Hyderabad Karnataka Recruitment
ರಾಜ್ಯದ ಎಜುಕೇಟೆಡ್ ನಿರುದ್ಯೋಗಿಗಳಿಗೆ ಅಂತು ಇಂತೂ ರಾಜ್ಯ ಸರ್ಕಾರ ಒಂದು ಸಂತಸದ ವಿಷಯವನ್ನು ನೀಡಿದೆ. 10187 ಹುದ್ದೆಗಳನ್ನು ನೇರ ನೇಮಕಾತಿ ಮಾಡುವ ಬಗ್ಗೆ ರಾಜ್ಯದ ಮುಖ್ಯ ಕಾರ್ಯದರ್ಶಿ ಸುತ್ತೋಲೆ ಹೊರಡಿಸಿದ್ದಾರೆ. ಈ ಸಂತೋಷ ಹೈದರಾಬಾದ್ ಕರ್ನಾಟಕದ ಯುವ ನಿರುದ್ಯೋಗಿಗಳಿಗೆ ಎಂಬುದು ಇನ್ನೂ ವಿಶೇಷ.
ಹಿಂದುಳಿದ ಹೈದರಾಬಾದ್ ಕರ್ನಾಟಕಕ್ಕೆ ವಿಶೇಷ ಮಾನ್ಯತೆ ನೀಡುವ ಅನುಚ್ಛೇದ 371 ಜೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಈ ನೇಮಕಾತಿ ಸುತ್ತೋಲೆ ಹೊರಡಿಸಲಾಗಿದೆ. ಹೈದರಾಬಾದ್ ಕರ್ನಾಟಕದಲ್ಲಿ ಖಾಲಿ ಇರುವ 10187 ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಸರ್ಕಾರ ತೀರ್ಮಾನಿಸಿದೆ.
ಈ ನೇಮಕಾತಿ ಸಂಬಂಧ ಕರ್ನಾಟಕ ರಾಜ್ಯದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ರವರು ಸುತ್ತೋಲೆ ಹೊರಡಿಸಿದ್ದಾರೆ. ಈ ಭಾಗದ ವಿಶೇಷ ಮಾನ್ಯತೆ ನಿಯಮದಡಿ ರಚಿಸಲಾದ ಪ್ರಾದೇಶಿಕ ಮಟ್ಟ, ರಾಜ್ಯ ಮಟ್ಟ, ರಾಜ್ಯದ ಸ್ಥಳೀಯ ಸಂಸ್ಥೆಗಳಲ್ಲಿನ ಎಲ್ಲಾ ವರ್ಗದ ಅಪಾರ ಪ್ರಮಾಣದ ಹುದ್ದೆಗಳು ಖಾಲಿ ಇರುವ ಕಾರಣ, ಉತ್ತಮ ಆಡಳಿತಕ್ಕೆ ಎಲ್ಲಾ ಆಡಳಿತ ಇಲಾಖೆಗಳ ಮುಖ್ಯಸ್ಥರು, ಮಂಡಳಿ, ನಿಗಮ, ಸ್ವಾಯತ್ತ ಸಂಸ್ಥೆಗಳ ಮುಖ್ಯಸ್ಥರು ಆದ್ಯತೆ ಮೇರೆಗೆ ಭರ್ತಿ ಮಾಡುವಂತೆ ಸೂಚನೆ ನೀಡಿದ್ದಾರೆ.
ಮುಖ್ಯಾಂಶಗಳು
– ಕೆಪಿಎಸ್‌ಸಿ ಮೂಲಕ ಈ ನೇರ ನೇಮಕಾತಿ ನಡೆಯಲಿದೆ.
– A, B ವರ್ಗದ ಹುದ್ದೆಗಳಿಗೆ ಸಿಇಟಿ ಪರೀಕ್ಷೆ ನಡೆಯಲಿದೆ. ಹಾಗೂ C, D ವರ್ಗದ ಹುದ್ದೆಗಳಿಗೆ ಸಿಇಟಿ ಪರೀಕ್ಷೆ ನಡೆಸದೇ ಮೀಸಲಾತಿಯ ಪ್ರಕಾರವೇ ಹುದ್ದೆಗಳ ನೇಮಕಾತಿ ನಡೆಯಲಿದೆ.
– ರಾಜ್ಯದಲ್ಲಿ 2 ಲಕ್ಷ ಹುದ್ದೆಗಳು ಖಾಲಿ ಇದ್ದು, ಈ ಹುದ್ದೆಗಳ ಶೀಘ್ರ ಭರ್ತಿಗೂ ಸರ್ಕಾರ ನಿರ್ಧರಿಸಿದೆ. ನೇಮಕಕ್ಕೆ ಸಂಬಂಧಿಸಿದಂತೆ ಎಲ್ಲಾ ಇಲಾಖೆಗಳಿಂದ ಮಾಹಿತಿ ಕೇಳಿದೆ.
– ಇಂಧನ ಇಲಾಖೆ, ಉನ್ನತ ಶಿಕ್ಷಣ ಇಲಾಖೆ, ನಗರಾಭಿವೃದ್ಧಿ ಇಲಾಖೆಗಳಲ್ಲಿ ಹೆಚ್ಚಿನ ಸಂಖ್ಯೆ ಹುದ್ದೆಗಳು ಖಾಲಿ ಇರುವ ಬಗ್ಗೆ ಮೂಲಗಳಿಂದ ತಿಳಿದಿದೆ.
Direct Recruitment to 10187 post in Hyderabad Karnataka. Karnataka State Chief secretary circular. Read more here..
1 comment
Nice
Comments are closed.