ಇಂದಿನ ಲೇಖನದಲ್ಲಿ ಕನ್ನಡ ಅಡ್ವೈಜರ್ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಓದುತ್ತಿರುವ ಸ್ಪರ್ಧಾಮಿತ್ರರಿಗೆ ಸಹಾಯಕವಾಗುವಂತಹ, ಭಾರತದ ಪ್ರಮುಖ ಐತಿಹಾಸಿಕ ಶಾಸನಗಳ ಮಾಹಿತಿಯನ್ನು ನೀಡಿದೆ. ಆ ಪ್ರಮುಖ ಐತಿಹಾಸಿಕ ಶಾಸನಗಳು ಈ ಕೆಳಗಿನಂತಿವೆ.
ಭಾರತದ ಪ್ರಮುಖ ಐತಿಹಾಸಿಕ ಶಾಸನಗಳು ಮತ್ತು ಅದರ ಕರ್ತೃಗಳು
- ಸಮುದ್ರಗುಪ್ತನ ಅಲಹಾಬಾದ್ ಶಾಸನದ ಕರ್ತೃ -ಹರಿಷೇಣ
- ಸಮುದ್ರಗುಪ್ತನನ್ನು ನೂರು ಕದನಗಳ ಸಿಂಹ ಎಂದು ಸಂಭೋದಿಸಿದ ಶಾಸನ – ಅಲಹಾ ಬಾದ್ ಸ್ತಂಭ ಶಾಸನ
- ಅಲಹಾಬಾದ್ ಸ್ತಂಭ ಶಾಸನ ಮೊದಲು ಇದ್ದ ಪ್ರದೇಶ – ಕೌಸಂಬಿ
- ಅಲಹಾಬಾದ್ ಸ್ತಂಭ ಶಾಸನವನ್ನು ಕೌಸಂಬಿಯಿಂದ ಅಲಹಾಬಾದಿಗೆ ಸಾಗಿಸಿದ ತುಘಲಕ್ ದೊರೆ – ಫೀರೋಜ್ ಷಾ ತುಘಲಕ್
- ದೆಹಲಿಯಲ್ಲಿರುವ ಗುಪ್ತರ ಕಾಲದ ಸ್ತಂಭ ಶಾಸನ – ಮೆಹ್ರೋಲಿ ಕಂಬ್ಬಿಣದ ಸ್ತಂಭ ಶಾಸನ
- ಫಿರೋಜ್ ಷಾ ತುಘಲಕ್, ದೆಹಲಿಗೆ ರವಾನಿಸಿದ ಅಶೋಕನ ಶಿಲಾಶಾಸನಗಳು – ಮಿರತ್ ಶಾಸನ ಹಾಗೂ ತೋಪ್ರ ಶಾಸನ
- ಗ್ರೀಕ್ ಹಾಗೂ ಅರೇಬಿಕ್ ಭಾಷೆಗಳಲ್ಲಿರುವ ಅಶೋಕನ ಶಾಸನಗಳು ಇರುವ ಪ್ರದೇಶ – ಕಂದಾಹಾರ್
- ಗಿರ್ನಾರ್ ಹಾಗೂ ಜುನಾಗಡ್ ಶಾಸನದ ಕರ್ತೃ – ರುದ್ರದಾಮನ್
- ಸುದರ್ಶನ ಕೆರೆಯ ಇತಾಹಾಸದ ಮೇಲೆ ಬೆಳಕು ಚೆಲ್ಲುವ ಶಾಸನಗಳು – ರುದ್ರದಾಮನ್ ಹಾಗೂ ಸ್ಕಂದ ಗುಪ್ತನ ಶಾಸನಗಳು
- ತೆಲುಗಿನ ಪ್ರಥಮ ಶಾಸನ – ಕಲಿಮಲ್ಲ ಶಾಸನ
- ತಮಿಳಿನ ಪ್ರಥಮ ಶಾಸನ – ಮಾಂಗುಳಂ ಶಾಸನ
- ಶಾಸನಗಳ ಪಿತಾಮಹಾ ಶಾಸನಗಳ ರಾಜ. ಸ್ವಕಥನಗಾರ ಎಂದು ಖ್ಯಾತಿವೆತ್ತ ಮೌರ್ಯ ಅರಸ – ಅಶೋಕ
- ಅಶೋಕನ ಶಾಸನಗಳು ಈ ಲಿಪಿಯಗಳಲ್ಲಿ ಲಭ್ಯವಾಗಿದೆ – ಬ್ರಾಹ್ಮಿ ಹಾಗೂ ಖರೋಷ್ಠಿ
- ಕಳಿಂಗ ಯುದ್ಧದ ಬಗೆಗೆ ಬೆಳಕು ಚೆಲ್ಲುವ ಅಶೋಕನ ಶಾಸನ – 13 ನೇ ಶಿಲಾ ಶಾಸನ
- ಅಶೋಕನ ಶಾಸನವನ್ನು ಮೊಟ್ಟ ಮೊದಲು ಓದಿದವರು – 1837 ರಲ್ಲಿ ಈಸ್ಟ್ ಇಂಡಿಯಾ ಕಂಪೆನಿಯ ಜೇಮ್ಸ್ ಪ್ರಿನ್ಸಸ್
- ಅಶೋಕನನ್ನು ಪ್ರಿಯದರ್ಶಿ ಅಶೋಕ ಎಂದು ಸಂಭೋದಿಸಿಲಾದ ಶಾಸನ – ಮಸ್ಕಿ ಶಾಸನ
- ಮಸ್ಕಿ ಶಾಸನ ಪ್ರಸ್ತುತ ಈ ಜಿಲ್ಲೆಯಲ್ಲಿದೆ – ಕೊಪ್ಪಳ
- ಅಶೋಕನನ್ನು ರಾಜ ಅಶೋಕ , ದೇವನಾಂಪ್ರಿಯ ಎಂಬ ಹೆಸರುಗಳಿಂದ ಸಂಭೋಧಿಸಲಾದ ಶಾಸನ – ಬಳ್ಳಾರಿ ಜಿಲ್ಲೆಯ ನಿಟ್ಟೂರು ಶಾಸನ
- ನಿಟ್ಟೂರಿನ ಶಾಸನದ ರಚನಾಕಾರ – ಉಪಗುಪ್ತ
- ನಿಟ್ಟೂರಿನ ಶಾಸನದ ಲಿಪಿಕಾರ – ಚಡಪ
- ಸಾರಾನಾಥದ ಅಶೋಕನ ಸ್ತಂಭವನ್ನು ಭಾರತ ಸರ್ಕಾರ ರಾಷ್ಟ್ರೀಯ ಲಾಂಛನವನ್ನಾಗಿ ಅಳವಡಿಸಿಕೊಂಡ ವರ್ಷ – 1950ರಲ್ಲಿ
- ಸಾರಾನಾಥದ ಸ್ಥೂಪದ ಕೆಳಭಾಗದಲ್ಲಿ ಸತ್ಯ ಮೇವ ಜಯತೆ ಎಂಬ ಹೇಳಿಕೆಯನ್ನು ಈ ಲಿಪಿಯಲ್ಲಿ ಬರೆಯಲಾಗಿದೆ – ದೇವನಾಗರಿ
- ಅಶೋಕನು ಬೌದ್ಧಧರ್ಮವನ್ನು ಸ್ವೀಕರಿಸಿದ ಪರಿಯನ್ನು ತಿಳಿಸುವ ಶಾಸನ – ಬಬ್ರುಶಾಸನ
- ಮೊಟ್ಟ ಮೊದಲ ಭಾರಿಗೆ ಸಂಸ್ಕೃತದಲ್ಲಿ ಶಾಸನ ಬರೆಸಿದ ರಾಜ – ಶಕರ ಪ್ರಸಿದ್ದ ಅರಸ ರುದ್ರಧಮನ
- ಅಮೋಘವರ್ಷನು ಕೊಲ್ಲಾಪುರದ ಮಹಾಲಕ್ಷ್ಮೀಗೆ ತನ್ನ ಎಡಗೈ ಬೆರಳನ್ನು ಕತ್ತರಿಸಿ ಸಮರ್ಪಿಸಿದ ಬಗ್ಗೆ ತಿಳಿಸುವ ಶಾಸನ – ಸಂಜಾನ್ ದತ್ತಿ ಶಾಸನ
- ದಂತಿದುರ್ಗ – ಸಮನ್ ಗಡ್ ಹಾಗೂ ಎಲ್ಲೋರದ ಗುಹಾ ಶಾಸನ
- ಒಂದನೇ ಕೃಷ್ಣ – ಭಾಂಡ್ಕ ಮತ್ತು ತಾಳೇಗಾಂ ಶಾಸನ
- ಧೃವ – ಜೆಟ್ಟಾಯಿ ಶಾಸನ
- ಅಮೋಘವರ್ಷ – ಸಂಜಾನ್ ತಾಮ್ರ ಶಾಸನ
- ಬಾದಾಮಿ ಶಾಸನದ ಕರ್ತೃ – 1 ನೇ ಪುಲಿಕೇಶಿ
- ಮಹಾಕೂಟ ಸ್ತಂಭ ಶಾಸನದ ಕರ್ತೃ – ಮಂಗಳೇಶ
- ಮಹಾಕೂಟ ಸ್ತಂಭ ಶಾಸನ – ಬಾದಾಮಿಯ ಮಹಾಕೂಟೇಶ್ವರ ದೇವಲಾಯದಲ್ಲಿದೆ
- ರವಿ ಕೀರ್ತೀ – ಐಹೋಳೆ ಶಾಸನ
- ಐಹೋಳೆ ಶಾಸನ – ಮೇಗುತಿ ಜಿನ ದೇವಾಲಯದಲ್ಲಿ ಕೆತ್ತಲಾಗಿದೆ
- ಚಂದ್ರವಳ್ಳಿ ಶಾಸನದ ಕರ್ತೃ – ಮಯೂರವರ್ಮ (ಚಿತ್ರದುರ್ಗ)
- ಬ್ರಾಹ್ಮಿಲಿಪಿಯಲ್ಲಿರುವ ಪ್ರಪ್ರಥಮ ಸಂಸ್ಕೃತ ಶಾಸನ – ಚಂದ್ರವಳ್ಳಿ ಶಾಸನ.
- ಕರ್ನಾಟಕದ ಅತ್ಯಂತ ಪ್ರಾಚೀನ ಸಂಸ್ಕೃತ ಶಾಸನ – ಚಂದ್ರವಳ್ಳಿ ಶಾಸನ
- ಕನ್ನಡದ ಮೊಟ್ಟ ಮೊದಲ ಶಾಸನ – ಹಲ್ಮಿಡಿ ಶಾಸನ.
- ಹಲ್ಮಿಡಿ ಶಾಸನ ಇಲ್ಲಿ ಇರುವುದು – ಹಾಸನ ಜಿಲ್ಲೆ ಬೇಲೂರು ತಾಲೂಕಿನ ಹಲ್ಮಿಡಿ ಗ್ರಾಮ
- ಹಲ್ಮಿಡಿ ಶಾಸನದ ಕರ್ತೃ – ಕಾಕುಸ್ಥವರ್ಮ
- ತಾಳಗುಂದ ಶಾಸನದ ಕರ್ತೃ – ಕವಿ ಕುಬ್ಜ
- ತಾಳಗುಂದ ಶಾಸನವನ್ನು ಬರೆಯಿಸಿದವರು – ಶಾಂತಿ ವರ್ಮ (ಶಿವಮೊಗ್ಗ ದಲ್ಲಿದೆ)
- ಮಹಿಪವೊಲು ತಾಮ್ರ ಶಾಸನದ ಕರ್ತೃ – ಶಿವಸ್ಕಂದ ವರ್ಮ .
- ವಾಯಲೂರು ಸ್ತಂಭ ಶಾಸನದ ಕರ್ತೃ – ರಾಜ ಸಿಂಹ .
- ಕರ್ನಾಟಕದ ಸಂಗೀತವನ್ನು ತಿಳಿಸುವ ಮೊಟ್ಟ ಮೊದಲ ಶಾಸನ – 1ನೇ ಮಹೇಂದ್ರ ಮರ್ಮನ್ ನ “ಕುಡಿಮಿಯಾ ಮಲೈ ಶಾಸನ .”
- ನಾನಾ ಘಾಟ್ ಶಾಸನದ ಕರ್ತೃ – ನಾಗನೀಕ .
- ಗುಹಾಂತರ ನಾಸಿಕ್ ಶಾಸನದ ಕರ್ತೃ – ಗೌತಮೀ ಬಾಲಾಶ್ರೀ
- ವೆಳ್ವಕುಡಿ ತಾಮ್ರ ಶಾಸನದ ಕರ್ತೃ – ಪರಾಂತಕ ಚೋಳ
In this Article Kannadaadvisor giving Famous Inscriptions In India. study materials for competitive exam students. This information useful for Competitive exams Contestors.