Financial assistance to unemployed youths up to Rs 10 lakh from ‘Samrudhi’
ಸಮಾಜ ಕಲ್ಯಾಣ ಇಲಾಖಾ ವ್ಯಾಪ್ತಿಯಲ್ಲಿನ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮವು 2018-19 ನೇ ಸಾಲಿನಲ್ಲಿ ಸರ್ಕಾರದ ಆಯವ್ಯಯ ಘೋಷಣೆ ಅನುಸಾರ ಸಾಮಾಜಿಕ ಉದ್ಯಮಶೀಲತಾ ಅಭಿವೃದ್ಧಿ ಯೋಜನೆಯಡಿ ‘ಸಮೃದ್ಧಿ’ ಎಂಬ ನೂತನ ಯೋಜನೆಯನ್ನು ಅನಷ್ಟಾನಗೊಳಿಸಲಾಗುತ್ತಿದೆ.
ಈ ಯೋಜನೆಯಡಿ ಪರಿಶಿಷ್ಟ ಪಂಗಡದ ನಿರುದ್ಯೋಗಿ ಯುವಕ-ಯುವತಿಯರಿಗೆ ಸ್ವಯಂ ಉದ್ಯೋಗ ಆರಂಭಿಸಲು ಆರ್ಥಿಕ ನೆರವು ನೀಡಲು ಮುಂದಾಗಿದೆ.
ಈ ಆರ್ಥಿಕ ನೆರವಿನಿಂದ ಸ್ವಯಂ ಉದ್ಯೋಗ ಘಟಕಗಳನ್ನು ಮಾರುಕಟ್ಟೆಯಲ್ಲಿ ಪ್ರಸಿದ್ಧಿ ಪಡೆದಿರುವ ರೀಟೈಲ್ ವ್ಯವಹಾರದ ಕಂಪನಿಗಳ ಫ್ರಾಂಚೈಸಿ ಅಥವಾ ಡೀಲರ್ಶಿಪ್ ಪಡೆದು, ಆ ಕಂಪನಿಯ ರೀಟೈಲ್ ಮಳಿಗೆಗಳನ್ನು ಆರಂಭಿಸಲು ಅವಕಾಶವಿರುತ್ತದೆ.
ಈ ಯೋಜನೆಯಡಿ ಆನ್ಲೈನ್ನಲ್ಲಿ ಅರ್ಜಿಯನ್ನು ಆಹ್ವಾನಿಸಿದ್ದು, ಈ ಯೋಜನೆಗೆ ಅನುದಾನ ರೂಪದಲ್ಲಿ ರೂ.10, ಲಕ್ಷಗಳವರೆಗೆ ಆರ್ಥಿಕ ನೆರವನ್ನು ನೀಡಿ ಯೋಜನೆಯನ್ನು ಅನುಷ್ಟಾನಗೊಳಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಈ ಮೇಲಿನ ಯೋಜನೆಯಡಿ ಸೌಲಭ್ಯ ಪಡೆಯಲು ಆಸಕ್ತ ನಿರುದ್ಯೋಗಿಗಳು ದಿನಾಂಕ 10-12-2018 ರವರೆಗೆ ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಬಹುದು.
ಅರ್ಹ ಫಲಾನುಭವಿಗಳಿಗೆ ರೂ.10 ಲಕ್ಷ ರೂ ವರೆಗೂ ಧನ ಸಹಾಯ ದೊರೆಯಲಿದೆ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಓದಿ ತಿಳಿಯಲು ಸಮೃದ್ಧಿ.ಕಾಂ ಗೆ ಭೇಟಿ ನೀಡಿರಿ.
ಅರ್ಜಿ ಸಲ್ಲಿಸಲು ಈ ಕೆಳಗಿನ ವೆಬ್ಸೈಟ್ಗಳಿಗೆ ಭೇಟಿ ನೀಡಿ
– www.karnataka.gov.in/kmvstdcl.com
– samruddhiyojane.com
– kalyanakendra.com
Financial assistance to unemployed youths up to Rs 10 lakh from ‘Samrudhi’. samruddhiyojane.com