Cashew farming is very easy with these simple method.
ಕರ್ಜೂರ, ಒಣದ್ರಾಕ್ಷಿ, ಗೋಡಂಬಿ ಹಾಗೂ ಇತರೆ ಡ್ರೈಫ್ರೂಟ್ಸ್ ಗಳಿಗೆ ಯಾವಾಗಲು ಬೇಡಿಕೆ ಇದ್ದದ್ದೇ. ಆದರೆ ಇದನ್ನು ಎಲ್ಲಾ ಮಣ್ಣುಗಳಲ್ಲಿ, ಎಲ್ಲಾ ಪ್ರದೇಶಗಳಲ್ಲಿ ಕೃಷಿ ಮಾಡಲು ಸಾಧ್ಯವಿಲ್ಲ. ಮಾಡಿದರೂ ಎಲ್ಲಾ ಕೃಷಿಗರು ಈ ಬೆಳೆಗಳಿಂದ ಲಾಭ ಗಿಟ್ಟಿಸುವುದು ಕಷ್ಟಸಾಧ್ಯವೇ.
ಗೋಡಂಬಿ ಕೃಷಿ ಮಾಡಬೇಕು ಎಂದುಕೊಂಡಿರುವವರು ತಮ್ಮ ಜಮೀನಿನಲ್ಲಿ ಸುಲಭವಾಗಿ ಈ ಸರಳ ವಿಧಾನವನ್ನು ಅನುಸರಿಸಿರಿ..
ಗೋಡಂಬಿ ಬೆಳೆ ಇತ್ತೀಚಿನ ದಿನಗಳಲ್ಲಿ ಹೆಚ್ಚು ಜನಪ್ರಿಯ ವಾಗುತ್ತಿರುವ ಕೃಷಿಕ ಬೆಳೆ. ಈ ಬೆಳೆಗೆ ಕೃಷಿ ತಜ್ಞರ ಪ್ರಕಾರ ಹೆಚ್ಚು ಉಷ್ಣತೆ ಹಾಗೂ ಕಡಿಮೆ ಮಳೆ ಬೀಳುವ ಪ್ರದೇಶದಲ್ಲಿ ಉತ್ತಮ ಇಳುವರಿ ನೀಡುತ್ತವೆ. ಗೋಡಂಬಿಯಲ್ಲಿಯೂ ಹಲವು ತಳಿಗಳ ಗೋಡಂಬಿ ಇವೆ. ಅವುಗಳು ಈ ಕೆಳಗಿನಂತಿವೆ.
1 ವೆಂಗುರ್ಲಾ – 4
2 ಚಿಂತಾಮಣಿ – 1
3 ಚಿಂತಾಮಣಿ – 2
4 ಉಳ್ಳಾಲ – 1
5 ಉಳ್ಳಾಲ – 2 ಹಾಗೂ ಪ್ರಮುಖ ತಳಿಗಳು
ಗೋಡಂಬಿಯನ್ನು ಸಾಮಾನ್ಯವಾಗಿ ಎಕರೆಗೆ 60 ರಷ್ಟು ಸಸಿಗಳನ್ನು ನೆಡಬೇಕು. ಆರಂಭದಲ್ಲಿ ಕೊಟ್ಟಿಗೆ ಗೊಬ್ಬರವನ್ನು ನೀಡಬೇಕು. ನಾಟಿ ಮಾಡಿದ ಮೊದಲನೇ ವರ್ಷ ಪ್ರತೀ ಗಿಡಕ್ಕೆ ಸಾರಜನಕ, ರಂಜಕ, ಪೋಟ್ಯಾಷ್ಗಳನ್ನು ನಿಗದಿತ ಪ್ರಮಾಣದಲ್ಲಿ ಮಾತ್ರ ನೀಡಬೇಕು. ಗಿಡಗಳನ್ನು ನೇರವಾಗಿ ಬೆಳೆಯಬೇಕೆಂದರೆ ಪ್ರೊನಿಂಗ್ ಮಾಡಬಹುದು. ಅಂದರೆ ಕೆಳಗಿನ ರೆಂಬೆಗಳನ್ನು ಅಡ್ಡಲಾಗಿ ಜೋತು ಬೀಳುತ್ತಾ ಬೆಳೆಯುವ ರೆಂಬೆಗಳನ್ನು ಕತ್ತರಿಸಿ ತೆಗೆಯಬೇಕು.
ಸುಮಾರು 8-10 ವರ್ಷದ ಪ್ರತಿ ಮರದಿಂದ ವರ್ಷಕ್ಕೆ 8-10 ಕಿ.ಗ್ರಾಂ ಗೋಡಂಬಿ ಪಡೆಯಬಹುದು.
ಸಂಪೂರ್ಣ ಇದೇ ಕೃಷಿಯಲ್ಲಿ ಹೆಚ್ಚು ತೊಡಗಿರುವ ಹಾಗೂ ಕೃಷಿ ತಜ್ಞರನ್ನು ಹೊಸ ಗೋಡಂಬಿ ಕೃಷಿ ಬೆಳೆಗಾರರು ಮೊದಲು ಸಂಪರ್ಕಿಸುವುದು ಉತ್ತಮ.
Cashew can be grown in poor soils. its performance would be much better on good soils. Cashew Farming detailed information guide is here..