ಪ್ರಿಯ ಓದುಗರೇ ನಿಮ್ಮ ಕನ್ನಡ ಅಡ್ವೈಜರ್ ಇಂದಿನಿಂದ ಸಾಮಾನ್ಯಜ್ಞಾನ ಪ್ರಶ್ನೆಗಳು ಮತ್ತು ಉತ್ತರಗಳನ್ನು ಪ್ರಕಟಿಸಲು ಆರಂಭಿಸುತ್ತಿದೆ. ಈ ಮಾಹಿತಿಗಳನ್ನು ಕನ್ನಡ ಅಡ್ವೈಜರ್ ವೆಬ್ಸೈಟ್ನಲ್ಲಿನ ಉದ್ಯೋಗ ಮಾಹಿತಿ ಅಂಡರ್ನಲ್ಲಿ ಇರುವ ಸ್ಟಡಿ ಮೆಟೀರಿಯಲ್ಸ್ ಸಬ್ ಕೆಟಗರಿಯಲ್ಲಿ ಓದಬಹುದು. ಕಂಪ್ಯೂಟರ್ನಲ್ಲಿ, ಲ್ಯಾಪ್ಗಳಲ್ಲಿ ಮಾತ್ರವಲ್ಲದೇ, ನೀವು ಇರುವ ಸ್ಥಳದಿಂದಲೇ ಸ್ಮಾರ್ಟ್ಫೋನ್ಗಳಲ್ಲಿ ಸಹ ಓದಬಹುದಾಗಿದೆ. ಸ್ಮಾರ್ಟ್ಫೋನ್ಗಳಲ್ಲಿ ಓದಲು ಅನುಕೂಲವಾಗುವಂತಹ ಥೀಮ್ ಅನ್ನು ಕನ್ನಡ ಅಡ್ವೈಸರ್ ಅಳವಡಿಸಿದೆ.
ಇಂದಿನ ಸಾಮಾನ್ಯಜ್ಞಾನ ಪ್ರಶ್ನೆಗಳು ಮತ್ತು ಉತ್ತರಗಳು ಈ ಕೆಳಗಿನಂತಿವೆ..
1. ದಕ್ಷಿಣ ಧ್ರುವದಲ್ಲಿ ಮಾತ್ರ ಕಂಡುಬರುವ ಹಕ್ಕಿ ಯಾವುದು?
ಉತ್ತರ : ಪೆಂಗ್ವಿನ್
2. ಸೂಕ್ಷ್ಮಜೀವಿಗಳು ಸೇವಿಸುವ ವಿಷವಸ್ತು ಯಾವುದು?
ಉತ್ತರ : ಟಾಕ್ಸಿನ್
3. ಪಿಷ್ಟದ ಪರೀಕ್ಷೇಯಲ್ಲಿ ಬಳಸುವ ದ್ರಾವಣ ಯಾವುದು?
ಉತ್ತರ : ಅಯೋಡಿನ್
4. ಸಸ್ಯದ ಜಲವಾಹಕ ಅಂಗಾಂಶ ಯಾವುದು?
ಉತ್ತರ : ಕ್ಸೈಲಂ
5. ಸೌರಸಾಧನಗಳಲ್ಲಿ ಬಳಸುವ ವಿಕಿರಣಗಳು ಯಾವುದು?
ಉತ್ತರ : ಅವಕೆಂಪು ಕಿರಣಗಳು
6. ನರವ್ಯೂಹದ ಬಗ್ಗೆ ಅಧ್ಯಯನ ಮಾಡುವುದನ್ನು ಏನೆನ್ನುವರು?
ಉತ್ತರ : ನ್ಯೂರಾಲಜಿ
7. ಸೂರ್ಯನ ಬೆಳಕು ಪ್ರವೇಶಿಸಲಾಗದ ನೀರಿನ ಭಾಗ ಯಾವುದು?
ಉತ್ತರ : ಅಬಿಸ್
8. ಸೂಕ್ಷ್ಮಾಣು ಜೀವಿಗಳ ಬಗ್ಗೆ ಮೊದಲಿಗೆ ಜಗತ್ತಿಗೆ ಗಮನ ಸೆಳೆದವನು ಯಾರು?
ಉತ್ತರ : ಲೂಯಿ ಪಾಶ್ಚರ್
9. ಪೋಲಿಯೋ ವ್ಯಾಕ್ಸಿನ್ ಕಂಡುಹಿಡಿದವರು ಯಾರು?
ಉತ್ತರ : ಜೋನಾಸ್ ಸ್ಯಾಕ್
10. ಪ್ರಕೃತಿಯಲ್ಲಿ ಅತಿ ಹೆಚ್ಚಾಗಿ ದೊರೆಯುವ 2ನೇ ದೊಡ್ಡ ಪ್ರಮಾಣದ ಅಲೋಹ ಯಾವುದು?
ಉತ್ತರ : ಸಿಲಿಕಾನ್
11 ನ್ಯೂಟ್ರಾನ್ನ ಕಂಡುಹಿಡಿದ ವಿಜ್ಞಾನಿ ಯಾರು?
ಉತ್ತರ : ಜೇಮ್ಸ್ ಚಾಡ್ವಿಕ್
12. ಲೋಹಗಳನ್ನು ತಂತಿಗಳನ್ನಾಗಿ ಎಳೆಯುವಿಕೆಗೆ ಎನೆನ್ನುವರು?
ಉತ್ತರ : ತಾಂತವತೆ
13. ಅದಿರಿನಲ್ಲಿರುವ ಬೇಡವಾದ ಪದಾರ್ಥ ಯಾವುದು?
ಉತ್ತರ : ಮಡ್ಡಿ
14. ಒಂದೇ ಅಣುಸೂತ್ರವಿರುವ ಆದರೆ ಬೇರೆ ಬೇರೆ ರಚನಾ ಸೂತ್ರವಿರುವ ಸಂಯುಕ್ತಗಳಿಗೆ ಎನೆನ್ನುವರು?
ಉತ್ತರ : ಸಮಾಂಗಿಗಳು
15. ಸಮುದ್ರದಲ್ಲಿ ಹೇರಳವಾಗಿ ಸಿಗುವ ಲವಣ ಯಾವುದು?
ಉತ್ತರ : ಸೋಡಿಯಂ ಲವಣ
16. ಪಾದರಕ್ಷೆಗಳ ಅಡ್ಡೆಗಳನ್ನು ತಯಾರಿಸಲು ಉಪಯೋಗಿಸುವ ಪಾಲಿಮರ್ ಯಾವುದು?
ಉತ್ತರ : ಪಾಲಿವಿನೈಲ್ ಕ್ಲೋರೈಡ್
17. ಅಶ್ರುವಾಯು ಇದರ ರಾಸಾಯನಿಕ ಹೇಸರೇನು?
ಉತ್ತರ : ಫೀನಾಸಿಲ್ ಕ್ಲೋರೈಡ್
18. ಮೂಲ ವಸ್ತುಗಳನ್ನು ಸೂಚಿಸಲು ಯಾವ ಸಂಕೇತವನ್ನು ಬಳಸುತ್ತಾರೆ?
ಉತ್ತರ : ರಾಸಾಯನಿಕ ಸಂಕೇತ
19. ಹಕ್ಕಿಗಳ ಅತ್ಯಂತ ಹಳೆಯ ಪಳೆಯುಳಿಕೆ ಹಕ್ಕಿ ಯಾವುದು?
ಉತ್ತರ : ಅರ್ಕಿಯೋಪೆರಿಕ್ಸ್
20. ಮಾನವನ ದೇಹದಲ್ಲಿರುವ ಅತ್ಯಂತ ಚಿಕ್ಕ ಗ್ರಂಥಿ ಯಾವುದು?
ಉತ್ತರ : ಪಿಟ್ಯುಟರಿ ಗ್ರಂಥಿ
21. ವಿಕ್ರಂ ಸಾರಾಬಾಯಿಯವರು ವಿಜ್ಞಾನದ ಯಾವ ಕ್ಷೇತ್ರಕ್ಕೆ ಕೊಡುಗೆ ನೀಡಿದ್ದಾರೆ?
ಉತ್ತರ : ವ್ಯೋಮ ಸಂಶೋಧನೆ
22. ಅನುವಂಶೀಯತೆಯ ನಿಯಮಗಳನ್ನು ಪ್ರತಿಪಾದಿಸಿದವರು ಯಾರು?
ಉತ್ತರ : ಮೆಂಡಲ್
23. ನೈಟ್ರೋಜನ್ ಸ್ಥೀರಿಕರಣದಲ್ಲಿ ಭಾಗಿಯಾಗುವ ಬ್ಯಾಕ್ಟೀರಿಯಾ ಯಾವುದು?
ಉತ್ತರ : ರೈಜೋಬಿಯಂ
24. ಪ್ರಾಣಿಗಳಲ್ಲಿ ಮೂಳೆಗಳ ಹಾಗೂ ದಂತಗಳ ಬೆಳವಣಿಗೆಯಲ್ಲಿ ಅಗತ್ಯವಾದ ಮೂಲವಸ್ತು ಯಾವುದು?
ಉತ್ತರ : ರಂಜಕ
25. ಕಬ್ಬಿಣ ಮತ್ತು ಜೀವಸತ್ವ 12ರ ನ್ಯೂನತೆಯಿಂದ ಬರುವಂತಹ ರೋಗ ಯಾವುದು?
ಉತ್ತರ : ರಕ್ತಹೀನತೆ
Kannadaadvisor giving General Knowledge information for competitive exam seekers to read in kannada from today.