Home » ಕಾರ್ಮಿಕರ ರಾಜ್ಯ ವಿಮಾ ನಿಗಮ (ESIC) ನೇಮಕಾತಿ: ಅರ್ಜಿಗೆ ಏ.15 ಕೊನೆ ದಿನ

ಕಾರ್ಮಿಕರ ರಾಜ್ಯ ವಿಮಾ ನಿಗಮ (ESIC) ನೇಮಕಾತಿ: ಅರ್ಜಿಗೆ ಏ.15 ಕೊನೆ ದಿನ

by manager manager

ಕಾರ್ಮಿಕರ ರಾಜ್ಯ ವಿಮಾ ನಿಗಮವು ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ.

ಹುದ್ದೆ ಹೆಸರು: ಸ್ಟೆನೊಗ್ರಾಫರ್

ಹುದ್ದೆಗಳ ಸಂಖ್ಯೆ: 16

ವಿದ್ಯಾರ್ಹತೆ : ಅಂಗೀಕೃತ ಮಂಡಳಿಯಿಂದ ದ್ವಿತೀಯ ಪಿಯುಸಿ ಅಥವಾ ತತ್ಸಮಾನ ಪಾಸಾಗಿರಬೇಕು.

– ಇಂಗ್ಲಿಷ್, ಹಿಂದಿ ಸ್ಟೆನೋಗ್ರಫಿ ನಿಮಿಷಕ್ಕೆ 80 ಪದಗಳ ಟೈಪಿಂಗ್ ಮಾಡಬೇಕು.

ಹುದ್ದೆ ಹೆಸರು: ಅಪ್ಪರ್ ಡಿವಿಜನ್ ಕ್ಲರ್ಕ್

ಹುದ್ದೆಗಳ ಸಂಖ್ಯೆ: 143

ವಿದ್ಯಾರ್ಹತೆ : ಪದವಿ ಅಥವಾ ತತ್ಸಮಾನ ವಿದ್ಯಾರ್ಹತೆ ಪಾಸ್ ಆಗಿರಬೇಕು. ಜೊತೆಗೆ ಈ ಎರಡು ಹುದ್ದೆಗಳಿಗೆ ಅನ್ವಯಿಸುವಂತೆ ಕಂಪ್ಯೂಟರ್ ಜ್ಞಾನ (ಆಫೀಸ್ ಸೂಟ್ಸ್, ಡೇಟಾ ಬೇಸ್ ಜ್ಞಾನ) ಹೊಂದಿರಬೇಕು.

ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 15-04-2019

ಅರ್ಜಿ ಸಲ್ಲಿಕೆ ವಿಧಾನ

ಈ ಮೇಲ್ಕಂಡ ಹುದ್ದೆಗಳ ಆಸಕ್ತ ಅಭ್ಯರ್ಥಿಗಳು ESIC ಅಧಿಕೃತ ವೆಬ್‌ಸೈಟ್ www.esic.nic.in ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬೇಕು.

ಅರ್ಜಿ ಶುಲ್ಕ ಎಷ್ಟು?

ಸಾಮಾನ್ಯ ವರ್ಗಗಳ ಅಭ್ಯರ್ಥಿಗಳಿಗೆ : ರೂ 500

ಪ್ರವರ್ಗ 2ಎ/2ಬಿ/3ಎ/3ಬಿ ಅಭ್ಯರ್ಥಿಗಳಿಗೆ : ರೂ.500

ಮಾಜಿ ಸೈನಿಕ/ಅಂಗವಿಕಲ/ಮಹಿಳಾ ಅಭ್ಯರ್ಥಿಗಳಿಗೆ : ರೂ.250

ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಪ್ರವರ್ಗ1/ : ರೂ.250

ಶುಲ್ಕ ಪಾವತಿಸುವ ವಿಧಾನ

– ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ಇಂಟರ್ನೆಟ್ ಬ್ಯಾಂಕಿಂಗ್, ಐಎಂಪಿಎಸ್, ಕ್ಯಾಷ್ ಕಾರ್ಡ್ಸ್, ಮೊಬೈಲ್ ವ್ಯಾಲೆಟ್ ಮೂಲಕ ಹಣ ಪಾವತಿಸಬಹುದು.

ವಯೋಮಿತಿ

ಅರ್ಜಿಸುವ ಕೊನೆಯ ದಿನಾಂಕದೊಳಗೆ ಕನಿಷ್ಟ 18 ವರ್ಷ ಗರಿಷ್ಟ 27 ವರ್ಷ.

ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಪ್ರವರ್ಗ1/: 5 ವರ್ಷ ಸಡಿಲಿಕೆ

ಪ್ರವರ್ಗ 2ಎ/ಬಿ/3ಎ/3ಬಿ : 3 ವರ್ಷ ಸಡಿಲಿಕೆ

ವೇತನ ಶ್ರೇಣಿ : ರೂ.25500(4ನೇ ಶ್ರೇಣಿ ಹುದ್ದೆಗೆ- 7ನೇ ಸಿಪಿಸಿ ಅನುಸಾರ)

ಆಯ್ಕೆ ವಿಧಾನ: ಸ್ಪರ್ಧಾತ್ಮಕ ಪರೀಕ್ಷೆ ಮೂಲಕ.

ಅರ್ಜಿ ಸಲ್ಲಿಸಲು ಮತ್ತು ಇತರೆ ಹೆಚ್ಚಿನ ಮಾಹಿತಿಗೆ – ಕ್ಲಿಕ್ ಮಾಡಿ

ಸಹಾಯವಾಣಿ : 080-26742485

You may also like