ಕೇಂದ್ರ ಕೈಗಾರಿಕಾ ಸುರಕ್ಷತಾ ಪಡೆ(Central Industrial Security Force Recruitment 2019) ಹೆಡ್ ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಈ ಕೆಳಗಿನಂತಿದೆ.
ಹುದ್ದೆ ಹೆಸರು : ಹೆಡ್ ಕಾನ್ಸ್ಟೇಬಲ್ (Head Constable)
ಹುದ್ದೆಗಳ ಸಂಖ್ಯೆ : 328 ಪುರುಷ ಮತ್ತು 37 ಮಹಿಳಾ ಹುದ್ದೆಗಳು
ಶೈಕ್ಷಣಿಕ ವಿದ್ಯಾರ್ಹತೆ : ದ್ವಿತೀಯ ಪಿಯುಸಿ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 20-02-2019
ಶುಲ್ಕ ಪಾವತಿಸಲು ಕೊನೆಯ ದಿನಾಂಕ : 20-02-2019 ( ಸಂಜೆ 5 pm ಒಳಗೆ)
ಅರ್ಜಿ ಶುಲ್ಕ ಎಷ್ಟು?
ಸಾಮಾನ್ಯ ವರ್ಗಗಳ ಅಭ್ಯರ್ಥಿಗಳಿಗೆ : ರೂ 100
ಪ್ರವರ್ಗ 2ಎ/2ಬಿ/3ಎ/3ಬಿ ಅಭ್ಯರ್ಥಿಗಳಿಗೆ : ರೂ.100
ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಮತ್ತು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಪ್ರವರ್ಗ 1 ರ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.
ಶುಲ್ಕವನ್ನು ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್ ಮೂಲಕ ಆನ್ಲೈನ್ ನಲ್ಲಿ ಅಥವಾ SBI ಬ್ಯಾಂಕ್ನಲ್ಲಿ ಇ-ಚಲನ್ ಮೂಲಕ ಪಾವತಿಸಬಹುದು.
ವಯೋಮಿತಿ
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಮತ್ತು ಅರ್ಜಿ ಸಲ್ಲಿಸುವ ವೇಳೆಗೆ 25 ವರ್ಷ ಗರಿಷ್ಠ ಮೀರಿರಬಾರದು.
ಅರ್ಜಿ ಸಲ್ಲಿಸುವುದು ಹೇಗೆ?
ಆಸಕ್ತ ಅಭ್ಯರ್ಥಿಗಳು cisftrectt.in ಅಧಿಕೃತ ವೆಬ್ಸೈಟ್ ವಿಳಾಸಕ್ಕೆ ಭೇಟಿ ನೀಡಿ. ಮೊದಲು ತಮ್ಮ ಹೆಸರು ಮತ್ತು ಈ ಮೇಲ್ ವಿಳಾಸ ನಿಡಿ ರಿಜಿಸ್ಟರ್ ಆಗಬೇಕು ನಂತರ ಅಭ್ಯರ್ಥಿಗಳು ಆನ್ಲೈನ್ ಅರ್ಜಿಯನ್ನು ಭರ್ತಿ ಮಾಡಬೇಕು.
ಅಭ್ಯರ್ಥಿಗಳು ಅಗತ್ಯ ವಿವರಗಳನ್ನು ನಿಖರವಾಗಿ ನೀಡಬೇಕು. ತಪ್ಪಾಗಿ ನೀಡಿದಲ್ಲಿ ಅಂತಹ ಅರ್ಜಿಗಳನ್ನು ತರಸ್ಕರಿಸಲಾಗುವುದು.
The Central Industrial Security Force(CISF) has opened the CISF Head Constable Recruitment 2019. Read more about cisf recruitment 2019.