ಮಹಾತ್ಮ ಗಾಂಧಿಯವರು ನಮಗೆ ಸ್ವತಂತ್ರ ತಂದುಕೊಟ್ಟ ಪ್ರಮುಖರು ಎಂದಷ್ಟೇ ಗೊತ್ತಿದ್ದರೆ, ಅವರ ಬಗ್ಗೆ ಹೆಚ್ಚಾಗಿ ತಿಳಿದುಕೊಳ್ಳಬೇಕೆಂದರೆ ಅವರ ನುಡಿಮುತ್ತುಗಳನ್ನು ಕೇಳಿಸಿಕೊಂಡರೆ ಸಾಕು. ಅವರೆಂತ ಚಿಂತಕರು ಹಾಗೂ ಜೀವನವನ್ನು ಎಷ್ಟು ಸರಳವಾಗಿ ಬದುಕಬಹುದು ಎಂದು ಕಲಿಸುವ ಗುರುವಾಗಿ ಹೊರಹೊಮ್ಮುತ್ತಾರೆ. ನಮ್ಮ ಜೀವನದಲ್ಲಿ ಇವರ ಬಾಯಿಯಿಂದ ಹೊರಟ ನುಡಿಮುತ್ತುಗಳನ್ನು ಅಳವಡಿಸಿಕೊಂಡರೆ ನಮ್ಮ ಜೀವನ ಯಾವುದೇ ಏರಿಳಿತಗಳಿಲ್ಲದೆ ಸಾಗುತ್ತದೆ. ಅವರ ಮುತ್ತಿನ ಸರದಂತಿರುವ ನುಡಿಮುತ್ತುಗಳನ್ನು ನೋಡುವುದಾದರೆ.
• “ಮನುಷ್ಯ ಅವನ ಯೋಚನೆಗಳ ಉತ್ಪನ್ನವಾಗಿದ್ದಾನೆ. ಅವನ ಯೋಚನೆಯಂತೆ ಅವನಾಗುತ್ತಾನೆ.” – ಮಹಾತ್ಮ ಗಾಂಧಿ.
ಇದರ ಅರ್ಥ :- ಮನುಷ್ಯ ಯಾವ ರೀತಿ ಯೋಚನೆ ಮಾಡುತ್ತಾನೆ ಅದೇ ರೀತಿ ಅವನ ಏಳಿಗೆ ಆಗುತ್ತದೆ ಎಂಬುದು.
• “ನನ್ನ ಅನುಮತಿಯಿಲ್ಲದೆ ಯಾರು ನನ್ನನ್ನು ನೋಯಿಸಲಾರರು”. – ಮಹಾತ್ಮ ಗಾಂಧಿ.
ಇದರ ಅರ್ಥ :- ಯಾವುದಕ್ಕೂ ತಲೆಕೆಡಸಿಕೊಳ್ಳದೆ ತನ್ನ ಕೆಲಸ ಏನಿದೆಯೋ ಅದನ್ನ ಮಾಡಿಕೊಂಡು ಸಾಗಬೇಕು ಎಂದರ್ಥ.
• “ನೀವು ಏನು ಯೋಚಿಸುತ್ತಿರಿ, ಏನು ಮಾತಾಡುತ್ತಿರಿ, ಏನು ಮಾಡುತ್ತಿರಿ, ಎಂಬುದರ ಮೇಲೆ ನಿಮ್ಮ ಸಂತೋಷ ನಿರ್ಧಾರಿತವಾಗಿರುತ್ತದೆ – ಮಹಾತ್ಮ ಗಾಂಧಿ.
ಇದರ ಅರ್ಥ :- ನಿಮ್ಮ ಸಂತೋಷ ಜೀವನಕ್ಕೆ ಒಂದು ಸೂತ್ರವನ್ನು ಹೇಳಿದ್ದಾರೆ.
• “ದುರ್ಬಲರಿಗೆ ಬೇರೆಯವರನ್ನು ಕ್ಷಮಿಸುವ ಸಾಮರ್ಥ್ಯವಿರಲ್ಲ. ಕ್ಷಮೆ ಎಂಬುದು ಪ್ರಬಲರ ಲಕ್ಷಣವಾಗಿದೆ.” – ಮಹಾತ್ಮ ಗಾಂಧಿ.
ಇದರ ಅರ್ಥ :- ಯಾವತ್ತು ನಿಮ್ಮ ಜೀವದಲ್ಲಿ ನೀವು ದುರ್ಬಲರಾಗಬೇಡಿ ಎಂಬುದಾಗಿದೆ.
• “ಸಾವಿರ ಮಾತುಗಳಿಗಿಂತ ಒಂದು ಎಳ್ಳಷ್ಟು ಕೆಲಸಕ್ಕೆ ಬೆಲೆ ಜಾಸ್ತಿಯಿದೆ”. – ಮಹಾತ್ಮ ಗಾಂಧಿ.
ಇದರ ಅರ್ಥ :- ಜಾಸ್ತಿ ಮಾತಾಡುವುದನ್ನು ನಿಲ್ಲಿಸಿ ಕೆಲಸ ಮಾಡಿ ತೊರಿಸು ಇದರಲ್ಲಿ ನಿನ್ನ ಯಶಸ್ಸಿನ ಮಂತ್ರವಿದೆ ಎಂಬುದು.
• “ನೀವು ನಾಳೆ ಸಾಯುವವರಿದ್ದೀರಿ ಎಂಬಂತೆ ಬದುಕಿ. ಶಾಶ್ವತವಾಗಿ ಬದುಕುವುದು ಹೇಗೆ ಎಂಬುದನ್ನು ಕಲಿಯಿರಿ”. – ಮಹಾತ್ಮ ಗಾಂಧಿ.
ಇದರ ಅರ್ಥ :- ನಿಮ್ಮ ಜೀವನದಲ್ಲಿ ನನಗೆ, ನನ್ನ ಮಕ್ಕಳಿಗೆ, ನನ್ನ ಮೊಮ್ಮಕಳಿಗೆಂದು ಆಸ್ತಿ ಮಾಡದೇ, ನಿಮ್ಮ ಕೆಲಸದಲ್ಲಿ ಶ್ರಮವನ್ನು ಹಾಕಿ ನಾಳೆ ನಾನು ಸಾಯುವೆ ಎಂದಾಗ ಯಾವ ರೀತಿ ನಿಮ್ಮಲ್ಲಿ ಯೋಚನೆ ಬರುತ್ತೋ ಹಾಗೇ ಸ್ವತಂತ್ರವಾಗಿ ಬದುಕಿ ಎನ್ನುವುದೇ ಆಗಿದೆ.
• “ಸಂತೋಷವಿಲ್ಲದೆ ಸಲ್ಲಿಸುವ ಸೇವೆ ನಿರರ್ಥಕವಾಗಿದೆ. ಅದು ಸೇವಕನಿಗೂ ಸಹಾಯ ಮಾಡುವುದಿಲ್ಲ, ಮಾಲೀಕನಿಗೂ ಸಹಾಯ ಮಾಡುವುದಿಲ್ಲ” – ಮಹಾತ್ಮ ಗಾಂಧಿ.
ಇದರ ಅರ್ಥ :- ನೀನು ಮಾಡುವ ಕೆಲಸದಲ್ಲಿ ಎಷ್ಟು ಶ್ರದ್ಧೆ ಇದಿಯೋ ಅಷ್ಟೇ ಸಂತೋಷವಾಗಿ ನಿನ್ನ ಕೆಲಸವನ್ನು ಸೇವೆಯೆಂದು ಮಾಡು. ಅದನ್ನು ಬಿಟ್ಟು ಕೇವಲ ದುಡ್ಡಿಗಾಗಿ ಅದನ್ನ ಮಾಡಿದರೆ ಅದು ವ್ಯರ್ಥ ಎಂಬುದಾಗಿದೆ.
ಕೃಷ್ಣನ ತೊಡೆಯ ಮೇಲೆ ಪ್ರಾಣ ಬಿಟ್ಟ ರಾಧೆಯ ಕಥೆ..
• “ನೀವು ಸೌಮ್ಯ ರೀತಿಯಲ್ಲಿ ಈಡೀ ಜಗತ್ತನ್ನು ಅಲುಗಾಡಿಸಬಹುದು” – ಮಹಾತ್ಮ ಗಾಂಧಿ.
ಇದರ ಅರ್ಥ :- ನಿಮ್ಮಲ್ಲಿ ಎಷ್ಟೇ ಕೋಪ ಇರಲಿ, ಅಥವಾ ನಿಮ್ಮಲ್ಲಿ ಎಷ್ಟೆ ಜ್ಞಾನವಿರಲಿ ಅದನ್ನು ತೊರ್ಪಡಿಸಿಕೊಳ್ಳದೆ ಸೌಮ್ಯವಾಗಿದ್ದು, ನಿಮ್ಮ ಕೆಲಸವನ್ನು ಸಾಧಿಸಿದರೆ ಈಡೀ ಜಗತ್ತೆ ನಿಮ್ಮ ಮಾತನ್ನು ಕೇಳುವಂತೆ ಮಾಡಬಹುದು ಎಂದಾಗಿದೆ.
• “ಪಾಪವನ್ನು ದ್ವೇಷಿಸಿ, ಪಾಪಿಯನ್ನು ಪ್ರೀತಿಸಿ”. – ಮಹಾತ್ಮ ಗಾಂಧಿ.
ಇದರ ಅರ್ಥ :- ನಿಮ್ಮಲ್ಲಿರುವ ಪಾಪವನ್ನು ದ್ವೇಷ ಮಾಡಿ ಅದು ಮತ್ತೆ ಮರುಕಳಿಸದಂತೆ ನೋಡಿಕೊಳ್ಳಿ ಆದರೆ ನಿಮಗೆ ಮೋಸ ಮಾಡಿದ ಪಾಪಿಯನ್ನು ಪ್ರೀತಿಸಿ ಯಾಕೆಂದರೆ ಆ ಪಾಪಿಯಿಂದಲೇ ನೀವು ಪಾಠವನ್ನು ಕಲಿತಿರುವಿರೀ ಎಂದರ್ಥ.
• “ಇವತ್ತು ನೀವು ಏನು ಮಾಡುತ್ತೀರಿ ಎಂಬುದರ ಮೇಲೆ ನಿಮ್ಮ ನಾಳೆ ನಿಂತಿದೆ”. – ಮಹಾತ್ಮ ಗಾಂಧಿ.
ಇದರ ಅರ್ಥ :- ಇವತ್ತು ಮಾಡುವ ಉತ್ತಮ ಕೆಲಸ ನಿಮಗೆ ನಾಳೆಯಲ್ಲಿ ಪ್ರತಿಷ್ಠೆ, ಗೌರವ, ಕೀರ್ತಿಯನ್ನು ತಂದುಕೊಡುತ್ತದೆ. ಅದೇ ರೀತಿ ಮೋಸ, ವಂಚನೆಗಳಿಂದ ಮಾಡಿದ ಕೆಲಸ ನಾಳೆ ನಿಮಗೆ ಕಷ್ಠದ ರೂಪದಲ್ಲಿ ಸಿಗುತ್ತೆ. ಹಾಗಾಗೀ ಇಂದು ಆದಷ್ಟು ಒಳ್ಳೆಯ ಕೆಲಸವನ್ನೆ ಮಾಡಿ ಎಂಬುದಾಗಿದೆ.
ಮಕ್ಕಳಿಗಾಗಿ ಈ ಕತೆ : ಸೌಲಭ್ಯಕ್ಕಿಂತ ಸ್ವತಂತ್ರವೇ ಸುಖ
• “ಸ್ವಾಭಿಮಾನದ ನಷ್ಟಕ್ಕಿಂತ ದೊಡ್ಡ ನಷ್ಟ ಬೇರೋದಿಲ್ಲ”- ಮಹಾತ್ಮ ಗಾಂಧಿ.
ಇದರ ಅರ್ಥ :- ಎಲ್ಲಿಯು ನಿನ್ನ ಸ್ವಾಭಿಮಾನವನ್ನು ಬಿಡಬೇಡ, ಅದಕ್ಕಾಗಿಯೇ ಬದುಕು. ಅದನ್ನ ಕಳೆದುಕೊಂಡರೆ ನಿನ್ನನ್ನ ನೀನೇ ಕಳೆದುಕೊಂಡತೆ ಎಂಬುದಾಗಿದೆ.
• “ಪ್ರೀತಿ ಜಗತ್ತಿನ ಪ್ರಬಲವಾದ ಶಕ್ತಿಯಾಗಿದೆ” – ಮಹಾತ್ಮ ಗಾಂಧಿ.
ಇದರ ಅರ್ಥ :- ಜಗತ್ತಿನಲ್ಲಿ ಎಲ್ಲ ಶಕ್ತಿಗಳಿಗಿಂತ ಪ್ರೀತಿಯೇ ಬಲಿಷ್ಠವಾದ ಶಕ್ತಿ. ಇದನ್ನು ನೀನು ಯಾರ ಮೇಲೆ ಪ್ರಯೋಗ ಮಾಡಿದರು ನಿನಗೆ ಸೋಲೆಂಬುದೆ ಇಲ್ಲ ಎಂಬುದೇ ಇದರ ಒಳಾರ್ಥ.
• “ಅಹಿಂಸೆ ಶಕ್ತಿಶಾಲಿಗಳ ಅಸ್ತ್ರವಾಗಿದೆ” – ಮಹಾತ್ಮ ಗಾಂಧಿ.
ಇದರ ಅರ್ಥ :- ಜಗತ್ತಿನಲ್ಲಿ ಇರುವ ಎಲ್ಲ ರೀತಿ ಶಸ್ತ್ರಾಸ್ತ್ರಗಳನ್ನು ಒಂದು ತಕ್ಕಡಿಗೆ ಹಾಕಿದರೆ, ಇನ್ನೊಂದು ತಕ್ಕಡಿಯಲ್ಲಿ ಅಹಿಂಸೆಯನ್ನು ಹಾಕು ಆಗ ಅಹಿಂಸೆಯೇ ಹೆಚ್ಚು ತೂಗುತ್ತದೆ ಎಂಬುದಾಗಿದೆ.
ಹೀಗೆ ಮಹಾತ್ಮ ಗಾಂಧಿಯವರ ಒಂದೊಂದು ಮಾತುಗಳು, ಅವರ ಜ್ಞಾನಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದರೇ ತಪ್ಪಾಗಲಾರದು.
ಪಂಚತಂತ್ರ ಕಥೆಗಳು: ಮಕ್ಕಳಿಗೆ ಹೇಳಿ ಮೊಲ ಮತ್ತು ಸಿಂಹ, ತಕ್ಕಡಿ ತಿಂದ ಇಲಿಯ ಈ ಕಥೆ