಡೀ ದಿನ ಚೈತನ್ಯಶೀಲರಾಗಿ ಕೆಲಸ ಮಾಡಬಹುದು. ತುಂಬಾ ಆಕ್ಟೀವ್ ಆಗಿಯೂ ಇರಲು ಸಹಾಯಕಾರಿ.
ತಿಂಡಿಗೂ ಮೊದಲು ವ್ಯಾಯಾಮ ಮಾಡಿದರಂತೂ ನಿಮ್ಮ ಆಕ್ಟೀವ್ನೆಸ್ ಡಬಲ್ ಆಗುವಲ್ಲಿ ಯಾವುದೇ ಸಂಶಯವಿಲ್ಲ. ಈ ಉಪಯೋಗಗಳನ್ನು ಹೊರಡುಪಡಿಸಿ ನಿಮಗೆ ತಿಳಿಯದ ಇನ್ನೂ ಹತ್ತಾರು ಪ್ರಯೋಜನಗಳೂ ಪ್ರತಿಯೊಬ್ಬರು ಬೆಳಗಿನ ತಿಂಡಿ ಮೊದಲು ವ್ಯಾಯಾಮ ಮಾಡುವುದರಿಂದ ಸಿಗುತ್ತವೆ. ಅವುಗಳು ಈ ಕೆಳಗಿನಂತಿವೆ..
– ದಿನವಿಡೀ ಆಯಾಸಗೊಳ್ಳದಂತೆ ಕೆಲಸ ಮಾಡಲು ಶಕ್ತಿ ಅಗತ್ಯ. ಈ ಶಕ್ತಿಯನ್ನು ಬೆಳಗಿನ ತಿಂಡಿ(ಉಪಹಾರ)ಗಿಂತ ಮೊದಲು ಮಾಡುವ ವರ್ಕ್ಔಟ್ ದೇಹಕ್ಕೆ ನೀಡುತ್ತದೆ.
ಹೌದು, ಈ ಬಗ್ಗೆ ಜಾರ್ಜಿಯಾ ವಿಶ್ವವಿದ್ಯಾನಿಲಯದಲ್ಲಿ ನಡೆಸಿದ ಅಧ್ಯಯನ ಪ್ರಕಾರ ಸತತ ಆರು ವಾರ ದಿನಕ್ಕೆ 20ನಿಮಿಷ ವ್ಯಾಯಾಮ ಮಾಡಿದರೆ ದೇಹಕ್ಕೆ ಹೆಚ್ಚಿನ ಶಕ್ತಿ ಲಭಿಸುತ್ತದೆ ಎಂದು ತಿಳಿದು ಬಂದಿದೆ.
-ಹೃದಯ ಸಂಬಂಧಿ ಕಾಯಿಲೆಗಳನ್ನು ದೂರ ಇರಿಸಬಹುದು. ಬಹುತೇಕರು ತಮಗೆ ಹೃದಯ ಕಾಯಿಲೆಗಳು ತಿಳಿಯುವವರೆಗೂ ಬಿಳಿಗ್ಗೆ ಬೇಗ ಬೆಡ್ ಬಿಟ್ಟು ಎದ್ದೇಳುವುದೇ ಇಲ್ಲ ಎನ್ನುತ್ತಾರೆ. ಆದರೆ ಬೆಳಗಿನ ವ್ಯಾಯಾಮ ಈ ಕಾಯಿಲೆ ಹತ್ತಿರ ಸುಳಿಯದಂತೆಯೇ ಕಾಪಾಡುತ್ತದೆ.
– ಮಧುಮೇಹ, ವಯೋಸಹಜ ಆಸಕ್ತಿಯ ಸಮಸ್ಯೆಗಳು ಇರುವವರು ಹಣ್ಣಿನ ರಸ, ನೀರು ಕುಡಿದು ವ್ಯಾಯಾಮಕ್ಕೆ ತೆರಳುವುದು ಉತ್ತಮ.
– ವ್ಯಾಯಾಮ ತಪ್ಪಿಸಿದರೆ ಮಧುಮೇಹ, ಸ್ಥೂಲಕಾಯಕ್ಕೆ ದಾರಿ ಮಾಡಿಕೊಟ್ಟಂತಾಗುತ್ತದೆ.
– ವ್ಯಾಯಾಮದ ನಂತರ ಬೆಳಿಗ್ಗೆ ವೇಳೆ ಸ್ವಲ್ಪ ಪ್ರಮಾಣದ ಹಣ್ಣು ಹಸಿ ತರಕಾರಿ ಸೇವನೆ ದೇಹಕ್ಕೆ ಉತ್ತಮ
– ದೇಹಕ್ಕೆ ನಿಯಮಿತ ವ್ಯಾಯಾಮ ಎಷ್ಟು ಮುಖ್ಯವೇ ಅಷ್ಟೇ ಮುಖ್ಯ ನಿಯಮಿತ ನಿದ್ರೆ. ಕೆಲಸದ ಜಂಜಾಟದಿಂದ ಸೋತು ವ್ಯಾಯಾಮ ಅಥವಾ ನಿದ್ರೆ ಎರಡನ್ನೂ ಮರೆಯಬಾರದು.
– ಖಾಲಿ ಹೊಟ್ಟೆ ವ್ಯಾಯಾಮ ದೇಹದ ಕೊಬ್ಬು ಕರಗಿಸುವುದಲ್ಲದೇ, ಜೀರ್ಣಕ್ರಿಯೆ ವೃದ್ಧಿಸಿಕೊಳ್ಳುವುದು ಸಾಧ್ಯ.
– ಮಕ್ಕಳಿಗೆ ದಿನನಿತ್ಯ ವ್ಯಾಯಾಮ ಅಥವಾ ಯಾವುದಾದರೂ ಕ್ರೀಡೆ ಆಡುವುದು ಅವರ ಶೈಕ್ಷಣಿಕ ಪ್ರಗತಿಗೆ ಸಹಾಯಕ. ಟೆಕ್ಸಾಸ್ ಅಧ್ಯಯನದ ವರದಿ, ‘ಬೆಳಿಗ್ಗೆ ವ್ಯಾಯಾಮ ಮಾಡುವ ಮಕ್ಕಳ ಶೈಕ್ಷಣಿಕ ಪ್ರಗತಿ ಹೆಚ್ಚು, ಅವರು ಹೆಚ್ಚು ಕ್ರಿಯಾಶೀಲರಾಗಿರುತ್ತಾರೆ’ ಎಂದಿದೆ.
– ಸ್ಮರಣ ಶಕ್ತಿ ವೃದ್ಧಿಯಾಗುತ್ತದೆ. ಮಕ್ಕಳಲ್ಲಿ ಮತ್ತು ಎಲ್ಲಾ ವಯೋಮಾನದವರಲ್ಲಿ ಅನಗತ್ಯ ಆತಂಕ, ಭಯ ದೂರವಾಗುತ್ತವೆ.
– ರಾತ್ರಿ ವೇಳೆ ಸುಖಕರ ನಿದ್ರೆಗೆ ಬೆಳಿಗ್ಗೆಯ ವ್ಯಾಯಾಮ ಸಹಾಯಕಾರಿ.
-ಹೃದಯಘಾತ, ಪಾರ್ಶ್ವವಾಯುವನ್ನು ನಿಯಂತ್ರಿಸಲು, ರಕ್ತ ಸಂಚಾರದ ಸರಾಗಕ್ಕಾಗಿ ಬೆಳಿಗ್ಗೆಯ ವರ್ಕ್ಔಟ್ ಅಗತ್ಯ.
– ಸಕರಾತ್ಮಕ ಮನೋಭಾವ ಸದಾ ಇರಲು ಮಾರ್ನಿಂಗ್ ವರ್ಕ್ಔಟ್ ಸಹಾಯಕಾರಿ.
– ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು, ಆಲಸ್ಯ ದೂರ ಮಾಡಲು ಸಹಾಯಕಾರಿ.
– ವ್ಯಾಯಾಮದಿಂದ ಅಲ್ಸರ್, ಅಸಿಡಿಟಿ, ಅನ್ನನಾಳದ ಕ್ಯಾನ್ಸರ್ ನಿಯಂತ್ರಣ ಸಾಧ್ಯ.
– ಬೆಳಗಿನ ವೇಳೆ ಸೂರ್ಯನಿಗೆ ಮೈಯೊಡ್ಡಿ ವ್ಯಾಯಾಮ ಮಾಡುವುದರಿಂದ ವಿಟಮಿನ್ ಡಿ ಸಿಗುತ್ತದೆ. ಇದರಿಂದ ಶೀತ, ಜ್ವರಕ್ಕೆ ರೋಗ ನಿರೋಧಕ ಶಕ್ತಿ ಕೆಲಸ ಮಾಡಲು ಸಹಾಯಕ.
– ಮೂಳೆಗಳು ಬಲಿಷ್ಟವಾಗುತ್ತವೆ. ಮೂಳೆ ಮುರಿತ ಸಮಸ್ಯೆ ಕಡಿಮೆ ಆಗುತ್ತದೆ.
– ಚರ್ಮದ ಆರೋಗ್ಯ ಮತ್ತು ಕಾಂತಿ ಹೆಚ್ಚುತ್ತದೆ.