ಬೀದರ್ ಜಿಲ್ಲೆಯ ಕಂದಾಯ ಘಟಕದಲ್ಲಿ ಖಾಲಿ ಇರುವ ಗ್ರಾಮ ಲೆಕ್ಕಿಗರ ಹುದ್ದೆಗಳ(Bidar district Village Accountant post) ಪೈಕಿ ಹೈದರಾಬಾದ್ ಕರ್ನಾಕಟ ವೃಂದದಲ್ಲಿ 42 ಹುದ್ದೆಗಳಿಗೆ ಮತ್ತು ಸ್ಥಳಿಯೇತರ ನಾನ್ ಹೈದರಾಬಾದ್ ಕರ್ನಾಟಕದ ವೃಂದದಲ್ಲಿನ 11 ಹುದ್ದೆಗಳೂ ಸೇರಿ ಒಟ್ಟು 53 ಹುದ್ದೆಗಳನ್ನು2018-2019ನೇ ಸಾಲಿನಲ್ಲಿ ಪರಿಷ್ಕೃತ ನಿಯಮಗಳಂತೆ ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಪ್ರಕಟಣೆ ಹೊರಡಿಸಲಾಗಿದೆ. ಈ ಬಗ್ಗೆ ಕಂಪ್ಲೀಟ್ ಡೀಟೇಲ್ಸ್ ಈ ಕೆಳಗಿನಂತಿದೆ.
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭಿಕ ಮತ್ತು ಪ್ರಕಟಣೆಯ ದಿನಾಂಕ : 29-10-2018
ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 15-11-2018
ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಪ್ರಕಟಿಸಲು ನಿಗದಿಪಡಿಸಿದ ದಿನಾಂಕ : 30-11-2018
ತಾತ್ಕಾಲಿಕ ಆಯ್ಕೆ ಪಟ್ಟಿಗೆ ಆಕ್ಷೇಪಣೆಗಳು ಸಲ್ಲಿಸಲು ನಿಗದಿಪಡಿಸಿರುವ ದಿನಾಂಕ : 07-12-2018
ತಾತ್ಕಾಲಿಕ ಆಯ್ಕೆ ಪಟ್ಟಿಗೆ ಆಕ್ಷೇಪಣೆಗಳು ಇತ್ಯರ್ಥಗೊಳಿಸಲು ನಿಗದಿಪಡಿಸಿದ ಕೊನೆಯ ದಿನಾಂಕ : 15-12-2018
ತಾತ್ಕಾಲಿಕ ಪಟ್ಟಿಯಂತೆ ಅಭ್ಯರ್ಥಿಗಳು ಮೂಲ ದಾಖಲೆಗಳೊಂದಿಗೆ ಪರಿಶೀಲನೆಗೆ ಜಿಲ್ಲಾಧಿಕಾರಿಗಳ ಕಛೇರಿಗೆ ಹಾಜರಾಗಬೇಕಾದ ದಿನಾಂಕ: 26-12-2018 ಮತ್ತು 27-12-2018
ಜಿಲ್ಲಾಧಿಕಾರಿಗಳು ಅಂತಿಮ ಆಯ್ಕೆ ಪಟ್ಟಿಯನ್ನು ಪ್ರಕಟಿಸಲು ನಿಗದಿಪಡಿಸಿದ ದಿನಾಂಕ : 10-01-2019
ಅರ್ಜಿ ಸಲ್ಲಿಸುವುದು ಹೇಗೆ?
ಅರ್ಜಿಯನ್ನು ಅಭ್ಯರ್ಥಿಗಳು ಆನ್ಮೂಲಕ ಸಲ್ಲಿಸಬೇಕಾಗಿದ್ದು, ಬೀದರ ಜಿಲ್ಲಾ ಕಂದಾಯ ಘಟಕದ ಅಧಿಕೃತ ವೆಬ್ಸೈಟ್ bidar-va.kar.nic.in ಗೆ ಭೇಟಿ ನೀಡಿ ಅರ್ಜಿ ತುಂಬಬೇಕು.
ಅರ್ಜಿ ಶುಲ್ಕ ಎಷ್ಟು?
ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಪ್ರವರ್ಗ1/ಮಹಿಳಾ ಅಭ್ಯರ್ಥಿಗಳಿಗೆ ರೂ.100
ಸಾಮಾನ್ಯ/ಪ್ರವರ್ಗ 2ಎ/ಬಿ/3ಎ/3ಬಿ ಅಭ್ಯರ್ಥಿಗಳಿಗೆ ರೂ.200
ಅರ್ಜಿ ಶುಲ್ಕ ಪಾವತಿಸಬೇಕಾದ ವಿಳಾಸ :
ಅರ್ಜಿ ಶುಲ್ಕವನ್ನು ಪಾವತಿಸಲು 15-11-2018 ಕೊನೆಯ ದಿನಾಂಕವಾಗಿದ್ದು, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(SBI) ದ ಖಾತೆ ಸಂಖ್ಯೆ 3778864995 ಗೆ ಚಲನ್ ನೀಡಿ ಅಥವಾ ಆನ್ಲೈನ್ ಪೇಮೆಂಟ್ ಮೂಲಕ ಪಾವತಿಸಬೇಕು.
ಶೈಕ್ಷಣಿಕ ವಿದ್ಯಾರ್ಹತೆ:
ಪದವಿ ಪೂರ್ವ ಶಿಕ್ಷಣ ಇಲಾಖೆ, ಕರ್ನಾಟಕ ಸರ್ಕಾರ ನಡೆಸುವ ದ್ವಿತೀಯ ಪಿಯುಸಿ ಅಥವಾ ಸಿಬಿಎಸ್ಇ ಅಥವಾ ಐಸಿಎಸ್ಇ ನಡೆಸುವ 12ನೇ ತರಗತಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು. ಮತ್ತು ಮೂಲ ಅಂಕಪಟ್ಟಿಯನ್ನು ಹೊಂದಿರಬೇಕು.
ವಯೋಮಿತಿ :
ಅರ್ಜಿಸುವ ಕೊನೆಯ ದಿನಾಂಕದೊಳಗೆ ಕನಿಷ್ಟ 18 ವರ್ಷ ಪೂರೈಸಿರಬೇಕು.
ಸಾಮಾನ್ಯ ವರ್ಗ : : 35 ವರ್ಷ
ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಪ್ರವರ್ಗ1/ : 40 ವರ್ಷ
ಪ್ರವರ್ಗ 2ಎ/ಬಿ/3ಎ/3ಬಿ : : 38 ವರ್ಷ
Applications invited for the post of Bidar district Village Accountant. Read more details here.