ಪುಣೆ: ಇನ್ನುಮುಂದೆ ಪುಣೆ(Pune)ಯಲ್ಲಿರುವ ಬಿಕ್ಷುಕರು ಹಾಗೂ ಸೂರಿಲ್ಲದೆ ಅಲೆದಾಡುವವರು ವೈದ್ಯಕೀಯ ಚಿಕಿತ್ಸೆ ಬಗ್ಗೆ ಚಿಂತೆ ಪಡುವ ಅಗತ್ಯವಿಲ್ಲ. ಏಕೆಂದರೆ ಅವರಿಗೆ ಅಗತ್ಯವಾದ ಉಚಿತ ಔಷದೋಪಚಾರ, ವಾರಕ್ಕೊಮ್ಮೆ ಉಚಿತ ಆರೋಗ್ಯ ತಪಾಸಣೆ ಮತ್ತು ಅಗತ್ಯ ಚಿಕಿತ್ಸೆಗಳನ್ನು ಅವರಿದ್ದಲ್ಲಿಯೇ ಪಡೆಯಬಹುದಾಗಿದೆ. ಇವಷ್ಟೇ ಅಲ್ಲದೆ ಅಗತ್ಯವಿದ್ದಲ್ಲಿ ವಿಶೇಷ ಆರೈಕೆಯ ಜೊತೆಗೆ ಶಸ್ತ್ರಚಿಕಿತ್ಸೆ ನೀಡಿ, ಆಸ್ಪತ್ರೆಯಲ್ಲಿ ಆಗುವ ವೆಚ್ಚವನ್ನು ಬರಿಸಲು ಮುಂದಾಗಿದ್ದಾರೆ ಒಬ್ಬ ವೈದ್ಯರು.
ಹೌದು. ಕಳೆದ ಕೆಲ ವರ್ಷಗಳಿಂದ ಇಂತಹ ಮಹಾನ್ ಕಾರ್ಯದಲ್ಲಿ ತೊಡಗಿರುವವರೇ ಪುಣೆ(Pune)ಯ ವೈದ್ಯ ಡಾ. ಅಭಿಜಿತ್ ಸೋನವಾನೆ. ತಮ್ಮ ಕುಟುಂಬಗಳಿಗೆ ಬೇಡವಾಗಿ, ಬೀದಿಗೆ ಬಿದ್ದು ನೆಲೆಗಾಗಿ ಅಲೆದಾಡುತ್ತಿರುವವರನ್ನು ರಕ್ಷಿಸಿ ಅವರ ಆರೈಕೆ ಮಾಡುವುದೇ ತನ್ನ ಕರ್ತವ್ಯವೆಂದು ಭಾವಿಸಿ ಇವರ ಸೇವೆಯಲ್ಲಿ ತೊಡಗಿದ್ದಾರೆ.
ಸೋನವಾನೆ ಈ ಸೇವೆಗೆ ಕಾರಣವೂ ಇದೆ. ಕೆಲ ವರ್ಷಗಳ ಹಿಂದೆ ವೈದ್ಯ ವೃತ್ತಿ ಆರಂಭಿಸಿದ್ದ ಸೋನವಾನೆರವರು ಹಳ್ಳಿಯೊಂದರಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದರು. ಈ ವೇಳೆ ಅವರ ಬಳಿ ಹಣವಿರಲಿಲ್ಲ, ಯಾವ ಆಸ್ಪತ್ರೆಯಲ್ಲು ವೈದ್ಯನಾಗಿ ಕೆಲಸ ನಿರ್ವಹಿಸುತ್ತಿರಲಿಲ್ಲ. ಮನೆಗಳಿಗೆ ತೆರಳಿ ಬಾಗಿಲು ತಟ್ಟಿ ಮನೆಯಲ್ಲಿ ಯಾರಾದರು ರೋಗಿಗಳಿದ್ದಾರೆ ಎಂದು ಕೇಳುತ್ತಿದ್ದೆ. ಮುಂದೆ ತನ್ನ ಧ್ಯೇಯೋದ್ದೇಶವನ್ನ ಕಳೆದುಕೊಂಡಿದ್ದೆ. ಹಾಗೂ ದಾರಿ ತಪ್ಪಿದ್ದೆ. ನಂತರ ಒಂದು ಬಿಕ್ಷುಕರ ಕುಟುಂಬವನ್ನು ಭೇಟಿಯಾದದ್ದು ನನ್ನ ಜೀವನದ ಗುರಿಯನ್ನು ಕಂಡುಕೊಳ್ಳಲು ಸಾಧ್ಯವಾಯಿತು. ಹೀಗಾಗಿ ನಾನು ಆರ್ಥಿಕವಾಗಿ ಸದೃಡನಾದಾಗ ನನ್ನ ಗುರಿ ಸಾಧನೆಗೆ ಕಾರಣರಾದ ಬಿಕ್ಷುಕರಿಗೆ ಸಹಾಯ ಮಾಡಬೇಕೆಂದು ನಿರ್ಧರಿಸಿ ಈ ಸೇವೆ ಮಾಡುತ್ತಿದ್ದೇನೆ ಎನ್ನುತ್ತಾರೆ ಸೋನವಾನೆ.
ಸೋಮವಾರದಿಂದ ಶನಿವಾರದವರಗೆ ಪ್ರತಿದಿನ ಬೆಳಗ್ಗೆ 10 ಗಂಟೆಗೆ ಆರಂಭವಾಗುವ ಇವರ ಸೇವಾ ಕಾರ್ಯ ಸಂಜೆ 3 ಗಂಟೆಯವರೆಗೆ ನಡೆಯುತ್ತದೆ. ತಮ್ಮ ವೈದ್ಯಕೀಯ ಸಲಕರೆಣೆಗಳನ್ನ ಹೊತ್ತು ಹೊರಡುವ ಇವರು ಊರಿನ ಧಾರ್ಮಿಕ ಸ್ಥಳಗಳಿಗೆ ತೆರಳಿ ಅಲ್ಲಿನ ಜನರೊಂದಿಗೆ ಬೆರೆಯುತ್ತಾರೆ. ಈ ವೇಳೆ ಅವರ ಕಷ್ಟಗಳಿಗೆ ಸ್ಪಂದಿಸಿ ಆರೋಗ್ಯ ತಪಾಸಣೆ ಮಾಡುತ್ತಾರೆ. ಒಂದು ವೇಳೆ ರೋಗಿಗಳ ಆರೋಗ್ಯ ಸ್ಥಿತಿ ಗಂಭೀರವಾಗಿದ್ದರೆ ಅವರನ್ನು ಆಸ್ಪತ್ರೆಗೆ ದಾಖಲಿಸುತ್ತಾರೆ. ಕುತೂಹಲಕಾರಿಯ ವಿಷಯ ಅಂದರೆ ಸೋನವಾನೆ ಅವರು ‘ಬಿಕ್ಷುಕರಿಗಾಗಿ ಈ ವೈದ್ಯ‘ ಎಂದು ತಮ್ಮ ಬೆನ್ನ ಹಿಂದೆ ಬರೆದುಕೊಂಡಿದ್ದಾರೆ.
ದೇವಸ್ಥಾನ, ಚರ್ಚ್, ಮಸೀದಿ ಹೀಗೆ ಬಿಕ್ಷುಕರು ನಗರದಲ್ಲಿ ಎಲ್ಲೇ ಇದ್ದರು ಅವರನ್ನು ಭೇಟಿಯಾಗುತ್ತಾರೆ. ವಾರದ ವಿಶೇಷ ದಿನಗಳಲ್ಲಿ ದೇವಸ್ಥಾನ, ಚರ್ಚ್, ಮಸೀದಿಗಳ ಬಳಿ ಸೇರುವ ಅಂಗವಿಕಲರು ಹಾಗೂ ವಯಸ್ಸಾದವರಿಗಾಗಿ ಚಿಕಿತ್ಸೆ ನೀಡುವುದಕ್ಕಾಗಿಯೇ ಅವರ ಇರುವಿಕೆಯ ಆಧಾರದ ಮೇಲೆ ಒಂದು ಪಟ್ಟಿಯನ್ನು ಸಿದ್ದಪಡಿಸಿಕೊಂಡಿದ್ದಾರೆ. ಪ್ರತಿದಿನ ಅವರವರ ಸರದಿ ಬಂದಾಗ ಆಯಾ ಸ್ಥಳಗಳಿಗೆ ತೆರಳಿ ಚಿಕಿತ್ಸೆ ನಿಡುತ್ತಾರೆ. ಅಧಿಕ ಜನರು ಸೇರುವ ಧಾರ್ಮಿಕ ಸ್ಥಳಗಳನ್ನು ಗುರುತಿಸುವ ಕೆಲಸವನ್ನು ಸೋಹಮ್ ಟ್ರಸ್ಟ್ ಮಾಡುತ್ತಿದೆ.
ಪಟ್ಟಿಯಲ್ಲಿರುವಂತೆ ಸೋಮವಾರ ಶಿವ ದೇವಸ್ಥಾನದ ಹೊರಗೆ, ಮಂಗಳವಾರ ದೇವಿ ದೇವಸ್ಥಾನ, ಬುಧವಾರ ಗಣಪತಿ ದೇವಸ್ಥಾನ, ಗುರುವಾರ ಸಾಯಿ ಬಾಬಾ ದೇವಸ್ಥಾನ, ಶುಕ್ರವಾರ ಮಸೀದಿ ಮತ್ತು ಶನಿವಾರದಂದು ಮಾರುತಿ ದೇವಸ್ಥಾನಕ್ಕೆ ತಮ್ಮನ್ನು ಮೀಸಲಾಗಿಸಿಕೊಂಡಿದ್ದಾರೆ.
ಇನ್ನು ತಮ್ಮ ಸೇವೆಯ ಬಗ್ಗೆ ಮಾತನಾಡುವ ಡಾ. ಅಭಿಜಿತ್ ಸೋನವಾನೆ, ‘ನಾವು ಅವರ ಸಂಪರ್ಕವನ್ನು ಸಾಧಿಸಿದ್ದೇವೆ. ನಾನು ಅವರಿಗೆ ಗೊತ್ತು, ಅವರು ನನಗೆ ಗೊತ್ತು. ನನ್ನ ಗುರಿ ಏನೆಂದರೆ ಅವರನ್ನು ಬಿಕ್ಷೆ ಬೇಡುವುದರಿಂದ ಬಿಡಿಸಿ ದುಡಿದು ತಿನ್ನುವಂತೆ ಮಾಡಬೇಕು. ನನ್ನ ಟ್ರಸ್ಟ್ ನಿಂದ ಅವರಿಗೆ ಹಣದ ಸಹಾಯವನ್ನು ಹೊದಗಿಸುತ್ತಿದ್ದೇನೆ. ಇದು ಅವರಿಗೆ ಉತ್ತಮ ಜೀವನವನ್ನು ರೂಪಿಸಿಕೊಳ್ಳಲು ಸಹಾವಾಗುತ್ತದೆ’ ಎಂದು ತಮ್ಮ ಮಹತ್ವಾಕಾಂಕ್ಷೆಯನ್ನು ವ್ಯಕ್ತಿಪಡಿಸಿದ್ದಾರೆ.
ಇನ್ನು ಇವರ ಸೇವೆಗಳಿಗೆ ಕೃತಜ್ಞರಾಗಿರುವ ರೋಗಿಗಳು ನಮ್ಮನ್ನು ರಕ್ಷಿಸಲು ಬಂದಿರುವ “ದೇವತೆ” ಎಂದು ಪ್ರಶಂಸಿಸಿದ್ದಾರೆ. ಆದರೆ ಸೋನವಾನೆಯವರು ಇವರಿಂದ ಇನ್ನು ಹೆಚ್ಚಿನದನ್ನು ಬಯಸುತ್ತಾರೆ. ನಾನು ಎಲ್ಲರಲ್ಲು ಕೇಳಿಕೊಳ್ಳುವುದು ಒಂದೇ. ಇವರನ್ನೂ ಮಾನವರಂತೆ ಕಾಣಿ. ಅವರಿಗೆ ಹಣ ನೀಡಿ ಇನ್ನೊಬ್ಬರನ್ನು ಅವಲಂಬಿಸುವಂತೆ ಮಾಡಬೇಡಿ. ಇದರ ಬದಲಾಗಿ ಅವರಿಗೆ ಕೆಲಸ ಪಡೆಯಲು ಸಹಾಯ ಮಾಡಿ ಎಂದು ಕೇಳಿಕೊಳ್ಳುತ್ತಾರೆ.
A doctor in Pune treats homeless and beggars for free Cost. Dr Abhijeet Sonawane provides weekly checkups and free medicine to the sick and homeless on the streets of Pune.