ಕುಟುಂಬದ ಮುಖ್ಯಸ್ಥನಿಗೆ ತನ್ನ ಫ್ಯಾಮಿಲಿಯನ್ನು ರಕ್ಷಣೆ ಮಾಡುವುದು ಮತ್ತು ಭವಿಷ್ಯದಲ್ಲಿ ಸುರಕ್ಷಿತವಾಗಿಡಲು ಪ್ರಾಪರ್ಟಿ ಮಾಡಿಡುವುದು ಒಂದು ದೊಡ್ಡ ಜವಾಬ್ದಾರಿ ಮತ್ತು ಮೊದಲ ಆಧ್ಯತೆ. ಈ ಕಾರಣಕ್ಕೆ ಹಲವು ಕಡೆ ತಾನು ದುಡಿದ ಹಣವನ್ನು ಇನ್ವೆಸ್ಟ್ ಮಾಡುವುದು ಮತ್ತು ಉಳಿತಾಯವನ್ನು ಕೂಡಿಡಬೇಕಾಗುತ್ತದೆ. ಇದೇ ಕಾರಣಕ್ಕೆ ಆಗಾಗ ಹಲವರು ನಿವೃತ್ತಿಗೆ ಮೊದಲು ತಾನು ಏನೇನು ಮಾಡಿಕೊಳ್ಳಬೇಕು ಎಂಬ ಬಗ್ಗೆ ಅಲೋಚಿಸುತ್ತಿರುತ್ತಾರೆ. ಆದ್ದರಿಂದಲೇ ಮಕ್ಕಳ ಭವಿಷ್ಯಕ್ಕಾಗಿ, ತನ್ನ ಭವಿಷ್ಯಕ್ಕಾಗಿ ಪ್ರತಿಯೊಬ್ಬರೂ ಕೆಲವು ಕಡೆ ಹಣ ಹೂಡುತ್ತಾರೆ.
ಹಣ ಹೂಡಿಕೆ ಏಕೆ ಮಾಡಬೇಕು?
ನಿವೃತ್ತಿ ನಂತರದ ಬದುಕು ಯಾರಿಗೂ ಸಹ ಗುಲಾಬಿ ಹೂವಿನ ಹಾಸಿಗೆ ಆಗಿರುವುದಿಲ್ಲ. ಇನ್ನೂ ಕುಟುಂಬದ ಜಬಾಬ್ದಾರಿ ಇದ್ದರಂತು ಬಹುದೊಡ್ಡ ಸವಾಲೇ ಎನಿಸುತ್ತದೆ. ಆ ಇಳಿ ವಯಸ್ಸಿನಲ್ಲಿಯೂ ಕುಟುಂಬದ ಜವಾಬ್ದಾರಿ ಮೈ ಮೇಲೆ ಇದ್ದರೇ ಇನ್ನೂ ದುಸ್ತರ ಎನಿಸುವುದು. ಮಕ್ಕಳಿಗೆ ಉತ್ತಮ ಭವಿಷ್ಯವನ್ನು ಕಟ್ಟಿಕೊಡುವುದು ಎಲ್ಲರ ಕನಸಾಗಿರುವುದರಿಂದ ಹಣ ಹೂಡಿಕೆ ಅನಿವಾರ್ಯ.
ಭವಿಷ್ಯವನ್ನು ಸುರಕ್ಷಿತಗೊಳಿಸಿಲು ಟಾಪ್ ಮಾರ್ಗಗಳಿವು
ಮೇಲೆ ತಿಳಿಸಿದ ಹಲವು ಕಾರಣಗಳಿಂದ ಉತ್ತಮ ಭವಿಷ್ಯದ ಸುರಕ್ಷತೆಗಾಗಿ ಹಣವನ್ನು ಹೂಡಿಕೆ ಮಾಡುವುದು ಉತ್ತಮ ಅಲೋಚನೆ. ಹಣ ಹೂಡಿಕೆ ಅಗತ್ಯವು ಹೌದು, ಹಾಗೆ ಸುಲಭವು ಹೌದು. ಇದು ಕೆಲವರಿಗೆ ಹೊಸದು ಎನಿಸುತ್ತದೆ, ಚಾಲೆಂಜಿಂಗ್ ಆಗಿರುತ್ತದೆ. ಕಾರಣ ಎಲ್ಲಿ ಹಣ ಹೂಡುವುದು, ಯಾರನ್ನು ನಂಬುವುದು ಎಂಬುದು ಸಮಸ್ಯೆ ಆಗಿರುತ್ತದೆ. ಆದ್ದರಿಂದ ಸುರಕ್ಷಿತವಾಗಿ ಹೆಜ್ಜೆ ಇಡಬೇಕಾಗುತ್ತದೆ. ಕಾರಣ ಇಂದು ಕೆಲವು ದೊಡ್ಡ ದೊಡ್ಡ ಕಂಪನಿಗಳೇ ಕಣ್ಣಿಗೆ ಮಣ್ಣು ಎರೆಚಿರುವ ಅಪಾದನೆಗಳನ್ನು ಎದುರಿಸುತ್ತಿವೆ, ಹಣ ಹೂಡಿದವರು ಬೀದಿ ಪಾಲಾಗಿದ್ದಾರೆ.
ಆದ್ದರಿಂದ ಎಲ್ಲಾ ಮೂಲಗಳನ್ನು ತಿಳಿದು, ಸುರಕ್ಷಿತವಾದ ಕಡೆ ಹಣ ಹೂಡಬೇಕು. ಈ ಕೆಳಗಿನ ಕೆಲವು ಉತ್ತಮ ಮಾರ್ಗಗಳು ಹೂಡಿಕೆಗೆ ಸಹಾಯಕಾರಿಯಾಗಿವೆ
ಕೆಲವು ವೃತ್ತಿಪರರಿಂದ ಸಹಾಯ ಪಡೆಯಿರಿ
ನಿಮ್ಮ ಪರಿಚಿತರ ಮತ್ತು ವೃತ್ತಿಪರರಿಂದ ಹಣ ಹೂಡಿಕೆ ಮಾಡಲು ಐಡಿಯಾಗಳನ್ನು ಪಡೆಯಿರಿ. ಅವರು ಆ ಬಗ್ಗೆ ಅನುಭವ ಹೊಂದಿದ್ದಲ್ಲಿ ಉತ್ತಮ ಮಾರ್ಗದರ್ಶನ ನೀಡುತ್ತಾರೆ.
ಊಳಿತಾಯ ಖಾತೆ ಓಪನ್ ಮಾಡಿರಿ
ಹತ್ತಿರದ ಬ್ಯಾಂಕ್ಗಳಲ್ಲಿ ಉಳಿತಾಯ ಖಾತೆ ತೆರೆದು ಹಣ ಇಡುವುದು ಸಾಮಾನ್ಯವಾಗಿ ಸುರಕ್ಷಿತ ಮಾರ್ಗ. ಇದರಿಂದ ಕಡಿಮೆ ತಿಳುವಳಿಕೆ ಹೊಂದಿದ ಜನರು ಸಹ ಅಧಿಕ ಉಪಯೋಗಗಳನ್ನು ಪಡೆಯುವ ಅವಕಾಶ ಇರುತ್ತದೆ. ಇಲ್ಲಿ ಹಣ ಹೂಡುವುದರಿಂದ ಹಲವು ಲಾಭಗಳು ಇವೆ.
ಇನ್ಸುರೆನ್ಸ್ ಪಾಲಿಸಿಗಳನ್ನು ತೆಗೆದುಕೊಳ್ಳಿ
ಭವಿಷ್ಯವನ್ನು ಸುರಕ್ಷಿತವಾಗಿಸಿಕೊಳ್ಳಲು ಜೀವ ವಿಮಾ ಪಾಲಿಸಿಗಳನ್ನು ಮಾಡಿಸುವುದು ಉತ್ತಮ ನಿರ್ಧಾರ. ವಿಮಾ ಪಾಲಿಸಿಗಳು ಆರೋಗ್ಯ, ಶಿಕ್ಷಣ, ಹಣ ಹೀಗೆ ಹಲವು ಆಧಾರದ ಮೇಲೆ ನಿರ್ಧರಿತವಾಗಿರುತ್ತವೆ. ನಿಮ್ಮ ಅಗತ್ಯಕ್ಕೆ ಅನುಗುಣವಾಗಿ ಮೊದಲು ವಿಮಾ ಪಾಲಿಸಿ ವೃತ್ತಿಪರರೊಂದಿಗೆ ಮಾತನಾಡಿ ನಂತರ ತೆಗೆದುಕೊಳ್ಳಬೇಕು.
ಬಾಂಡ್ಗಳ ಖರೀದಿ
ಕೆಲವರು ಹಣ ಹೂಡಿ ಬಾಂಡ್ಗಳನ್ನು ಖರೀದಿಸುತ್ತಾರೆ. ಅದೇ ಹಣ ಮರಳಿ ಪಡೆಯುತ್ತಾರೆ. ಇದರಿಂದ ಯಾವ ಉಪಯೋಗವು ಇಲ್ಲ ಎನಿಸಬಹುದು. ಆದರೆ ಹಲವು ಅನುಕೂಲಗಳಿವೆ. ಆಕಸ್ಮಿಕವಾಗಿ ನೀವು ಬಾಂಡ್ ಗೆದ್ದರೇ ಹಣ ನಿಮಗೆ ಬರುತ್ತದೆ. ಇಲ್ಲವಾದಲ್ಲಿ ನೀವು ಹೂಡಿದ ಅಷ್ಟೂ ಹಣ ವಾಪಸು ನಿಮಗೆ ಸೇರುತ್ತದೆ.
ಸ್ಟಾಕ್ ಮಾರ್ಕೆಟ್ ಇನ್ವೆಸ್ಟ್ಮೆಂಟ್
ಬ್ಯುಸಿನೆಸ್ ಹಿನ್ನೆಲೆ ವ್ಯಕ್ತಿಗಳು ಮತ್ತು ಸ್ಟಾಕ್ ಮಾರ್ಕೆಟ್ ಅರಿವು ವುಳ್ಳವರು ತಮ್ಮ ಹಣವನ್ನು ಶೇರ್ ಖರೀದಿಸುವ ಮೂಲಕ ಹಣ ಹೂಡಿಕೆ ಮಾಡಬಹುದು. ಈ ಶೇರಿಂಗ್ ನಿಮಗೆ ಲಾಭಗಳಿಸಿಕೊಡಬಲ್ಲದು ಮತ್ತು ಸೈಡ್ ಬ್ಯುಸಿನೆಸ್ ರೀತಿ ಕಾರ್ಯ ನಿರ್ವಹಿಸಬಲ್ಲದು.
ಇನ್ನೂ ಹಲವು ಮಾರ್ಗಗಳು ಹಣ ಹೂಡಿಕೆಗಾಗಿಯೇ ಇವೆ. ಆದರೆ ಪ್ರತಿಯೊಂದಕ್ಕೂ ಅದರದೇ ಆದ ತಿಳುವಳಿಕೆ ಮತ್ತು ಅರಿವು ಬೇಕು. ಆದ್ದರಿಂದ ಈ ಮೇಲಿನ ಸರಳ ಮಾರ್ಗಗಳು ಆರಂಭಿಕವಾಗಿ ಎಲ್ಲರೂ ಹಣ ಹೂಡಲು ಸಹಾಯಕಾರಿಯಾಗಿವೆ. ಆದರೆ ಹಣ ಹೂಡುವ ಮುನ್ನ ಎಲ್ಲಾ ಮಜಲುಗಳಿಂದ ಅವಲೋಕನ ಮಾಡಲೇ ಬೇಕು ಎಂಬುದು ಎಚ್ಚರಿಕೆಯ ಕ್ರಮ.