ಬೆಂಗಳೂರು, ಸೆಪ್ಟೆಂಬರ್ 06: ಇಂದು ರಾತ್ರಿ ನಗರ ಸಂಚಾರ ಮಾಡಿ ಮಹದೇವಪುರ ಹಾಗೂ ಇನ್ನಿತರ ಪ್ರಮುಖ ಪ್ರದೇಶಗಳಲ್ಲಿ ನೀರು ನಿಂತಿರುವುದರ ಪರಿಶೀಲನೆ ಮಾಡುವುದಾಗಿ ಮುಖ್ಯಮಂತ್ರಿಬಸವರಾಜ ಬೊಮ್ಮಾಯಿ ತಿಳಿಸಿದರು.
ನಗರ ಪರಿಶೀಲನೆಗೆ ಹೊರಡುವ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದರು. ಸಚಿವ ಡಾ. ಅಶ್ವತ್ಥನಾರಾಯಣ ಜೊತೆಗಿದ್ದರು.
ಸಂದರ್ಭವನ್ನು ಎಲ್ಲರೂ ಒಗ್ಗಟ್ಟಿನಿಂದ ಎದುರಿಸಬೇಕು
ಬಿಬಿಎಂಪಿ ಅಧಿಕಾರಿಗಳು 24/ 7 ಕಳೆದ 4 ದಿನಗಳಿಂದ ಒಂದು ನಿಮಿಷವೂ ಬಿಡುವಿಲ್ಲದೆ ಕೆಲ್ಸ ಮಾಡುತ್ತಿದ್ದಾರೆ. ಬಿಬಿಎಂಪಿ ಸಿಬ್ಬಂದಿ, ಅಧಿಕಾರಿಗಳು , ವಲಯ ಆಯುಕ್ತರು ಅತ್ಯಂತ ಕಷ್ಟ ಹಾಗೂ ಪ್ರಾಮಾಣಿಕತೆಯಿಂದ ಕೆಲಸ ಮಾಡುತ್ತಿದ್ದಾರೆ. ಬೆಂಗಳೂರಿನ ಮಹಾಜನತೆಗೆ ಇದನ್ನು ಮೆಚ್ಚಬೇಕು. ಏಕೆಂದರೆ ಇಷ್ಟು ದೊಡ್ಡಪ್ರಮಾಣದ ಮಳೆ ಬಂದು ಎಂಥದ್ದೇ ಸಾಮರ್ಥ್ಯ ವಿರುವ ಚರಂಡಿಯಾದರೂ ನೀರು ತುಂಬಿ ಹರಿಯುತ್ತಿದೆ. ಕೆರೆಗಳೂ ತುಂಬಿವೆ. ಇದೊಂದು ವಿಶೇಷ ಸಂದರ್ಭ. ಈ ಸಂದರ್ಭವನ್ನು ಎಲ್ಲರೂ ಒಗ್ಗಟ್ಟಿನಿಂದ ಎದುರಿಸಬೇಕು ಎಂದು ಮುಖ್ಯಮಂತ್ರಿಗಳು ಕರೆ ನೀಡಿದರು.
ವರುಣನ ದೊಡ್ಡ ಆಶೀರ್ವಾದ ಇದು . ಒಬ್ಬರಿಗೊಬ್ಬರು ಸಹಾಯ ಸಹಕಾರ ನೀಡಿ ಸಹಕಾರಿಸಬೇಕು ಹೊರತಾಗಿ ಬೇರೆ ವಿಚಾರಗಳನ್ನು. ಮಾಡಬಾರದು. ಕೆರೆಗಳ ನೀರನ್ನು ಹರಿಸಲಾಗುತ್ತಿದೆ. ಕಾಲುವೆಗೆ ನೀರು, ಅತಿಕ್ರಮ ತೆರವು ಮತ್ತು ಬಹುತೇಕ ವಾಗಿ ಮಹದೇವಪುರ ಮತ್ತು ಬೊಮ್ಮನಹಳ್ಳಿಯಲ್ಲಿ ನಿಯಂತ್ರಣ ಮಾಡಲಾಗಿದೆ. 2-3 ಭಾಗದಲ್ಲಿ ಸಮಸ್ಯೆ ಇದ್ದು ಅಲ್ಲಿಯೂ ಕಾರ್ಯಾಚರಣೆ ಮಾಡಲಾಗುತ್ತಿದೆ ಎಂದರು.
ರಾಜಕೀಯ ಮಾಡಲು ಇದು ಸಂದರ್ಭವಲ್ಲ
ಬೆಂಗಳೂರಿನ ಇತರ ಭಾಗದಲ್ಲಿ ಆತಂಕಪಡುವಂತಿಲ್ಲ. 8 ವಲಯಗಳಲ್ಲಿ 7 ವಲಯಗಳಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಆತಂಕವಿಲ್ಲ. ಮಹದೇವಪುರದಲ್ಲಿ ಅತಿಕ್ರಮಣದಿಂದ ಸಮಸ್ಯೆ ಉಂಟಾಗಿದೆ. ಅಲ್ಲಿನ ಜನ ಬಹಳಷ್ಟು ಸಹಕಾರ ನೀಡಿದ್ದಾರೆ, ಕೆಲವೆಡೆ ತೆಗೆಯಲು ಸಹಾಯ ಮಾಡುತ್ತಿದ್ದಾರೆ ಅಲ್ಲಿನ ಸ್ಥಳೀಯರಿಗೆ ಅಭಿನಂದಿಸಬೇಕು. ಅವರ ಸಹಕಾರ ಇನ್ನೂ ಬೇಕು. ಬೆಂಗಳೂರು ಒಂದಾಗಿ ನಿಲ್ಲುವ ಸಂದರ್ಭ ಇದು. ವಿರೋಧಪಕ್ಷದವರೂ ಕೂಡ ಒಂದಾಗಿರುವ ಸನ್ನಿವೇಶ. ರಾಜಕೀಯ ಮಾಡಲು ಇದು ಸಂದರ್ಭವಲ್ಲ. ರಾಜಕಾರಣ ಮಾಡುವದು, ದೋಷಾರೋಪ ಮಾಡಿಕೊಳ್ಳುವುದು ಸರಿಯಲ್ಲ. ಎಲ್ಲಾ ಪರಿಮಿತರಿಗೆ, ಬಿಬಿಎಂಪಿಯಲ್ಲಿ ಕೆಲ್ಸ ಮಾಡಿದ ಇಂಜಿನಿಯರ್ ಗಳಿಗೆ ನಿವೃತ್ತ ಅಧಿಕಾರಿಗಳು, ಆಯುಕ್ತರು, ನೌಕರರು ಸಲಹೆ ಸೂಚನೆಗಳನ್ನು ನೀಡಿ, ಅನುಭವ ಹಂಚಿಕೊಳ್ಳಬೇಕೆಂದು ಲಾರೆ ನೀಡಿದರು. ಸಾರ್ವಜನಿಕರು ಸಹ ಯಾವ ರೀತಿ ಸುಧಾರಣೆ ತರಬಹುದು, ಜನರ ಕಷ್ಟ ಕಡಿಮೆ ಮಾಡಬಹುದು ಎಂದು ತಿಳಿಸಬೇಕೆಂದು ತಿಳಿಸಿದರು.
ಕೆಳ ಹಂತದಲ್ಲಿರುವ ಮನೆಗಳಿಗೆ ನೀರು ನುಗ್ಗಿದ್ದು, ಇದನ್ನು ಯಾವ ರೀತಿ ಜನರಿಗೆ ಸಹಾಯ ಮಾಡಬಹುದು ಹಾಗೂ ನಿಭಾಯಿಸುವ ಬಗೆಯ ಬಗ್ಗೆ ಮುಕ್ತವಾಗಿ ಸಲಹೆ ನೀಡಲು ಕೋರಿದರು. ಅದನ್ನು ಅನುಷ್ಠಾನಕ್ಕೆ ತರಲಾಗುವುದು ಎಂದರು.
ಬೆಂಗಳೂರಿಗೆ ಎಂದಿನಂತೆ ನೀರು ಸರಬರಾಜು
ನಿನ್ನೆ ತೊರೆಕಾಡನಹಳ್ಳಿ ನೀರು ಸರಬರಾಜು ಘಟಕದಲ್ಲಿ ನೀರು ನುಗ್ಗಿ ಯಂತ್ರೋಪಕರಣಗಳು ನಿಂತು ಹೋಗಿದ್ದವು. ಬೆಂಗಳೂರಿಗೆ ನೀರು ಸರಬರಾಜಿನಲ್ಲಿ ವ್ಯತ್ಯಯವಾಗುವ ಭಯ ದೂರವಾಗಿದೆ. ಹಂತ 1.ಮತ್ತು ಹಂತ 2 ರಲ್ಲಿ 550 ಎಂ.ಎಲ್.ಡಿ ಪಂಪ್ ಹೌಸ್ ಪ್ರಾರಂಭವಾಗಿದೆ. ಬೆಂಗಳೂರಿಗೆ ನೀರು ಸರಬರಾಜಾಗುತ್ತಿದೆ 330 ಎಂ.ಎಲ್.ಡಿ ಪಂಪ್ ಹೌಸ್ ಕೆಲಸ ವಾಗುತ್ತಿದೆ. ಬೆಳಿಗ್ಗೆಯ ಹೊತ್ತಿಗೆ ಅದೂ ಕೂಡ ಸರಿಹೋಗಲಿದೆ. ಯಾರೂ ಆತಂತ ಪಡುವ ಅವಶ್ಯಕತೆ ಇಲ್ಲ. ಅಲ್ಪ ಸಮಯದಲ್ಲಿ ನೀರು ಹೊರಹಾಕಿ ಸಿದ್ಧಪಡಿಸಿರುವ ಜಲಮಂಡಳಿ ಅಧ್ಯಕ್ಷರು, ಇಂಜಿನಿಯರ್ ಗಳು, ನಗರಾಭಿವೃದ್ಧಿ ಕಾರ್ಯದರ್ಶಿ, ಮಹಾನಗರಪಾಲಿಕೆ ಎಲ್ಲರಿಗೂ ಅಭಿನಂದಿಸಿದರು. 2 ದಿನಗಳ ಮುನ್ನವೇ ನೀರು ತೆಗೆದು, ಸರಿ ಪಡಿಸಿ ಪಂಪ್ ಮಾಡುತ್ತಿದ್ದಾರೆ ಎಂದರು. ನಾಳೆಯಿಂದ ಬೆಂಗಳೂರು ಜನರಿಗೆ ಎಂದಿನಂತೆ ನೀರು ಸರಬರಾಜು ಆಗಲಿದೆ.