ಅಕಾಲಿಕ ಮಳೆ ಸಂದರ್ಭಗಳಲ್ಲಿ ರೈತರು ಜಮೀನಿನಲ್ಲಿ ಬೆಳೆಯುವ ಬೆಳೆಗಳಿಗೆ ನೀರು ಪೂರೈಸಲು ಸಮಸ್ಯೆ ಎದುರಿಸುವುದು ಸಾಮಾನ್ಯವಾಗಿಬಿಟ್ಟಿದೆ. ಅಲ್ಲದೇ. ರೈತರ ಇಂತಹ ಸಮಸ್ಯೆ ಬಗೆಹರಿಸಲು ಹನಿ ನೀರಾವರಿಯನ್ನು ಕೃಷಿಯಲ್ಲಿ ಅಳವಡಿಸಿಕೊಳ್ಳುವುದು ಉತ್ತಮವಾದ ನಿರ್ಧಾರ.
ಆದರೆ ಕೆಲವು ರೈತರು ಅಯ್ಯೋ ಹನಿನೀರಾವರಿ ಅಳವಡಿಸಲು ಹಣ ಎಲ್ಲಿಂದ ತರುವುದು ಎಂದು ತಲೆ ಮೇಲೆ ಕೈಯಿಡುವುದೇ ಹೆಚ್ಚು. ಆದ್ದರಿಂದ ರೈತರ ಸಮಸ್ಯೆಯನ್ನು ಅರಿತಿರುವ ಸರ್ಕಾರ ರೈತರು ತಮ್ಮ ಜಮೀನಿನಲ್ಲಿ ಅಳವಡಿಸುವ ಹನಿ ನೀರಾವರಿಗಾಗಿ ಸಹಾಯಧನವನ್ನು ನೀಡುತ್ತದೆ. ಇಂತಹ ಸೌಲಭ್ಯ ಪಡೆಯಲು ರೈತರು ತಮ್ಮ ಹತ್ತಿರವ ರೈತ ಸಂಪರ್ಕ ಕೇಂದ್ರ ಹಾಗೂ ಕೃಷಿ ಇಲಾಖೆಗಳಲ್ಲಿ ಭೇಟಿ ನೀಡಿ ಕೆಳಗಿನ ದಾಖಲೆಗಳನ್ನು ನೀಡಬೇಕು.
ಹನಿ ನೀರಾವರಿ ಸೌಲಭ್ಯಕ್ಕಾಗಿ ಸರ್ಕಾರದ ಅನುದಾನ ಪಡೆಯಲು ಲಗತ್ತಿಸಬೇಕಾದ ದಾಖಲೆಗಳು ಈ ಕೆಳಗಿನಂತಿವೆ..
-ಪ್ರಸ್ತುತ ವರ್ಷದ ಆರ್.ಟಿ.ಸಿ
– ಇತ್ತೀಚೆಗೆ ತೆಗೆಸಿದ ಫೋಟೋ(ಭಾವಚಿತ್ರ) 2
– ಆಧಾರ್ ಕಾರ್ಡ್ ಜೆರಾಕ್ಸ್ ಪ್ರತಿ
– ಚುನಾವಣಾ ಗುರುತಿನ ಚೀಟಿಯ ಜೆರಾಕ್ಸ್ ಪ್ರತಿ
– ರೇಷನ್ ಕಾರ್ಡ್ ಜೆರಾಕ್ಸ್ ಪ್ರತಿ
– ಬ್ಯಾಂಕ್ ಪಾಸ್ ಪುಸ್ತಕ ಜೆರಾಕ್ಸ್ ಪ್ರತಿ
– ಕೃಷಿ/ತೋಟಗಾರಿಕೆ/ ರೇಷ್ಮೆ ಇಲಾಖೆಯಿಂದ NOC(Non objection certificate) ಸರ್ಟಿಫಿಕೇಟ್
– ಜಮೀನಿನ ಚೆಕ್ಕುಬಂದಿ ಜೆರಾಕ್ಸ್ ಪ್ರತಿ
– ಪ್ರಸ್ತುತ ವರ್ಷದ ಬೆಳೆ ದೃಢೀಕರಣ ಸರ್ಟಿಫೀಕೇಟ್
– ಕೊಳವೆ ಬಾವಿ ದೃಢೀಕರಣ
– 20 ರೂ ಗಳ ಛಾಪಾ ಕಾಗದಗಳು – 2
These are the documents to be submitted for Government grant funds for drip irrigation facility.