ಕೆನರಾ ಬ್ಯಾಂಕ್(Canara Bank Recruitment) ಖಾಲಿ ಇರುವ ಭದ್ರತಾ ಮ್ಯಾನೇಜರ್ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಅಹ್ವಾನಿಸಿದೆ.
ಕೆನರಾ ಬ್ಯಾಂಕ್ ನಲ್ಲಿನ ಮಧ್ಯಮ ಶ್ರೇಣಿಯ ಭದ್ರತಾ ಮ್ಯಾನೇಜರ್ ಸ್ಕೇಲ್-II ಹುದ್ದೆಗಳಿಗೆ ಈ ನೇಮಕಾತಿ ಪ್ರಕ್ರಿಯೆ ನಡೆಸಲಾಗುತ್ತಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಈ ಕೆಳಗಿನಂತಿದೆ.
ಹುದ್ದೆಗಳ ಸಂಖ್ಯೆ: 31
ಅರ್ಜಿಸಲ್ಲಿಸಲು ಪ್ರಾರಂಭಿಕ ದಿನಾಂಕ : 07-11-2018
ಅರ್ಜಿಸಲ್ಲಿಸಲು ಕೊನೆಯ ದಿನಾಂಕ : 27-11-2018
ಚಲನ್ ಪಡೆದು ಶುಲ್ಕ ಪಾವತಿಸಲು ಕೊನೆಯ ದಿನ : 27-11-2018
ಅರ್ಜಿ ಸಲ್ಲಿಸುವುದು ಹೇಗೆ?
ಕೆನರಾ ಬ್ಯಾಂಕ್ ಅಧಿಕೃತ ವೆಬ್ಸೈಟ್ www.canarabank.com ಭೇಟಿ ನೀಡಿ ಅರ್ಜಿ ಡೌನ್ಲೋಡ್ ಮಾಡಿಕೊಂಡು ಭರ್ತಿ ಮಾಡಿ ಸಲ್ಲಿಸಬೇಕು.
– ಭರ್ತಿ ಮಾಡಿದ ಅರ್ಜಿ ಸಲ್ಲಿಸಲು ಡಿಸೆಂಬರ್ 3, 2018 ಕೊನೆಯ ದಿನಾಂಕ
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಇರಬೇಕಾದ ಅರ್ಹತೆಗಳು ಈ ಕೆಳಗಿನಂತಿವೆ
– 2018 ನವೆಂಬರ್ 1 ರ ಒಳಗಾಗಿ ಅಭ್ಯರ್ಥಿಯು ಪದವಿ ಪಡೆದಿರಬೇಕು ಅಥವಾ ತತ್ಸಮಾನ ಶಿಕ್ಷಣ ಪಡೆದಿರಬೇಕು
– 25 ರಿಂದ 40 ವರ್ಷದೊಳಗೆ ವಯೋಮಿತಿ ಇರತಕ್ಕದು
– ಮಿಲಿಟರಿ, ವಾಯುಪಡೆ, ನೌಕಾಪಡೆ ಗಳಲ್ಲಿ ಕನಿಷ್ಟ 5 ವರ್ಷ ಕ್ಯಾಪ್ಟನ್ ಕೆಳಗಿನ ಹಂತದ ಶ್ರೇಣಿಗಳಲ್ಲಿ ಉದ್ಯೋಗ ನಿರ್ವಹಿಸಿರಬೇಕು.
ಉದ್ಯೋಗದ ವಿವರ
– ಭದ್ರತಾ ಕಾರ್ಯ ನಿರ್ವಹಣೆ ಮತ್ತು ಬೆಂಕಿ ಅನಾಹುತಗಳಿಂದ ರಕ್ಷಣೆ, ಪೊಲೀಸ್ ಮತ್ತು ಇತರ ಭದ್ರತಾ ಅಧಿಕಾರಿಗಳೊಂದಿಗೆ ತರಬೇತಿ.
ಅರ್ಜಿ ಶುಲ್ಕ :SC/ST/PWBD ಅಭ್ಯರ್ಥಿಗಳಿಗೆ ರೂ.118
ಹಾಗೂ ಇತರೆ ಅಭ್ಯರ್ಥಿಗಳಿಗೆ ರೂ.708.
Canara Bank has invited the applications for the post of manager security. Candidates can through bank official website.