ಮ್ಯುಚುವಲ್ ಫಂಡ್ಗಳು ಪ್ರಸ್ತುತ ಹೂಡಿಕೆ ಮಾಡಲು ಅತ್ಯಂತ ಜನಪ್ರಿಯ ಸೆಕ್ಯೂರ್ಡ್ ಪ್ಲಾಟ್ಫಾರ್ಮ್. ಆದರೆ ಅವು ತನ್ನದೇ ಆದ ಅಪಾಯಗಳ ಬುತ್ತಿಯನ್ನು ಕಟ್ಟಿಕೊಂಡು ಹೊರವೊಮ್ಮುತ್ತಿವೆ ಎಂದರೆ ತಪ್ಪಾಗಲಾರದು. ಇವು ಒಂದೆಡೆ ನಮಗೆ ಲಾಭವನ್ನು ಗಳಿಸಿಕೊಟ್ಟರೆ ಇನ್ನೊಂದೆಡೆ ಅಪಾಯವನ್ನು ತಂದೊಡುವ ಸಾಧ್ಯತೆ ಇದೆ. ಅವುಗಳ ಬಗ್ಗೆ ನಾವು ಹೆಚ್ಚು ಗಮನವಹಿಸಬೇಕು.
ಮ್ಯುಚುವಲ್ ಫಂಡ್ ಗಳಲ್ಲಿನ ಅಪಾಯಗಳು ಏನು? ಇಲ್ಲಿದೆ ನೋಡಿ ಡೀಟೇಲ್ಸ್
ಸರ್ಕಾರದ ಆರ್ಥಿಕ ನೀತಿ, ದೇಶದ ಆರ್ಥಿಕ ಅಭದ್ರತೆ, ಬೇಡಿಕೆ ಮತ್ತು ಪೂರೈಕೆ ನಡುವಿನ ಅಂತರಗಳಂತಹ ಹಲವು ಅಂಶಗಳನ್ನು ಮ್ಯುಚುವಲ್ ಫಂಡ್ ಗಳ ಮೇಲೆ ಅತಿಯಾಗಿ ಪ್ರಭಾವ ಬೀರುವ ಸಾಧ್ಯತೆಯಿದೆ. ಮ್ಯುಚುವಲ್ ಫಂಡ್ ನಲ್ಲಿ ಹೂಡಿಕೆ ಮಾಡುವ ಸಂದರ್ಭದಲ್ಲಿ ಎದುರಾಗುವ ಅಪಾಯಗಳನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ.
ವ್ಯವಸ್ಥಿತ ಅಪಾಯಗಳು
ಹೂಡಿಕೆಯ ಯಾವುದೇ ಸ್ವತ್ತುಗಳ ಮೇಲೆ ನೇರವಾಗಿ ನಿಯಂತ್ರಣ ಸಾಧಿಸುವ ಅಂಶಗಳು ಈ ವಿಧದ ಅಪಾಯಕ್ಕೆ ಒಳಪಡುತ್ತವೆ. ಅಂದರೆ ಹಣಕಾಸಿನ ದುಬ್ಬರ, ಬೆಲೆ ಏರಿಳಿತ, ಬೇಡಿಕೆ ಪೂರೈಕೆಯ ಅಸ್ಥಿಮಿತತೆ ಇವು ಹೂಡಿಕೆಯ ಮೇಲೆ ನೇರವಾಗಿ ಪರಿಣಾಮ ಬೀರುವ ಅಂಶಗಳು.
ಅವ್ಯವಸ್ಥಿತ ಅಪಾಯಗಳು
ಹೂಡಿಕೆಯಲ್ಲಿ ಅನಿರೀಕ್ಷಿತವಾಗಿ ಎದುರಾಗುವ ತೊಂದರೆಗಳು ಅಂದರೆ ಹೂಡಿಕೆ ಸಂಸ್ಥೆಯ ಮೇಲಿನ ಯಾವುದೇ ಅಪಘಾತ ಅಥವಾ ಕ್ರಿಮಿನಲ್ ಮೊಕದ್ದಮೆ ಇವು ಸಂಸ್ಥೆಯ ಷೇರಿನ ಮೇಲೆ ನೇರ ಪರಿಣಾಮ ಬೀರುತ್ತವೆ.
ಮ್ಯುಚುವಲ್ ಫಂಡ್ ಗಳಲ್ಲಿನ ಹೆಚ್ಚುವರಿ ಅಪಾಯಗಳು
ಬಡ್ಡಿದರದಲ್ಲಿ ಹೆಚ್ಚಳ
ಮಾರುಕಟ್ಟೆಯಲ್ಲಿನ ಬಡ್ಡಿದರಗಳು ಸಾಲದ ಲಭ್ಯತೆಯನ್ನು ಪ್ರತಿಬಿಂಬಿಸುತ್ತದೆ ಮತ್ತು ದೇಶದ ಆರ್ಥಿಕ ಸ್ಥಿತಿಯು ಅದರ ಮೇಲೆ ಪ್ರಭಾವ ಬೀರುತ್ತದೆ. ಇದು ಸಾಮಾನ್ಯವಾಗಿ ಸ್ಥಿರ ಆದಾಯದ ಮ್ಯುಚುವಲ್ ಫಂಡ್ಗಳು ಮತ್ತು ಸಾಲ ನಿಧಿಗಳಂತಹ ಹೂಡಿಕೆಗಳ ಮೇಲೆ ಪರಿಣಾಮ ಬೀರುತ್ತದೆ. ಬಡ್ಡಿದರಗಳು ಹೆಚ್ಚಾದಂತೆ, ಬಾಂಡ್ಗಳಲ್ಲಿನ ಹೂಡಿಕೆಯು ಇತರ ಹೂಡಿಕೆ ಆಯ್ಕೆಗಳಿಗಿಂತ ಕಡಿಮೆ ಲಾಭದಾಯಕವೆಂದು ತೋರುತ್ತದೆ ಮತ್ತು ಅವುಗಳ ಬೆಲೆಗಳು ಕೂಡ ಕಡಿಮೆಯಾಗುತ್ತವೆ.
ಮಾರುಕಟ್ಟೆಯ ಅಪಾಯಗಳು
ಪ್ರತಿಯೊಂದು ಮಾರುಕಟ್ಟೆಯು ಅದರ ಪ್ರವೃತ್ತಿಯನ್ನು ಅನುಸರಿಸುವುದರಿಂದ, ಮಾರುಕಟ್ಟೆ ಅಪಾಯವು ವ್ಯವಸ್ಥಿತ ವರ್ಗದ ಅಡಿಯಲ್ಲಿ ಬರುತ್ತದೆ. ಮಾರುಕಟ್ಟೆ ಪರಿಸ್ಥಿತಿಗಳಿಂದಾಗಿ ನಿಮ್ಮ ಹೂಡಿಕೆಯು ಹಾನಿಗೊಳಗಾಗಬಹುದು.
ಹಣದುಬ್ಬರದ ಅಪಾಯ
ಹಣದುಬ್ಬರ ಅಪಾಯವು ಹೆಚ್ಚುತ್ತಿರುವ ಸರಕುಗಳ ಬೆಲೆಗಳಿಂದಾಗಿ ಹೂಡಿಕೆದಾರರ ಕೊಳ್ಳುವ ಸಾಮರ್ಥ್ಯದಲ್ಲಿನ ಕಡಿತಕ್ಕೆ ಸಂಬಂಧಿಸಿದ ಅಪಾಯಗಳನ್ನು ತಂದೊಡ್ಡುತ್ತವೆ. ಉದಾಹರಣೆಗೆ, ಮ್ಯುಚುವಲ್ ಫಂಡ್ಗಳಲ್ಲಿ ಹೂಡಿಕೆ ಮಾಡಿದ ಹಣವು ನಿಮಗೆ 7% ಲಾಭವನ್ನು ನೀಡಿದರೆ ಮತ್ತು ಅದೇ ಅವಧಿಯಲ್ಲಿ ಹಣದುಬ್ಬರವು 4% ರಷ್ಟು ಏರಿದರೆ, ನಿಮ್ಮ ನಿವ್ವಳ ಖರೀದಿ ಸಾಮರ್ಥ್ಯವು 3% ರಷ್ಟು ಮಾತ್ರ ಹೆಚ್ಚಾಗುತ್ತದೆ.
ಇವುಗಳೊಂದಿಗೆ ಮ್ಯುಚುವಲ್ ಫಂಡ್ ಗಳಲ್ಲಿ ಕಡಿಮೆ ಲಿಕ್ವಿಡಿಟಿ, ಸಾಲದ ನೀಡುವ ಕಂಪನಿಗಳ ಮೇಲೆ ಹೂಡಿಕೆ ಮತ್ತು ಆರ್ಥಿಕ ಅಸ್ಥಿರತೆ ಹೆಚ್ಚು ಅಪಾಯವನ್ನು ತೊಂದೊಡ್ಡಬಹುದು. ಹಾಗಾಗಿ ಹೂಡಿಕೆಗೂ ಮುನ್ನ AMC ಗಳ ಷೇರು ಮತ್ತು ಅದರ ಆರ್ಥಿಕ ಇತಿಹಾಸ ಭದ್ರತೆ ಸುರಕ್ಷತೆ ಬಗ್ಗೆ ವಿಚಾರಿಸಿ ಮಾಹಿತಿ ಪಡೆದು ಹೂಡಿಕೆ ಮಾಡುವುದು ಉತ್ತಮ.