ಕನ್ನಡಿಗರಾದ ನಾವು ಕರ್ನಾಟಕದ ಇತಿಹಾಸ, ಭೂಪ್ರದೇಶ, ರಾಜ್ಯ ಹುಟ್ಟಿ ಬೆಳೆದದ್ದು, ರಾಜಕೀಯ, ಸಾಮಾಜಿಕ ಮತ್ತು ಭೌಗೋಳಿಕ ವ್ಯಾಪ್ತಿಯನ್ನು ಸಾಧ್ಯವಾದಷ್ಟು ತಿಳಿದಿರಬೇಕು. ಅದನ್ನು ತಿಳಿಯುವುದು ಅರಿವು ಎನ್ನುವುದಕ್ಕಿಂತ ಹೆಮ್ಮೆ ಪಡುವಂತಹ ವಿಷಯ. ಹೌದು, ಎನ್ನುವುದೇ ಆದರೆ ಇದೋ ಈ ಕೆಳಗೆ ಕರ್ನಾಟಕದ ಶ್ರೀಮಂತಿಕೆ ಮತ್ತು ಇತಿಹಾಸ ತಿಳಿಸುವ ಕೆಲವು ಪ್ರಮುಖ ಅಂಶಗಳನ್ನು ನೀಡಲಾಗಿದೆ. ಓದಿಕೊಳ್ಳಿ..
ಕರ್ನಾಟಕದ ಒಂದು ಪಕ್ಷಿನೋಟ
1.ರಾಜ್ಯಪಕ್ಷಿ – ನೀಲಕಂಠ(ಇಂಡಿಯನ್ ರೋಲರ್)
2.ರಾಜ್ಯ ಪ್ರಾಣಿ – ಆನೆ
3.ರಾಜ್ಯ ವೃಕ್ಷ – ಶ್ರೀಗಂಧ
4.ರಾಜ್ಯಪುಷ್ಪ – ಕಮಲ
5.ನಾಡಗೀತೆ – ಜಯಭಾರತ ಜನನಿಯ ತನುಜಾತೆ(ಕುವೆಂಪು ರವರ ರಚನೆ)
6.ಕರ್ನಾಟಕ ಸರ್ಕಾರದ ಚಿನ್ಹೆ – ಗಂಡಭೇರುಂಡ
7.ಗಂಡಭೇರುಂಡ ಎರಡು ತಲೆಗಳನ್ನು ಹೊಂದಿರುವ ಕಾಲ್ಪನಿಕ ಪಕ್ಷಿಯಾಗಿದೆ.
8.ಭಾರತದಲ್ಲಿ ಅತಿ ಹೆಚ್ಚು ಶ್ರೀಗಂಧದ ಮರಗಳನ್ನು ಬೆಳೆಯುವ ರಾಜ್ಯ – ಕರ್ನಾಟಕ
9.ಕರ್ನಾಟಕದ ಮೊದಲ ನಾಡಗೀತೆ – ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು(ಹುಯಿಲಗೋಳ ನಾರಾಯಣರಾವ ರವರ ರಚನೆ)
10.ಕರ್ನಾಟಕ ಚಲನಚಿತ್ರ ಮಂಡಳಿಯ ಹೆಸರು – ಸ್ಯಾಂಡಲ್ವುಡ್.
11.ಕರ್ನಾಟಕ ದ್ವಿಸದನ ವ್ಯವಸ್ಥೆ ಹೊಂದಿದೆ.
12.ವಿಧಾನಸಭೆಯ ಸದಸ್ಯರ ಸಂಖ್ಯೆ – 225.
13.ವಿಧಾನ ಪರಿಷತ್ ಸದಸ್ಯರ ಸಂಖ್ಯೆ – 75
14.ಕರ್ನಾಟಕದಿಂದ ಲೋಕಸಭೆಗೆ ಆಯ್ಕೆಯಾಗುವ ಸಂಸದರ ಸಂಖ್ಯೆ – 28
15.ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗುವ ಸಂಸದರ ಸಂಖ್ಯೆ – 12
16.ಭಾರತದಲ್ಲಿಯೇ ಪ್ರಥಮಬಾರಿಗೆ ಹಿಂದುಳಿದ ವರ್ಗಗಳ ಆಯೋಗವೊಂದನ್ನು ನೇಮಿಸಿದ್ದು ಮೈಸೂರು ರಾಜ್ಯ – 1918 ರಲ್ಲಿ ಮಿಲ್ಲರ್ ಆಯೋಗದಲ್ಲಿ.
17.ಮೊದಲ ರಾಜ್ಯಪಾಲ – ಜಯಚಾಮರಾಜೇಂದ್ರ ಒಡೆಯರ್
18.ಮೊದಲ ಮುಖ್ಯಮಂತ್ರಿ – ಕೆ.ಚಂಗಲರಾಯರೆಡ್ಡಿ
19.ಏಕೀಕೃತ ಕರ್ನಾಟಕದ ಮೊದಲ ಮುಖ್ಯಮಂತ್ರಿ – ಎಸ್. ನಿಜಲಿಂಗಪ್ಪ
20.ವಿಧಾನಸಭೆಯ ಮೊದಲ ಸಭಾಪತಿ – ವಿ. ವೆಂಕಟಪ್ಪ
21.ವಿಧಾನಸಭೆಯ ಏಕೈಕ ಮಹಿಳಾ ಸಭಾಪತಿ – ಕೆ.ಎಸ್.ನಾಗರತ್ನಮ್ಮ
22.ಕರ್ನಾಟಕ ಹೈಕೋರ್ಟ್ನ ಮೊದಲ ಮುಖ್ಯ ನ್ಯಾಯಧೀಶ – ಆರ್. ವೆಂಕಟರಾಮಯ್ಯ
23.ಭಾರತದ ಉಪಗ್ರಹ ನಿಯಂತ್ರಣ ಕೇಂದ್ರ ಇರುವುದು – ಹಾಸನ
24.ಭಾರತದಲ್ಲಿ ಕಾಫಿ ಹಾಗೂ ಮೆಣಸು ಉತ್ಪಾದನೆಯಲ್ಲಿ ಕರ್ನಾಟಕದ ಸ್ಥಾನ – ಪ್ರಥಮ ಸ್ಥಾನ