ನೀಟಾಗಿ ಕ್ಲೀನಾಗಿ ಶೇವ್ ಮಾಡಿದರೆ ಎಲ್ಲರಿಗೂ ಇಷ್ಟವಾಗುತ್ತದೆ ಎಂಬುದು ಹಳೆ ಟ್ರೆಂಡ್. ಈಗಿನ ಹೊಸ ಟ್ರೆಂಡ್ ಅಂದರೆ ಸಖತ್ ಸ್ಟೈಲಿಶ್ ಗಡ್ಡ(Beard) ಬಿಡುವುದು. ಯುವಕರು, ಕಾಲೇಜು ಹುಡುಗರು ಇಂದು ವಿಭಿನ್ನ ರೀತಿಯ ಗೆಟಪ್’ಗಳನ್ನು ಬಿಡುತ್ತಾರೆ. ಕ್ಲೀನ್ ಶೇವ್ ಮಾಡಿದ ಚಾಕೊಲೇಟ್ ಬಾಯ್’ರನ್ನು ಇಷ್ಟಪಡುತ್ತಿದ್ದ ಹುಡುಗಿಯರು ಸಹ ವಿಭಿನ್ನ ರೀತಿಯ ಗಡ್ಡ ಬಿಡುವವರನ್ನು ತುಂಬಾ ಇಷ್ಟ ಪಡುವುದುಂಟು.
ಇನ್ನು ಬಹಳಷ್ಟು ಮಂದಿ ತಮ್ಮ ಗಡ್ಡವನ್ನು ವಿಭಿನ್ನ ರೂಪಗಳನ್ನು ಸೃಷ್ಟಿಸಲು ತವಕ ಪಡುತ್ತಾರೆ. ಇದಕ್ಕೆ ದಪ್ಪನೆಯ ಗಡ್ಡ(Beard) ಇಲ್ಲದಿದ್ದರೆ ಆಗುವುದಿಲ್ಲ. ಕೆಲವರು ಎಷ್ಟೇ ಪ್ರಯತ್ನ ಪಟ್ಟರು ಗಡ್ಡ ಸರಿಯಾಗಿ ಬೆಳೆಯುವುದೇ ಇಲ್ಲ. ಹಾಗಾಗಿ ಗಡ್ಡ ಸರಿಯಾಗಿ ಬಂದರಷ್ಟೇ ಇದೆಲ್ಲಾ ಸಾಧ್ಯ. ಆದ್ದರಿಂದ ಗಡ್ಡ ಚೆನ್ನಾಗಿ ಬೆಳೆಯಬೇಕಂದ್ರೆ ಏನು ಮಾಡ್ಬೇಕು ಗೊತ್ತಾ..? ಇಂದು ಕನ್ನಡ ಅಡ್ವೈಜರ್ ಸುಂದರವಾದ ಗಡ್ಡ ಬೆಳೆಯಲು ಏನು ಮಾಡಬೇಕು ಎಂಬುದರ ಬಗ್ಗೆ ತಿಳಿಸಿಕೊಡಲಿದೆ.
11 ಸಲಹೆಗಳು:
- ಪ್ರತಿದಿನ ಈರುಳ್ಳಿ ರಸವನ್ನು ಗಡ್ಡಕ್ಕೆ ಹಚ್ಚಿ ಮಸಾಜ್ ಮಾಡಿ 30 ನಿಮಿಷ ಬಿಟ್ಟು ತೊಳೆಯಿರಿ. ಇದರಿಂದ ಉತ್ತಮ ಫಲಿತಾಂಶ ದೊರೆಯುತ್ತದೆ.
- ಹರಳೆಣ್ಣೆ ಅಥವಾ ಕೊಬ್ಬರಿ ತೈಲವನ್ನು ಬೆಚ್ಚಗಾಗಿಸಿ ನಿಮ್ಮ ಗಡ್ಡಕ್ಕೆ ಹತ್ತು ನಿಮಿಷ ಚೆನ್ನಾಗಿ ಮಸಾಜ್ ಮಾಡಬೇಕು. ಹರಳೆಣ್ಣೆಯಿಂದ ಮಸಾಜ್ ಮಾಡುವುದರಿಂದ ರಕ್ತ ಸಂಚಾರ ಹೆಚ್ಚಾಗಿ ಗಡ್ಡ ಬೆಳೆಯಲು ಸಹಕರಿಸುತ್ತದೆ.
- ಉತ್ತಮವಾದ ವಿಟಮಿನ್ ಅಂಶಗಳನ್ನು ಒಳಗೊಂಡಿರುವ ಆಹಾರವನ್ನು ಸೇವನೆ ಮಾಡಿ. ಒಂದು ದಿನಕ್ಕೆ ಕನಿಷ್ಠ 3 ರಿಂದ 4 ಲೀಟರ್ ನೀರನ್ನು ಕೂಡಿಯಲೇ ಬೇಕು.
- ಪ್ರತಿದಿನ 2.5 ಮಿ.ಗ್ರಾಂ ಬಯೋಟೀನ್ ಅನ್ನ ಸೇವಿಸಿ. ಕೂದಲ ಬೆಳವಣಿಗೆಗೆ ಬಯೋಟಿನ್ ಮುಖ್ಯ. ಅದುವೇ ಜೀವಸತ್ವ B7 ನಲ್ಲಿ ಇರುತ್ತದೆ.
- ಗಡ್ಡವು ಚೆನ್ನಾಗಿ ಬೆಳೆಯಬೇಕೆಂದರೆ ನೀವು ಚೆನ್ನಾಗಿ ನಿದ್ದೆ ಮಾಡಬೇಕು. ಸರಿಯಾದ ನಿದ್ದೆ ಮಾಡಬೇಕು. ಹೆಚ್ಚು ಒತ್ತಡದಿಂದ ಇರಬಾರದು. ಮನಸ್ಸು ಮತ್ತು ದೇಹ ವಿಶ್ರಾಂತಿಯಿಂದ ಇರಬೇಕು.
- ಆಗಾಗ ಗಡ್ಡ ಬೋಳಿಸುತ್ತಾ ಇರಿ. ಹೀಗೆ ಮಾಡುವುದರಿಂದ್ದ ನಿಮ್ಮ ಕೂದಲು ಚೆನ್ನಾಗಿ ಬೆಳೆಯುತ್ತೆ. ಹೀಗೆ ನೀವು ನಾಲ್ಕೈದು ಸಲ ಮಾಡಿದ ಮೇಲೆ ನಾಲ್ಕರಿಂದ ಆರು ವಾರಗಳ ಕಾಲ ಗಡ್ಡ ಬೆಳೆಯುವುದಕ್ಕೆ ಬಿಟ್ಟು ಬಿಡಿ.
- ಕೂದಲನ್ನು ಸ್ವಚ್ಛಗೊಳಿಸಿ. ವಾರದಲ್ಲಿ ಎರಡು ಅಥವಾ ಮೂರು ಬಾರಿ ನಿಮ್ಮ ಗಡ್ಡದ ಮೇಲೆ ಮೈಲ್ಡ್ ಶಾಂಪೂ ಬಳಸಿ. ಶ್ಯಾಂಪೂ ಹಾಕಿದ ನಂತರ ಸ್ವಲ್ಪ ಕಂಡಿಷನರ್ ಬಳಸಿ.
- ಒಂದರಿಂದ ಒಂದೂವರೆ ಇಂಚು ಕೂದಲು ಬೆಳೆದ ಮೇಲೆ ಶೇಪ್ ಮಾಡೋಕೆ ಶುರು ಮಾಡಿ. ಆಗ ಚೆನ್ನಾಗಿ ಗಡ್ಡ ಬೆಳೆಯುತ್ತೆ.
- ನಿಯಮಿತವಾಗಿ ಟ್ರಿಮ್ ಮಾಡುವುದು ಒಳ್ಳೆಯದಲ್ಲ. ಆರು ವಾರಕ್ಕೊಮ್ಮೆ ನಿಮ್ಮ ಗಡ್ಡವನ್ನು ಟ್ರಿಮ್ ಮಾಡಿ ಸಾಕು. ಇದರಿಂದ ನಿಮ್ಮ ಗಡ್ಡ ಚೆನ್ನಾಗಿ ಬೆಳೆಯಲು ಸಮಯ ದೊರೆಯುತ್ತದೆ.
- ಗಡ್ಡ ಬೆಳೆಯುತ್ತಿರುವಾಗ ತುಂಬಾ ಚಿಕ್ಕದು ಚೆನ್ನಾಗಿ ಕಾಣುವುದಿಲ್ಲ ಎಂದು ತೆಗೆಯಬೇಡಿ. ಅದನ್ನು ಬೆಳೆಯಲು ಬಿಡಿ ಗಡ್ಡ ದಟ್ಟವಾಗಿ ಬೆಳೆಯುತ್ತದೆ ನಂತರ ನಿಮಗೆ ಬೇಕಾದ ರೀತಿಯ ಆಕಾರ ಮಾಡಿಸಿಕೊಳ್ಳಬಹುದು.
- ಗಡ್ಡ ಬೆಳೆದ ನಂತರ ಅದಕ್ಕೆ ಉತ್ತಮವಾದ ಆರೈಕೆ ಮಾಡುತ್ತಾ ಬಂದರೆ ಉತ್ತಮ ಗಡ್ಡವನ್ನು ನೀವು ಬೆಳೆಸಬಹುದು. ಅದರಿಂದ ನೀವು ಇದನ್ನು ಪ್ರಯತ್ನಿಸಿ ಗಡ್ಡ ಬೆಳೆಸಿ.
The old trend is that everyone likes to shave cleanly. The current new trend is leave different types of Beard. Young boys, college boys today leave different Beard. Some men are blessed with fast-growing facial hair, while others may struggle with slow-growing. what should do to grow beard: Easy Ways to Grow a Beard