ಮನುಷ್ಯನಿಗೆ ತಲೆಕೆಟ್ಟಾಗ ಅವನನ್ನು ತಡೆದು ನಿಲ್ಲಿಸುವುದ ಅಸಾಧ್ಯದ ಕೆಲಸ ಹಾಗೆಯೇ ತಲೆ ಸುತ್ತು, ತಲೆ ತಿರುಗುವುದು, ತಲೆ ಚಕ್ಕರ್ ಬಂದಾಗ ಕೂಡ ಅವನನ್ನು ಸಂಭಾಳಿಸುವುದು ಬಹಳ ಕಷ್ಟಸಾಧ್ಯದ ವಿಷಯ. ಈ ತಲೆ ಸುತ್ತು ಸಮಸ್ಯೆಯು ನಮ್ಮ ದೇಹದಲ್ಲಿ ನಡೆಯುವ ಹಾರ್ಮೋನ್ಗಳ ಬದಲಾವಣೆಗಳಿಂದ ಮತ್ತು ರಕ್ತದ ಒತ್ತಡದಲ್ಲಿ ಉಂಟಾಗುವ ಕುಸಿತದಿಂದ ಕಂಡು ಬರುತ್ತದೆ. ಆದರೆ ಇದರ ಜೊತೆಗೆ ದೃಷ್ಟಿ ಮಂದವಾಗುವಿಕೆ, ಶ್ರವಣ ಶಕ್ತಿಯು ಕುಂಠಿತವಾಗುವಿಕೆ, ಮಾತನಾಡಲು ಕಷ್ಟವಾಗುವಿಕೆ ಮತ್ತು ಎದೆ ಬಡಿತ ಏರು ಪೇರಾಗುವುದು ಮುಂದಿನ ಹಂತವಾಗಿದೆ. ಈ ಸಮಸ್ಯೇಯಲ್ಲಿ ದೇಹದಲ್ಲಿ ಕೆಂಪು ರಕ್ತ ಕಣಗಳು ಕಡಿಮೆ ಇರುತ್ತವೆ ಮತ್ತು ಇವು ದೇಹದ ಸಮತೋಲನವನ್ನು ತಪ್ಪಿಸುತ್ತವೆ.
ಈ ಕಾಯಿಲೆಗೆ ಮನೆಯ ಅಕ್ಕ – ಪಕ್ಕದ ಮೆಡಿಕಲ್ ಶಾಪ್ ಗಳಲ್ಲಿ ಸಿಗುವ ಸಣ್ಣ ಪುಟ್ಟ ಔಷಧಿಗಳನ್ನು ತೆಗೆದುಕೊಂಡು ತಾತ್ಕಾಲಿಕವಾಗಿ ಪರಿಹಾರ ಕಂಡುಕೊಳ್ಳಬಹುದು ನಿಜ. ಆದರೆ ಪ್ರತಿ ಬಾರಿಯೂ ಇದನ್ನೇ ಮಾಡಲು ಸಾಧ್ಯವಿಲ್ಲ. ಶಾಶ್ವತವಾಗಿ ಇದಕ್ಕೊಂದು ಪರಿಹಾರ ಬೇಕಲ್ಲವೇ? ಹಾಗಾಗಿ ನೈಸರ್ಗಿಕ ಪದ್ಧತಿಗಳನ್ನು ಅನುಸರಿಸುವುದರಿಂದ ಯಾವುದೇ ಅಡ್ಡ ಪರಿಣಾಮಗಳು ಇಲ್ಲದೆ ನಮ್ಮ ಆರೋಗ್ಯ ಸಾಕಷ್ಟು ಸುಧಾರಿಸುತ್ತದೆ.
– ಶುಂಠಿ ಚಹಾ ಶುಂಠಿ ನಮಗೆಲ್ಲಾ ಗೊತ್ತಿರುವ ಹಾಗೆ ಆಂಟಿ – ಇಂಪ್ಲಾಮ್ಮೆಟರಿ ಮತ್ತು ಆಂಟಿ – ಆಕ್ಸಿಡೆಂಟ್ ಗುಣ ಲಕ್ಷಣಗಳನ್ನು ಹೊಂದಿರುವ ಕಾರಣದಿಂದ ದಿನಕ್ಕೊಂದು ಭಾರಿ ಶುಂಠಿ ಚಹಾವನ್ನು ಸೇವಿಸಿ.
– ಬಾದಾಮಿ ಬೀಜಗಳಲ್ಲಿ ಅತ್ಯಧಿಕ ಪ್ರಮಾಣದ ವಿಟಮಿನ್ ‘ ಎ ‘, ವಿಟಮಿನ್ ‘ ಬಿ ‘ ಮತ್ತು ವಿಟಮಿನ್ ‘ ಇ ‘ ಅಂಶಗಳು ಸಿಗುವುದರಿಂದ ಒಂದು ಹಿಡಿ ಬಾದಾಮಿ ಬೀಜಗಳನ್ನು ಪ್ರತಿ ದಿನ ಮಧ್ಯಾಹ್ನದ ನಂತರ ಸೇವನೆ ಮಾಡುವ ಅಭ್ಯಾಸ ಇಟ್ಟುಕೊಂಡರೆ ದೀರ್ಘ ಕಾಲದ ವರ್ಟಿಗೊ ರೋಗ ಲಕ್ಷಣಗಳು ಮಾಯವಾಗುತ್ತವೆ ಎಂದು ಹೇಳಬಹುದು.
– ಎಳ್ಳೆಣ್ಣೆಗೆ ಲವಂಗ ಪುಡಿ ಮತ್ತು ಏಲಕ್ಕಿ ಪುಡಿ ಸೇರಿಸಿ ಸ್ವಲ್ಪ ಬಿಸಿ ಮಾಡಿ ತಲೆಗೆ ಹಚ್ಚಿದರೆ ತಲೆ ಸುತ್ತು ಕಡಿಮೆಯಾಗುತ್ತದೆ.
– ನಮ್ಮ ದೇಹದಲ್ಲಿ ನೀರಿನ ಅಂಶ ಕಡಿಮೆ ಆಗಿ ನಿರ್ಜಲೀಕರಣದ ಸಮಸ್ಯೆ ಎದುರಾದರೆ ವರ್ಟಿಗೋ ರೋಗ – ಲಕ್ಷಣಗಳು ಉಲ್ಬಣಗೊಳ್ಳುತ್ತವೆ ಹಾಗಾಗೀ ನೀರನ್ನು ಹೆಚ್ಚಾಗಿ ಸೇವಿಸಬೇಕು.
– ಪಿತ್ತ ಹೆಚ್ಚಾಗಿ ತಲೆ ಸುತ್ತು ಇದ್ದರೆ ಒಂದು ಚಮಚ ಬೆಟ್ಟದ ನೆಲ್ಲಿಕಾಯಿ ಪುಡಿ ಮಾಡಿ, ಒಂದು ಚಮಚ ಕೊತ್ತಂಬರಿ ಬೀಜವನ್ನು ನೀರಲ್ಲಿ ರಾತ್ರಿ ನೆನೆಸಿ ಬೆಳಗ್ಗೆ ಸೋಸಿ, ಬರೀ ನೀರನ್ನು ಸಕ್ಕರೆ ಜೊತೆ ಖಾಲಿ ಹೊಟ್ಟೆಗೆ ಸೇವಿಸಿದರೆ ಪಿತ್ತ ಶಮನವಾಗಿ ತಲೆ ಸುತ್ತು ಕಡಿಮೆಯಾಗುತ್ತದೆ.
– ನಮ್ಮ ಮನೆಯಲ್ಲಿ ಅತ್ಯಂತ ಸುಲಭವಾಗಿ ಮತ್ತು ಸರಳವಾಗಿ ಮಾಡಿಕೊಳ್ಳಬಹುದಾದ ಮತ್ತು ಬಹುತೇಕ ಆರೋಗ್ಯ ಸಮಸ್ಯೆಗಳಿಗೆ ಒಳ್ಳೆಯ ಪರಿಣಾಮಕಾರಿ ಮನೆ ಮದ್ದು ಎಂದರೆ ಅದು ಎಸೆನ್ಶಿಯಲ್ ಆಯಿಲ್ ಬಳಕೆ ಮಾಡುವುದು.
– ನಮ್ಮ ದೇಹದಲ್ಲಿ ರಕ್ತ ಸಂಚಾರ ಹೆಚ್ಚಾಗಿಸಲು ಜೇನು ತುಪ್ಪ ಮತ್ತು ಆಪಲ್ ಸೈಡರ್ ವಿನೆಗರ್ ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.
– ನಿಂಬೆ ಹಣ್ಣಿನ ರಸಕ್ಕೆ ಸಕ್ಕರೆ ಸೇರಿಸಿ ನಿಯಮಿತವಾಗಿ ಸೇವಿಸಿದರೆ ತಲೆ ಸುತ್ತು ನಿವಾರಣೆಯಾಗುತ್ತದೆ.
– ಅಶ್ವಗಂಧ ಪುಡಿ ಮತ್ತು ಬಜೆ ಪುಡಿ ಕಲಸಿಟ್ಟು ಡಬ್ಬಿಗೆ ಹಾಕಿಡಿ. ಒಂದು ಗ್ರಾಂ ನಷ್ಟು ಈ ಪುಡಿಯನ್ನು ಹಾಲಿನ ಜೊತೆ ಸೇರಿಸಿ ಸೇವಿಸಿದರೆ ತಲೆಸುತ್ತು ನಿಲ್ಲುತ್ತದೆ.
– ಒಣ ದಾಕ್ಷಿಯನ್ನು ರಾತ್ರಿ ನೀರಲ್ಲಿ ನೆನೆಸಿ ಬೆಳಗ್ಗೆ ಖಾಲಿ ಹೊಟ್ಟೆಗೆ ಸೇವಿಸಿದರೆ ತಲೆ ಸುತ್ತು ನಿವಾರಣೆಯಾಗುತ್ತದ್ಥೆ.